ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಬಲವರ್ಧನೆಗೆ ಮುಂದಾಗಲು ಸಲಹೆ

Last Updated 22 ಮೇ 2017, 6:17 IST
ಅಕ್ಷರ ಗಾತ್ರ

ಚಾಮರಾಜನಗರ: ಪಂಡಿತ್ ದೀನ್‌ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಕಾರ್ಯವಿಸ್ತಾರ ಯೋಜನೆಗಳನ್ನು ಕಾರ್ಯಕರ್ತರು ಪ್ರತಿ ಮನೆಗೆ ತಲುಪಿ ಸುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಸಲಹೆ ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಜವಾಬ್ದಾರಿ ಹೊತ್ತಿರುವ ಪ್ರತಿಯೊಬ್ಬರೂ ಕಾರ್ಯಕಾರಣಿಯಲ್ಲಿ ಭಾಗವಹಿಸುವ ಮೂಲಕ ಪಕ್ಷದ ಕಾರ್ಯಸೂಚಿಗಳನ್ನು ಪಾಲನೆ ಮಾಡಬೇಕು. ಚುನಾವಣೆ ಹತ್ತಿರವಾಗುತ್ತಿದ್ದು, ಪಕ್ಷದ ವರಿಷ್ಠರು ಸೂಚಿಸುವ  ಕಾರ್ಯಕ್ರಮಗಳಲ್ಲಿ ಭಾಗ ವಹಿಸಿ ಯಶಸ್ವಿಯಾಗುವಂತೆ ನೋಡಿ ಕೊಳ್ಳಬೇಕು. ಕೇಂದ್ರ ಸರ್ಕಾರದ ಮಹ ತ್ವಾಕಾಂಕ್ಷಿ ಯೋಜನೆಗಳು ಪ್ರತಿ ಮತ ದಾರರಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಕಾರ್ಯಕರ್ತರದು ಎಂದರು.

ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಕಾರ್ಯವಿಸ್ತಾರ ಯೋಜನೆ ಗಳಾದ  ಬೂತ್ ಅಧ್ಯಕ್ಷ, ಕಾರ್ಯದರ್ಶಿ, ಮಹಿಳಾ ಪ್ರತಿನಿಧಿ, ಬೂತ್ ಪ್ರಭಾರಿಗಳ ಸಮಾವೇಶ ನಡೆಸಬೇಕು. ಅಲ್ಪಾವಧಿ ವಿಸ್ತಾರಕರು ಮಹಾಸಂಪರ್ಕ ಅಭಿ ಯಾನದ ಮೂಲಕ ಕೇಂದ್ರದ ಸಾಧನೆ ಯನ್ನು ಪ್ರಚುರ ಪಡಿಸಬೇಕು.

ಸ್ತ್ರೀಶಕ್ತಿ ಸಮಾವೇಶಗಳು, ವೃಕ್ಷಾರೋಹಣ,  ಆರೋಗ್ಯ ಮೇಳಗಳನ್ನು ಹಮ್ಮಿಕೊಳ್ಳ ಬೇಕು. ಕ್ಷೇತ್ರವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗಳನ್ನು ನಡೆಸಬೇಕು. ದೀನ್‌ದಯಾಳರ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಆಯೋಜಿಸುವುದು ಮತ್ತು ಅವರ ಸಾಹಿತ್ಯವನ್ನು ಓದುವ ಮೂಲಕ ಇತರರಿಗೆ ಅವರ ಸಾಧನೆ ಯನ್ನು ತಿಳಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು.

ಮಂಡಲದ ಅಧ್ಯಕ್ಷ ಸುಂದ್ರಪ್ಪ ಮಾತನಾಡಿ, ಈಗಾಗಲೇ ಮಂಡಲ ವ್ಯಾಪ್ತಿಯಲ್ಲಿ ಶಕ್ತಿ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಯಕ್ರಮಗಳು ಆಯಾ ಶಕ್ತಿ ಕೇಂದ್ರಗಳಲ್ಲಿಯೇ ನಡೆಯಲಿವೆ ಎಂದು ತಿಳಿಸಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಹೊನ್ನಹಳ್ಳಿ ಪುರುಷೋತ್ತಮ್, ಜೆ.ಎಂ.ಮರಿಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅಮಚವಾಡಿ ಚಂದ್ರ ಶೇಖರ್, ಆಲೂರು ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಬಾಲ ರಾಜು, ಸಿ.ಎನ್.ಬಾಲರಾಜು, ಚಂದ್ರಕಲಾ ಚಂದ್ರಶೇಖರ್, ಜಿಲ್ಲಾ ಪ್ರಭಾರಿ ಮಂಗಳಮ್ಮ, ಜಯಶೀಲಾ ರಾಜಶೇಖರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕುಲಗಾಣ ಶಾಂತ ಮೂರ್ತಿ,  ಆಶಾ, ರತ್ನಮ್ಮ, ಜಿ.ಬಸವಣ್ಣ, ಕೆ. ಮಹದೇವಯ್ಯ, ಮಹದೇವಸ್ವಾಮಿ, ಪಿ.ವೃಷಭೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT