ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ತತ್ವ, ಚಿಂತನೆ ಪಾಲನೆ: ಕಟ್ಟಿಮನಿ ಸಲಹೆ

Last Updated 22 ಮೇ 2017, 5:37 IST
ಅಕ್ಷರ ಗಾತ್ರ

ಕಲಬುರ್ಗಿ: ‘ಡಾ. ಬಿ.ಆರ್‌. ಅಂಬೇಡ್ಕರ್‌ ಅವರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಬದಲು ವಿಶಾಲ ದೃಷ್ಟಿಕೋನದಿಂದ ನೋಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಲೇಖಕ ಚಂದ್ರಶೇಖರ ಕಟ್ಟಿಮನಿ ಸಲಹೆ ನೀಡಿದರು.

ಇಲ್ಲಿನ ಕನ್ನಡ ಭವನದಲ್ಲಿ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕಲ್ಯಾಣ ಸಂಘ ಭಾನುವಾರ ಏರ್ಪಡಿಸಿದ್ದ ಪ್ರಥಮ ವಲಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮತ್ತು ದಮನಿತರ ಏಳ್ಗೆಯಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆ ಅಲ್ಲಗಳೆಯಲಾಗದು’ ಎಂದರು.

‘ಯುವಜನರಿಗೆ ಮತದಾನದ ಹಕ್ಕು, ಕಾರ್ಮಿಕರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯ, ಮಹಿಳೆಯರಿಗೆ ಸ್ವಾವಲಂಬಿ ಗಳಾಗಿ ಬದುಕಲು ಮಾರ್ಗದರ್ಶನ ಮುಂತಾದ ವಿಷಯಗಳಲ್ಲಿ ಅಂಬೇಡ್ಕರ್‌ ಅವರು ಪ್ರಮುಖ ನಿರ್ಣಯಗಳನ್ನು ಕೈಗೊಂಡರು. ಪ್ರಜಾಪ್ರಭುತ್ವ ವ್ಯವಸ್ಥೆ ಯಡಿ ಎಲ್ಲರಿಗೂ ಹಕ್ಕು ದೊರಕಿಸಲು ಯತ್ನಿಸಿದರು’ ಎಂದು ತಿಳಿಸಿದರು.

‘ಮನೆಯಲ್ಲಿ ಬಡತನ ಮತ್ತು ಶೈಕ್ಷಣಿಕ ವಾತಾವರಣ ಇರದಿದ್ದರೂ ಅಂಬೇಡ್ಕರ್ ಅತಿ ಹೆಚ್ಚು ಅಧ್ಯಯನ ನಡೆಸಿದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಎಲ್ಲರೂ ಶಿಕ್ಷಿತರಾಗ ಬೇಕೆಂದು ಬಯಸಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಸೌಲಭ್ಯ ತಲು ಪಿದಾಗಲೇ ಸರ್ಕಾರಿ ಯೋಜನೆ ಯಶಸ್ವಿ ಯಾಗುತ್ತದೆ ಎಂಬುದು ಅವರ ಅಚಲ ನಂಬಿಕೆಯಾಗಿತ್ತು’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರ ಆರಾಧನೆ ಅಥವಾ ನಾಮಸ್ಮರಣೆಯಷ್ಟೇ ಸಾಲದು. ಅವರ ವಿಚಾರ, ಚಿಂತನೆ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಲು ಪ್ರಯತ್ನಿಸಬೇಕು. ಅವರ ಆಶಯಗಳನ್ನು ನನಸು ಮಾಡಲು ಬದ್ಧತೆ ತೋರಬೇಕು. ಅಂಬೇಡ್ಕರ್ ಅವರ ನೆನಪಿನಲ್ಲಿ ಸಮಾಜದ ಹಿತದೃಷ್ಟಿಯಿಂದ ಸಾರ್ಥಕ ಕಾರ್ಯ ಕೈಗೊಳ್ಳಬೇಕು’ ಎಂದರು.

ರಾಯಚೂರು ಕೃಷಿ ವಿಶ್ವವಿದ್ಯಾಲ ಯದ ಪ್ರಾಧ್ಯಾಪಕಿ  ಪ್ರೊ.ಜಾಗೃತಿ ಬಿ.ದೇಶಮಾನೆ ಮಾತನಾಡಿ, ‘ಅಂಬೇಡ್ಕರ್ ಅವರ ಕುರಿತು ಅಳವಾಗಿ ಅಧ್ಯಯನ ನಡೆಸಿದಷ್ಟು ಹಲವು ವಿಷಯಗಳ ಕುರಿತು ಜ್ಞಾನ ವೃದ್ಧಿಯಾಗುತ್ತದೆ’ ಎಂದರು.

ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಶಂಕರ ಪ್ರಸಾದ ಮಾತನಾಡಿ, ‘ಸಂಘದ ಸದಸ್ಯರು ಉತ್ತಮ ರೀತಿಯಲ್ಲಿ ಸಮಾಜ ಮುಖಿ ಚಟುವಟಿಕೆ ಕೈಗೊಳ್ಳಬೇಕು. ಬ್ಯಾಂಕ್‌ನ ಚಟುವಟಿಕೆ ಜತೆಯಲ್ಲೇ ಉತ್ತಮ ಸಮಾಜ ನಿರ್ಮಾಣ ಕಟ್ಟುವ ಕಾರ್ಯದಲ್ಲೂ ಸಹ ತೊಡಗಿಕೊಳ್ಳ ಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿ ಸಬೇಕು’ ಎಂದರು. ಸಂಘದ ಅಧ್ಯಕ್ಷ ಡಿ.ವಿ.ಜಯರಾಜ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT