ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆ ಸಂದೇಶಕ್ಕೊಂದು ಆ್ಯಪ್

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ ಎದ್ದ ಕೂಡಲೇ ‘ಗುಡ್ ಮಾರ್ನಿಂಗ್’ ಸಂದೇಶ ಕಳುಹಿಸುವುದು ಹಲವರ ಹವ್ಯಾಸ. ಆದರೆ ಪ್ರತಿ ದಿನ ಒಂದೇ ಸಂದೇಶ ಕಳಿಸುವುದು ಏಕತಾನತೆ ಅನಿಸುತ್ತಿದ್ದಲ್ಲಿ ಈ ಆ್ಯಪ್ ನಿಮಗೆ ಸಹಾಯ ಮಾಡಬಲ್ಲದು.

ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಸಿಗುವ ‘ನಿನ್ನಂದಲೇ’ (Kannada sms) ಆ್ಯಪ್ ಕನ್ನಡದಲ್ಲಿ ಸಂದೇಶಗಳನ್ನು ಬಳಕೆದಾರರಿಗೆ ಓದಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವಕಾಶ ನೀಡುತ್ತದೆ.

ಆ್ಯಪ್‌ನಲ್ಲಿ ಪ್ರೀತಿ, ಸ್ನೇಹ, ವಿಫಲ ಪ್ರೇಮಕ್ಕೆ ಸಂಬಂಧಿಸಿದ ಸಂದೇಶಗಳು, ಹನಿ ಗವನಗಳು ಅಡಕವಾಗಿವೆ. ಇವಷ್ಟೆ ಅಲ್ಲದೆ, ನುಡಿಮುತ್ತುಗಳು, ಶುಭಾಶಯ, ಶುಭರಾತ್ರಿ ಸಂದೇಶಗಳು ಇವೆ. ಹಾಗೂ ಬೇಸರವಾದಾಗ ಓದಲು ಜೋಕ್‌ಗಳೂ ಆ್ಯಪ್‌ನಲ್ಲಿ ಲಭ್ಯ.

ಆ್ಯಪ್‌ ಬಳಸಿ ದಿನಕ್ಕೊಂದು ಹೊಸ ಸಂದೇಶಗಳನ್ನು ನಿಮ್ಮ ಇಷ್ಟವಾದವರಿಗೆ ಕಳಿಸಬಹುದು. ಅದೂ ಅವರ ಮೂಡ್‌ ಗೆ ತಕ್ಕಂತೆ ಸಂದೇಶಗಳನ್ನು ಕಳಿಸಿ ಮೆಚ್ಚುಗೆ ಗಳಿಸಬಹುದು.

ಪ್ರತಿ ಸಂದೇಶ ಅಥವಾ ಜೋಕ್‌ಗಳಿಗೆ ಶೇರ್, ಕಾಪಿ ಮತ್ತು ರೀಡ್ ಆಯ್ಕೆಗಳನ್ನು ನೀಡಲಾಗಿದೆ.  ಆ್ಯಪ್‌ನಲ್ಲಿನ ಸಂದೇಶಗಳನ್ನು ಸುಲಭವಾಗಿ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಳ್ಳಲು ಈ ಆಯ್ಕೆಗಳು ಸಹಾಯ  ಮಾಡುತ್ತವೆ.

ಆ್ಯೊಪ್‌ನಲ್ಲಿ ಅಡಕವಾಗಿರುವ ಜೋಕ್‌ಗಳು ಸ್ವಲ್ಪ ಹಳೆಯವೆಸಿದರೂ, ಸಂದೇಶಗಳು, ಹನಿಗವನಗಳು ಉತ್ತಮವಾಗಿವೆ. ಆಯ್ಕೆಗಳು ಹೆಚ್ಚಿರುವುದರಿಂದ  ದಿನಕ್ಕೊಂದರಂತೆ ಗೆಳೆಯರೊಂದಿಗೆ ಹಂಚಿಕೊಂಡು ಖುಷಿ ಪಡಬಹುದು.

ಆ್ಯಪ್‌ನಲ್ಲಿನ ಹಳೆ ಗಾದೆ ಹೊಸ ರೂಪ ಆಯ್ಕೆಯಲ್ಲಿನ ಗಾದೆಯ ವ್ಯಂಗ್ಯ ರೂಪಗಳು ಕಚಗುಳಿ ಇಡುತ್ತವೆ. ಹಳೆ ಗಾದೆಗಳನ್ನು ತಿರುಚಿ ಹೊಸ ಗಾದೆಗಳನ್ನಾಗಿ ಮಾಡಿರುವುದು ಓದುಗರಿಗೆ ನಗೆ ಉಕ್ಕಿಸುತ್ತದೆ. ಬಳಸಲು ಸರಳವಾಗಿರುವ ಈ ಆ್ಯಪ್‌ನ ಪ್ರಮುಖ ಹಿನ್ನಡೆ ಜಾಹೀರಾತುಗಳು. ಪ್ರತಿ ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗಲೂ ಪರದೆ ಮೇಲೆ ಜಾಹೀರಾತುಗಳು ಎದುರಾಗುತ್ತವೆ.

ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ರಾಖೇಶ್‌ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ಅನ್ನು ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಕೆದಾರರಿಂದ ಆ್ಯಪ್‌ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT