ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದವರ ಆರ್ಥಿಕ ಸಬಲತೆಗೆ ಗಂಗಾ–ಕಲ್ಯಾಣ’

Last Updated 22 ಮೇ 2017, 8:48 IST
ಅಕ್ಷರ ಗಾತ್ರ

ಮುಧೋಳ: ಎಸ್‌ಸಿ, ಎಸ್‌ಟಿ ಜನಾಂಗ ದವರು ಆರ್ಥಿಕವಾಗಿ ಸಬಲರಾಗಬೇಕು. ಇದ್ದ ಜಮೀನಿನಲ್ಲಿ ಅಧಿಕ ಉತ್ಪನ್ನ ತೆಗೆ ಯಲು ಅಧುನಿಕ ಪದ್ಧತಿ ಅಳವಡಿಸಿ ಕೊಳ್ಳಬೇಕು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

ಅವರು ಶನಿವಾರ ತಾಲ್ಲೂಕಿನ ಮಂಟೂರ, ಶಿರೋಳ ಹಾಗೂ ಬೆಳಗಲಿ ಗ್ರಾಮದಲ್ಲಿ ಎಸ್‌ಸಿ ಎಸ್‌ಟಿ ಜನಾಂಗದ ವರಿಗಾಗಿ ಜಿಎಲ್‌ಬಿಸಿ ಇಲಾಖೆಯ ₹ 98.5 ಲಕ್ಷ ಗಂಗಾ–ಕಲ್ಯಾಣ ಏತ ನೀರಾ ವರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಬೆಳಸಬೇಕು. ಹೆಣ್ಣು ಮಕ್ಕಳಿಗೂ ಯಾವುದರಲ್ಲೂ ತಾರತಮ್ಯ ಮಾಡಬಾರದು. ನಾನು ಸಣ್ಣ ನೀರಾವರಿ ಸಚಿವನಿದ್ದಾಗ ಮುಧೋಳ ಕ್ಷೇತ್ರದಲ್ಲಿ ಸುಮಾರು ₹ 300 ಕೋಟಿ ವೆಚ್ಚದಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಏತ ನೀರಾವರಿಗಾಗಿ ಹಣ ವ್ಯಯಮಾಡಲಾಗಿದೆ. ಕ್ಷೇತ್ರದ ಎಲ್ಲ ಹಿಂದುಳಿದ ಜನಾಂಗದವರಿಗೆ ಈ ಯೋಜನೆ ತಲುಪುವವರೆಗೆ ತಾವು ವಿಶ್ರಮಿಸುವುದಿಲ್ಲ ಎಂದರು.

ಗ್ರಾಮದ ಸುಶೀಲವ್ವ ಮಾದರ ಅವರ ಜಮೀನಿಗೆ ₹ 5 ಲಕ್ಷ, ಯಲ್ಲವ್ವ ಮಾಂಗ ಅವರ ಜಮೀನಿಗೆ ₹ 8 ಲಕ್ಷ, ಮಾರುತಿ ಆನಿ ಇವರ ಜಮೀನಿಗೆ ₹ 8 ಲಕ್ಷ,  ಮೆಳ್ಳಿಗೇರಿ ಗ್ರಾಮದ ರೇಣುಕಾ ಸಂಕೋಗೊಳ ₹ 6 ಲಕ್ಷ, ಹಲಗಲಿ ಗ್ರಾಮದ ವಿಠ್ಠಲ ಮರಡಿ ₹ 8 ಲಕ್ಷ, ಸತ್ಯವ್ವ ಸಂಕವ್ವಗೋಳ ₹ 7 ಲಕ್ಷ, ದುರ್ಗಪ್ಪ ಹೂವನ್ನವರ ₹ 8.50 ಲಕ್ಷ, ಶಿರೋಳ ಗ್ರಾಮದ ಹಣಮಪ್ಪ ಮೀಶಿ ₹ 10 ಲಕ್ಷ,  ಮರಪ್ಪ ಕಲ್ಮಡಿ ₹ 6ಲಕ್ಷ, ಹಾಗೂ ಬೆಲಗಲಿ ಗ್ರಾಮದ ಬಸಪ್ಪ ಕೆಸರಗೊಪ್ಪ ₹ 6 ಲಕ್ಷ, ಕಾಶಪ್ಪ ಪೂಜಾರಿ ಅವರ ಜಮೀನಿಗೆ ₹ 12 ಲಕ್ಷ. ಒಟ್ಟು 13 ಫಲಾನುಭವಿಗಳಿಗೆ ₹ 98.5 ಲಕ್ಷ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.

ಬೆಳಗಲಿ ಹಾಗೂ ಶಿರೋಳ ಗ್ರಾಮ ದಲ್ಲಿ ಪ್ರತ್ಯೇಕ ಕಾರ್ಯಕ್ರಮದಲ್ಲಿ ಸದರಿ ಕಾಮಗಾರಿಗೆ ಶಾಸಕ ಕಾರಜೋಳ ಚಾಲನೆ ನೀಡಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಬಿ.ಎಚ್. ಪಂಚಗಾಂವಿ, ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ರಾಮಣ್ಣ ಮಳಲಿ, ಮಾರುತಿ ಆನಿ, ಕುಮಾರ ಹುಲಕುಂದ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT