ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕರಣದ ಚಳವಳಿ ಪ್ರಸ್ತುತ

60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಎಸ್‌.ಬಿ. ಶಂಕರಗೌಡ ಅಭಿಪ್ರಾಯ
Last Updated 22 ಮೇ 2017, 7:06 IST
ಅಕ್ಷರ ಗಾತ್ರ

ಮಂಡ್ಯ: ‘ಕನ್ನಡ ಪ್ರೇಮಿಗಳು 60 ವರ್ಷ ಗಳ ಹಿಂದೆ ಹೋರಾಟ ಮಾಡಿದ ಫಲ ವಾಗಿ ಕರ್ನಾಟಕ ರಾಜ್ಯ ಏಕೀಕರಣವಾ ಯಿತು. ಈ ಘಟನೆ ಕರ್ನಾಟಕದ ಇತಿಹಾಸದಲ್ಲಿ ಅವಿಸ್ಮರಣೀಯ’ ಎಂದು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಎಸ್‌.ಬಿ.ಶಂಕರಗೌಡ ಸ್ಮರಿಸಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಬಿಎಲ್ಎಸ್‌ ಸಮೂಹ ಶಿಕ್ಷಣ ಸಂಸ್ಥೆಯಿಂದ ಶನಿವಾರ ನಡೆದ ಕರ್ನಾಟಕ ಏಕೀಕರಣ 60ನೇ ವರ್ಷಾಚರಣೆ, ಅಭಿನಂದನಾ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಗ್ರ ಕರ್ನಾಟಕ ರಾಜ್ಯ ಒಟ್ಟು ಗೂಡಿಸಲು ಅವಿರತವಾಗಿ ಹೋರಾಟ ಮಾಡಿದ ಸಾಹಿತಿಗಳು, ಕಲಾವಿದರ ಸೇವೆ ಮರೆಯಲು ಸಾಧ್ಯವಿಲ್ಲ. ಆ ಹೋರಾಟಗಳು ಪ್ರಸ್ತುತವಾಗಿ ನಿಲ್ಲುತ್ತವೆ. ಇಷ್ಟೆಲ್ಲ ಹೋರಾಟ ಮಾಡಿದರೂ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದು ವಿಷಾದನೀಯ’ ಎಂದು ಹೇಳಿದರು.

‘ಏಕೀಕರಣದ ಹೋರಾಟದಲ್ಲಿ ಕನ್ನಡ ಸಾಹಿತ್ಯ ಏಕೀಕರಣ ಚಳ ವಳಿಯೂ ನಡೆಯಿತು. ಹೋರಾಟದ ರೂಪದಲ್ಲಿ ಹೊಸ ಕವನ, ಕತೆ, ಕಾವ್ಯ, ರೂಪಕಗಳು ಹುಟ್ಟಿಕೊಂಡವು. ಕರ್ನಾಟಕ ಏಕೀಕರಣಗೊಂಡರೂ ರಾಜ್ಯದಲ್ಲಿ ಪರಿಪೂರ್ಣವಾಗಿ ಕನ್ನಡ ಆಡಳಿತ ಭಾಷೆ ಜಾರಿಯಾಗಿಲ್ಲ. ಇಂಗ್ಲಿಷ್‌ ಭಾಷೆ ಮೇಲಿನ ವ್ಯಾಮೋಹದಿಂದಾಗಿ ಕನ್ನಡ ಪ್ರೀತಿ ನಲುಗಿದೆ. ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯ ಲ್ಲಿಯೇ ಓದಬೇಕು. ಆ ಮೂಲಕ ಅಳಿವಿನ ಅಂಚಿನಲ್ಲಿರುವ ಶಾಲೆಗಳ ಉಳಿವು ಸಾಧ್ಯ’ ಎಂದು ಹೇಳಿದರು.

‘ಕನ್ನಡಕ್ಕೆ ಇದು ಸಂಕಷ್ಟ ಕಾಲ. ಇಂತಹ ಸನ್ನವೇಶದಲ್ಲಿ ಕನ್ನಡ ಪರ ಹೋರಾಟ, ಚಳವಳಿಗಳು ನಡೆಯ ಬೇಕು. ಹೋರಾಟಗಾರರು ನಡೆಸುತ್ತಿ ರುವ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಚಳವಳಿ ಇನ್ನೂ ವಿಸ್ತಾರ ಗೊಳ್ಳಬೇಕು. ಆ ಮೂಲಕ ಕನ್ನಡ ಭಾಷೆ ಉಳಿಸಲು ಪಣತೊಡಬೇಕು’ ಎಂದರು.

ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಡಾ.ಎಚ್‌.ಡಿ.ಚೌಡಯ್ಯ, ‘ಕನ್ನಡ ಭಾಷೆ ಉಳಿವಿಗೆ ಪ್ರಜ್ಞಾವಂತ ನಾಗರಿಕರು ಹೋರಾಟ ನಡೆಸಬೇಕು. ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದ ಮಹನೀಯರನ್ನು ಸ್ಮರಿಸುವುದು ಈಗಿನ ಕಾಲಕ್ಕೆ ಅವಶ್ಯವಾಗಿದೆ. ಅವರ ತ್ಯಾಗ, ಹೋರಾಟ ಇಂದಿನ ಯುವಕರಿಗೆ ಸ್ಫೂರ್ತಿ ಆಗಬೇಕಾಗಿದೆ’ ಎಂದರು.

ಬಿಎಲ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಸಂಘಟನೆ ಅಧ್ಯಕ್ಷ ಕೆ.ಪ್ರಹ್ಲಾದರಾವ್‌್ ಅವರನ್ನು ಸನ್ಮಾನಿಸ ಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎನ್‌.ಶಿವಣ್ಣ, ಸಾಹಿತಿ ಡಾ.ಎಸ್‌. ಶ್ರೀನಿವಾಸ ಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಪ್ರೊ.ಎಂ.ವೈ. ಶಿವರಾಮು, ಡಾ.ಹುಸ್ಕೂರು ಕೃಷ್ಣೇಗೌಡ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT