ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟಾರು ಕಾಯ್ದೆ ತಿದ್ದುಪಡಿಗೆ ಸಮ್ಮತಿ: ಮನವಿ

Last Updated 22 ಮೇ 2017, 5:37 IST
ಅಕ್ಷರ ಗಾತ್ರ

ಕೊಪ್ಪ: ಕಾರ್ಮಿಕರೇ ಮಾಲೀಕರಾಗಿ ಆಡಳಿತ ನಡೆಸುತ್ತಿರುವ ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳವಾರ ಭೇಟಿ ಸಂಸ್ಥೆಯ ಕಾರ್ಯ ವಿಧಾನಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್.ಧರ್ಮಪ್ಪ ಮಾತನಾಡಿ, ‘1991ರಲ್ಲಿ 36 ಕಾರ್ಮಿಕರು, 6 ಬಸ್‌ಗಳೊಂದಿಗೆ ಆರಂಭಗೊಂಡ ಸಂಸ್ಥೆ ಇಂದು 400 ಕಾರ್ಮಿಕರು, 76 ಬಸ್ಸುಗಳನ್ನು ಹೊಂದಿದ್ದು, ಈ ಭಾಗದ ಶೇ 80ರಷ್ಟು ಸಾರಿಗೆ ಸೇವೆ ಒದಗಿ ಸುತ್ತಿದೆ’ ಎಂದರು.

‘ಇಂದಿನ ತಾಂತ್ರಿಕ ಹಾಗೂ ಕಾನೂನು ತೊಡಕಿನಿಂದಾಗಿ ಸಂಸ್ಥೆ ಯನ್ನು ಯಶಸ್ವಿಯಾಗಿ ಮುನ್ನಡೆಸಲು ಕಷ್ಟವಾಗಿದ್ದು, ಸಹಕಾರ ಸಂಘಗಳಿಗೆ ಕೆಎಸ್‍ಆರ್‌ಟಿಸಿ ನಂತರದ ಪ್ರಾತಿನಿಧ್ಯ ಕಲ್ಪಿಸುವ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್ 71 ಮತ್ತು 74ರನ್ವಯ ಕೆಎಸ್‍ಆರ್‌ಟಿಸಿ ಮಾರ್ಗಗಳಲ್ಲಿ ಸಹಕಾರ ಸಾರಿಗೆ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಬೇಕು.

ಕಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆ ಮಂಜೂರಾತಿಯಲ್ಲಿ ನಮಗೂ ಪ್ರಾತಿನಿಧ್ಯ ನೀಡಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ದೈನಂದಿನ ಕಲೆಕ್ಷನ್ ಆಧಾರದ ಮೇಲೆ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ಸಂಸ್ಥೆಯು ಪ್ರತೀವರ್ಷ ವಿದ್ಯಾರ್ಥಿ ಗಳು, ವಯೋವೃದ್ದರು, ಅಂಗವಿಕಲರು, ಸ್ವಾತಂತ್ರ್ಯ ಯೋಧರು ಸೇರಿದಂತೆ ವಾರ್ಷಿಕ ರೂ 20 ಸಾವಿರಕ್ಕೂ ಅಧಿಕ ಮಂದಿಗೆ ಉಚಿತ ಹಾಗೂ ರಿಯಾಯಿತಿ ದರದ ಪಾಸ್ ನೀಡುತ್ತಿದ್ದು, ರಿಯಾಯಿತಿಗೆ ಸಂಬಂಧಿಸಿದಂತೆ ಕೆಎಸ್‍ ಆರ್‍ಟಿಸಿ ಮಾದರಿಯಲ್ಲಿ ಆರ್ಥಿಕ ನಷ್ಟ ತುಂಬಿಕೊಡಲು ಪ್ರೋತ್ಸಾಹಧನ ನೀಡ ಬೇಕು.

ದೈನಂದಿನ ನಿರ್ವಹಣೆಗೆ ಸಹ ಕಾರಿ ಇನ್ನಿತರ ಬ್ಯಾಂಕುಗಳಿಂದ ಪಡೆ ಯುವ ಹಣಕ್ಕೆ ಹೆಚ್ಚಿನ ಬಡ್ಡಿ ಬೀಳುತ್ತಿ ರುವುದರಿಂದ ನಮ್ಮ ಸಂಸ್ಥೆಯನ್ನು ವಿಶೇಷವಾಗಿ ಪರಿಗಣಿಸಿ ನೇರವಾಗಿ ಅಪೆಕ್ಸ್ ಬ್ಯಾಂಕ್, ನಬಾರ್ಡ್ ಮತ್ತು ಎನ್‍ಸಿಡಿಸಿ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ನಿರಂತರ ಆರ್ಥಿಕ ನೆರವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಚಿವ ಪರಮೇಶ್ವರ್ ಮಾತನಾಡಿ, ಕಾರ್ಮಿಕರೇ ನಡೆಸುತ್ತಿರುವ ವಿಶಿಷ್ಟ ಸಂಸ್ಥೆಯಾಗಿರುವ ಸಹಕಾರ ಸಾರಿಗೆಯ ಬೆಳವಣಿಗೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದ್ದು, ಸಂಸ್ಥೆಯ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಚಿವ ಪರಮೇಶ್ವರ್ ಅವರನ್ನು ಸಹಕಾರ ಸಾರಿಗೆ ಬಳಗದ ಪರವಾಗಿ ಸನ್ಮಾನಿಸಲಾಯಿತು. ರಾಜ್ಯ ಅರಣ್ಯ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್, ಎಸ್‌ಪಿ ಕೆ. ಅಣ್ಣಾಮಲೈ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ.ಡಿ.ರಾಜೇಗೌಡ, ಎಚ್.ಎಂ. ಸತೀಶ್, ಹಾಲಿ ಸದಸ್ಯ ಪಿ.ಆರ್. ಸದಾಶಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್. ವಿಜಯಕುಮಾರ್, ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗ, ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್, ಸಹಕಾರ ಸಾರಿಗೆ ವ್ಯವಸ್ಥಾಪಕ ನಿದೇರ್ಶಶಕ ಗಾಡ್ವಿನ್ ಜಯಪ್ರಕಾಶ್, ನಿರ್ದೇಶಕರಾದ ಬಿ.ಎನ್. ಮಹೇಶ್, ಜಿ.ಆರ್. ವಿಶ್ವನಾಥ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT