ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲ

Last Updated 22 ಮೇ 2017, 6:55 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಹೋರಾಟಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಇದು ಈ ಭಾಗದಲ್ಲಿ ಹರಿಯಲೇಬೇಕು ಎಂದು ಒಮ್ಮತದ ಅಭಿಪ್ರಾಯವೂ ಇದೆ. ಆದರೆ ಇದಕ್ಕೆ ಜನಪ್ರತಿನಿಧಿಗಳ ಬೆಂಬಲಬೇಕು ಅವರು ನುಡಿದಂತೆ ನಡೆಯಬೇಕು. ಮುಖ್ಯಮಂತ್ರಿ ಹಾಗೂ ಪ್ರಧಾನಿ ರೈತರ ಒತ್ತಾಸೆಗೆ ಸ್ಪಂದಿಸಬೇಕೆಂದು ಮಹಾ ದಾಯಿ ಹೋರಾಟ ಸಮಿತಿ ಉಪಾ ಧ್ಯಕ್ಷ ಪರಶುರಾಮ ಜಂಬಗಿ ಒತ್ತಾಯಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 676ನೇ ದಿನವಾದ  ಭಾನುವಾರ ಮಾತನಾಡಿದರು. ಹೋರಾಟದ ಆರಂಭದಲ್ಲಿ ಹಾಲಿ, ಮಾಜಿ ಶಾಸಕ, ಸಚಿವರು ಸ್ಪಂದಿಸಿದ್ದರು. ಆದರೆ, ಈಗ ಅವರು ಮೊದಲು ಆಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಜನ ಪ್ರತಿನಿಧಿಗಳ ಮಾತು ಬರಿ ಭರವಸೆ ಆಗಿ ಉಳಿದಿದೆ. ಇದರಿಂದಾಗಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲು ನಿರ್ಧ ರಿಸಲಾಗಿದೆ ಎಂದರು.

ಚಂದ್ರಗೌಡ ಪಾಟೀಲ ಮಾತನಾಡಿ, ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಕೆಲವು ರೈತರು ಕೆಲ ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿ ದ್ದಾರೆ. ಅವರು ರಾಜಕೀಯ ಪಕ್ಷಗಳನ್ನು ತೊರೆದು  ಹೋರಾಟದಲ್ಲಿ ಮುನ್ನಡೆಯ ಬೇಕು. ಆಗ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತದೆ. ನಂತರ ರಾಜಕೀಯವನ್ನು ಮಣಿಸಲು ಸಾಧ್ಯವಾಗುತ್ತದೆ ಎಂದರು.

ಮಹಾದಾಯಿ ವಿವಾದ ನ್ಯಾಯ ಮಂಡಳಿ ಮುಂದೆ ಇದೆ. ಕರ್ನಾಟಕಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಕ್ರಮ ಕೈಗೊಂಡು ಮುಖ್ಯಮಂತ್ರಿ ರೈತರ ಬವ ಣೆಗೆ ಸ್ಪಂದಿಸಿ, ಪ್ರಧಾನಿ ಮೇಲೆ ಒತ್ತಡ ಹೇರಲು ಮತ್ತೊಮ್ಮೆ ದೆಹಲಿಗೆ ನಿಯೋಗ  ಒಯ್ಯಬೇಕೆಂದು ಆಗ್ರಹಿಸಿದರು.  

ಎಸ್‌.ಬಿ.ಜೋಗಣ್ಣವರ, ಜಗನ್ನಾಥ ಮುಧೋಳೆ, ಯಲ್ಲಪ್ಪ ಚಲುವಣ್ಣವರ, ಕಲ್ಲಪ್ಪ ಮೊರಬದ, ಚನ್ನಪ್ಪಗೌಡ ಪಾಟೀಲ,   ಗುರಪ್ಪ ಸೊಪ್ಪಿನ, ಕಾಡಪ್ಪ ಕಾಕನೂರ,  ಚನ್ನಬಸು ಹುಲಜೋಗಿ, ಎಚ್‌.ಎನ್‌.ಕೋರಿ,  ವಾಸು ಚವ್ಹಾಣ,  ಎಸ್‌.ಕೆ.ಗಿರಿಯಣ್ಣವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT