ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಕಿರೀಟ ತಂಡದ ಸಂಘಟಿತ ಹೋರಾಟಕ್ಕೆ ಒಲಿದ ಜಯ: ರೋಹಿತ್‌ ಶರ್ಮಾ

Last Updated 22 ಮೇ 2017, 9:40 IST
ಅಕ್ಷರ ಗಾತ್ರ

ಹೈದರಾಬಾದ್‌: ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 10ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 1 ರನ್‌ ಅಂತರದಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 129 ರನ್‌ ಗಳಿಸಿತ್ತು. ಆದರೆ ಈ ಸಾಧಾರಣ ಮೊತ್ತವನ್ನು ಸಮರ್ಥಿಸಿಕೊಂಡ ಎಲ್ಲ ಆಟಗಾರರು ತಂಡಕ್ಕೆ ಟ್ರೋಫಿಯ ಕಾಣಿಕೆ ನೀಡಿದರು ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ರೈಸಿಂಗ್ ಪುಣೆ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 128 ರನ್‌ ಗಳಿಸಿತು. ಪುಣೆ ತಂಡದ ನಾಯಕ ಸ್ಟೀವನ್ ಸ್ಮಿತ್ (51; 50ಎ 2ಬೌಂ, 2ಸಿ) ಮತ್ತು ಅಜಿಂಕ್ಯ ರಹಾನೆ (44; 38ಎ, 5ಬೌಂ) ಅವರ ದಿಟ್ಟ ಬ್ಯಾಟಿಂಗ್‌ನ ಹೊರತಾಗಿಯೂ ಜಯ ಒಲಿಯಲಿಲ್ಲ.

ರೋಹಿತ್‌ ಶರ್ಮಾ ಸಾರಥ್ಯದಲ್ಲಿ ಮುಂಬೈ ತಂಡ ಸತತ ಮೂರನೇ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಜಯಿಸಿದೆ.

‘ನನಗೆ ಮೂರೂ ಪ್ರಶಸ್ತಿಗಳು ವಿಶೇಷ. ಯಾವುದೇ ಸರಣಿ ಪ್ರಾರಂಭಕ್ಕೂ ಮುನ್ನ ತಂಡದ ಸಂಯೋಜನೆ ಹೆಚ್ಚು ಒತ್ತು ನೀಡಬೇಕು ಏಕೆಂದರೆ ಅದು ಜಯ ಸಾಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ಪಂದ್ಯದ ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಷೆಲ್‌ ಜಾನ್ಸನ್ ಅವರು ಕಬಳಿಸಿದ ಎರಡು ವಿಕೆಟ್‌ಗಳ ನೆರವಿನಿಂದ ಮುಂಬೈ ತಂಡ 1 ರನ್‌ ಅಂತರದಿಂದ ರೈಸಿಂಗ್ ಪುಣೆ ತಂಡವನ್ನು ಮಣಿಸಲು ಸಾಧ್ಯವಾಯಿತು ಎಂದು ರೋಹಿತ್‌ ಶರ್ಮಾ ಪ್ರಶಂಸಿದರು.

ಆಸ್ಟ್ರೇಲಿಯಾದ ಎಡಗೈ ವೇಗಿ ಮಿಷೆಲ್‌ ಜಾನ್ಸನ್ ಅವರು ಐಪಿಎಲ್‌ 10ನೇ ಆವೃತ್ತಿಯ ಆರಂಭದಿಂದ ಕೊನೆಯವರೆಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ ಎಂದರು.

ಲಸಿತ್‌  ಮಾಲಿಂಗ ಹಾಗೂ ಜಸ್ಪ್ರಿತ್‌ ಬುಮ್ರಾ ಅವರನ್ನು ಪಂದ್ಯದ ಕೊನೆ ಓವರ್‌ಗಳಲ್ಲಿ ಬಳಸಿಕೊಳುವಲ್ಲಿ ರೋಹಿತ್‌ ಯಶಸ್ವಿಯಾದರು. ಜತೆಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಕೃಣಾಲ್ ಪಾಂಡ್ಯ ಅವರ ಆಟವನ್ನು ಪ್ರಶಂಸಿದರು.

ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್‌ ಆಗಲು ಬಯಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್‌ ಶರ್ಮಾ- ‘ಇದರ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿದ್ದು, ಸದ್ಯ ಅದರ ಬಗ್ಗೆ ಏನು ಯೋಚಿಸಿಲ್ಲ. ಆದರೆ ಯಾವಾಗ ತನಗೆ ಅವಕಾಶ ಸಿಗುತ್ತದೆಯೋ ಅದನ್ನು ಮುಕ್ತವಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT