ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಗಳ ಗೋಡೆಗೆ ಚಿತ್ರಕಲೆಯೇ ಶೃಂಗಾರ!

Last Updated 22 ಮೇ 2017, 8:38 IST
ಅಕ್ಷರ ಗಾತ್ರ

ಬಳ್ಳಾರಿ: ಒಂದು ವಾರದ ಹಿಂದೆ ನಗರದಲ್ಲಿ ಆರಂಭವಾದ ಗೋಡೆ ಚಿತ್ರಕಲೆ ಉತ್ಸವ ಈ ಭಾನುವಾರದಿಂದ ಇನ್ನಷ್ಟು ರಂಗೇರಿದೆ. ಸರ್ಕಾರಿ ಕಟ್ಟಡಗಳ ಹೊರ ಆವರಣವು ವರ್ಣಮಯವಾಗಿರುವು ದಷ್ಟೇ ಅಲ್ಲದೆ, ಸಂದೇಶಗಳನ್ನೂ ಸಾರುತ್ತಾ ಸಾರ್ವಜನಿಕರನ್ನು ಎಚ್ಚರಿ ಸುತ್ತಿವೆ.

ಚಿತ್ರಕಲೆ ಉತ್ಸವವು ಈಗ ನಗರದಲ್ಲಿ ಈಗ ಕಲಾಸಕ್ತರು ಮತ್ತು ದಾರಿಹೋಕರನ್ನು ಏಕಕಾಲಕ್ಕೆ ತನ್ಮಯ ಗೊಳಿಸಿ ವಾಯು ಮಾಲಿನ್ಯದ ದುಷ್ಪರಿ ಣಾಮಗಳು, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ  ಮೂಡಿಸುತ್ತಿವೆ. ಅದಕ್ಕಾಗಿ ನುರಿತ ಮತ್ತು ಯುವ ಕಲಾವಿದರ ಸಮೂಹ ಶ್ರಮಿಸುತ್ತಿರು ವುದು ವಿಶೇಷ.

ಹಿನ್ನೆಲೆ: ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುವವರ ಹಾವಳಿ ತಡೆಯಲೆಂದೇ ಕಳೆದ ವರ್ಷ ಜಿಲ್ಲಾಧಿಕಾರಿ ಡಾ.ರಾಮ್‌ಪ್ರಸಾದ್‌ ಮನೋಹರ್‌, ನಗರದ ಸೌಂದರ್ಯಕ್ಕೆ ಧಕ್ಕೆ ತರುವುದನ್ನು ನಿಷೇಧಿಸುವ ಕಾಯ್ದೆ ಅಡಿ ಸಂಘಟನೆಯೊಂದರ ವಿರುದ್ಧ ಠಾಣೆಯಲ್ಲಿ ಅಧೀನ ಅಧಿಕಾರಿ ಮೂಲಕ ಪ್ರಕರಣ ದಾಖಲಿಸಿದ್ದರು. ಆದರೆ ನಂತರ ಕಠಿಣ ಕ್ರಮ ಕೈಗೊಳ್ಳದೇ ಇದ್ದುದರಿಂದ ಭಿತ್ತಿಪತ್ರಗಳ ಹಾವಳಿ  ಮುಂದುವರಿದಿತ್ತು.

ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿಯೂ ಹೆಚ್ಚಿ, ಅದನ್ನು ನಿಯಂತ್ರಿ ಸುವ ಕುರಿತು ಚರ್ಚಿಸುವ ಸಂದರ್ಭ ದಲ್ಲೇ ಜಿಲ್ಲಾಧಿಕಾರಿ, ಚಿತ್ರಕಲೆಯ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಭಿತ್ತಿಪತ್ರದ ಹಾವಳಿ ಯನ್ನೂ ತಡೆಗಟ್ಟುವ ಕುರಿತು ನಿರ್ಧಾರ ಕೈಗೊಂಡಿದ್ದರು.  ಮೇ ತಿಂಗಳ ಎರಡನೇ ವಾರದಲ್ಲೇ ಈ ಸಂಬಂಧ ಕಲಾವಿದರು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖ ರೊಂದಿಗೆ ಚರ್ಚಿಸಿ ಸಲಹೆಗಳನ್ನೂ ಪಡೆದಿದ್ದರು.

ಪರಿಣಾಮವಾಗಿ ಮೇ 13ರಂದು ಚಿತ್ರಕಲೆ ಉತ್ಸವಕ್ಕೆ ಚಾಲನೆ ನೀಡ ಲಾಗಿತ್ತು. ವಿಜಯನಗರ ವೈದ್ಯ ಕೀಯ ವಿಜ್ಞಾನ ಸಂಸ್ಥೆ ಕಾಲೇಜು, ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಚಿತ್ರಗ ಳನ್ನು ರಚಿಸಿ ದ್ದರು.

ನಂತರ ಭಾನುವಾರ ಎರಡನೇ ಹಂತದ ಉತ್ಸವ ನಡೆದಿದ್ದು, ಯುವ ಕಲಾವಿದರು, ಸಂಘ–ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಚಿತ್ರಗಳನ್ನು ರಚಿಸಿದ್ದಾರೆ. ನುರಿತ ಕಲಾವಿದರಾದ ಎಂ.ಡಿ. ರಫೀಕ್‌, ಚನ್ನ ಅಂಥವರ ನಡುವೆ  ಪ್ರತಿಭೆ ಪ್ರದರ್ಶಿಸಿದ್ದಾರೆ.

ಇವರಿಗೆ ಫೇಸ್‌ಬುಕ್‌ ಪ್ರೇರಣೆ
ನಗರದ ಆರ್‌ವೈಎಂಇ ಕಾಲೇಜಿನ ಎರಡು ಮತ್ತು ನಾಲ್ಕನೇ ಸೆಮಿ್ಸ್ಟರ್‌ ಏಳು ವಿದ್ಯಾರ್ಥಿನಿ ಯರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಫೇಸ್‌ಬುಕ್‌ ಪ್ರೇರಣೆ ನೀಡಿರುವುದು ವಿಶೇಷ.

ಸಂತ ಫಿಲೋಮಿನಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಚಿತ್ರಕಲೆ ಶಿಕ್ಷಕರಾಗಿರುವ ಮಲ್ಲಿ ಕಾರ್ಜುನ ಅವರ ಫೇಸ್‌ಬುಕ್‌ ವಾಲ್‌ ಮೇಲೆ ಅವರು ಉತ್ಸವದ ಉದ್ಘಾಟನೆ ಸಂದರ್ಭದ ಚಿತ್ರಗಳ ನ್ನು ಪ್ರಕಟಿಸಿದ್ದರು.

ಅದನ್ನು ನೋಡಿದ ವಿದ್ಯಾರ್ಥಿನಿಯರು ತಾವೂ ಪಾಲ್ಗೊಳ್ಳಬಹುದೇ ಎಂದು ಉತ್ಸಾಹ ತೋರಿದರು. ಪಾಲ್ಗೊಳ್ಳಬಹುದು ಎಂದ ಕೂಡಲೇ ತಮ್ಮ ಕಲ್ಪನಾ ಚಿತ್ರಗಳೊಂದಿಗೆ ಭಾನುವಾರ ಧಾವಿಸಿ ಬಂದರು!

ವಿದ್ಯಾರ್ಥಿನಿಯರಾದ ಕೆ.ಐಶ್ವರ್ಯ, ಬಿ.ಎ.ಶೃತಿ, ಕೆ.ಹರ್ಷಿತಾ, ಸಿ.ಎಚ್‌.ರಜತಾ, ದಿವ್ಯ ಜೋಶಿ, ಕೆ.ವೆನಿಲ್ಲಾ ಮತ್ತು ಕೆ.ಚೈತಿಲಿ ಮಹಿಳಾ ಸಬಲೀಕರಣ ಕುರಿತ ನಾಲ್ಕಾರು ಚಿತ್ರಗಳನ್ನು ರಚಿಸಿದ್ದು, ಬಿಡುವು ಸಿಕ್ಕರೆ ಮುಂದಿನ ವಾರವೂ ಪಾಲ್ಗೊಳ್ಳುವ ಉಮ್ಮೇದಿನಲ್ಲಿದ್ದಾರೆ

ಉತ್ಸವದಲ್ಲೂ ಕೊರತೆಗಳುಂಟು...
ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಚಿತ್ರಕಲೆ ಉತ್ಸವ ಶ್ಲಾಘನೀಯ. ಆದರೆ ಕೆಲವು ಕೊರತೆಗಳನ್ನು ನೀಗಿಸಿದರೆ ಸೌಂದರ್ಯವನ್ನು ದುಪ್ಪಟ್ಟುಗೊಳಿಸಬಹುದು ಎನ್ನುತ್ತಾರೆ ಕಲಾವಿದ ಎಂ.ಡಿ.ರಫೀಕ್.ಉತ್ಸವದಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರುವ ವಿದ್ಯಾರ್ಥಿಗಳು, ಯುವಜನರು ಕಲಾವಿದರ ಮಾರ್ಗದರ್ಶನದಲ್ಲಿ ಗೋಡೆ ಚಿತ್ರಕಲೆಯಲ್ಲಿ ತೊಡಗುವಂತೆ ಮಾಡಬೇಕಾದ್ದು ಮೊದಲ ಕೆಲಸ. ಏಕೆಂದರೆ, ಮೊದಲ ಹಂತದ ಸಂದರ್ಭದಲ್ಲಿ, ಕೆಲವು ಚಿತ್ರಗಳು ಸೌಂದರ್ಯ ಹೆಚ್ಚಿಸುವ ಪ್ರಯತ್ನದಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟರು.

ಬ್ರಷ್‌ ಹಿಡಿಯುವುದು, ಬಣ್ಣದಲ್ಲಿ ಅದನ್ನು ಎಷ್ಟು ಬೇಕೋ ಅಷ್ಟನ್ನೆ ಅದ್ದಿ ತೆಗೆಯುವುದು, ಗೋಡೆ ಮೇಲೆ ಚಿತ್ರ ಬಿಡಿಸುವುದಕ್ಕೆ ಕನಿಷ್ಠ ಕೌಶಲ ಮತ್ತು ಏಕಾಗ್ರತೆ ಬೇಕಾಗುತ್ತದೆ. ಅದನ್ನುಉತ್ಸಾಹಿ ಯುವಜನರಿಗೆ ಕಲಾವಿದರು ಹೇಳಿಕೊಡಲು ಅವಕಾಶ ನೀಡಬೇಕು. ಕನ್ನಡ ಭಾಷೆಯ ಬಳಕೆ ಕುರಿತು ಅರಿವು ಅತ್ಯಗತ್ಯ ಎಂದರು.

ನಿರ್ವಹಣೆ ಮುಖ್ಯ: ಚಿತ್ರಕಲೆ ರಚಿಸಿ ಸುಮ್ಮನಾಗುವುದಾದರೆ ಉತ್ಸವದಿಂದ ಪ್ರಯೋಜನವಿಲ್ಲ. ಕನಿಷ್ಠ ನಾಲ್ಕು ವರ್ಷಕ್ಕೊಮ್ಮೆ ಚಿತ್ರಗಳಿಗೆ ಮತ್ತೆ ಬಣ್ಣ ಬಳಿಯುವ ಕೆಲಸವೂ ಆಗಬೇಕು. 2010ರಲ್ಲಿ  ಎಸ್ಪಿ ಬಂಗಲೆಯ ಗೋಡೆಗಳ ಮೇಲೆ ತಾವು ರಚಿಸಿದ್ದ ಚಿತ್ರಗಳು ನಿರ್ವಹಣೆ ಇಲ್ಲದೆ ಮಂಕಾಗಿವೆ ಎಂದು ವಿಷಾದಿಸಿದರು.

 * * ನಗರದ ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಪಾಲ್ಗೊಂಡಿರುವುದು ನಮಗೆ ಸಂತಸ ತಂದಿದೆ. ಜಿಲ್ಲಾಧಿಕಾರಿ ಉತ್ತಮ ಮಾದರಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ
ಸಿ.ಎಚ್‌.ರಜತಾ, ಕೆ.ಹರ್ಷಿತ ಎಂಜಿನಿಯರಿಂಗ್‌ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT