ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌: ಜನರ ಅಭಿಪ್ರಾಯ ಆಹ್ವಾನ

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ರೂಪಾಯಿ, ಡಾಲರ್‌ಗಳಿಗೆ ಪರ್ಯಾಯವಾಗಿರುವ ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸುವ ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ಗಳನ್ನು ನಿಷೇಧಿಸುವ, ನಿಯಂತ್ರಿಸುವ ಅಥವಾ ಸ್ವಯಂ ನಿಯಂತ್ರಣಕ್ಕೆ ಒಳಪಡಿಸುವ ಕುರಿತು ಕೇಂದ್ರ ಸರ್ಕಾರವು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.
 
ಬಿಟ್‌ಕಾಯಿನ್‌ಗಳ ವಹಿವಾಟಿನ ಕುರಿತು ಜನರು  ಕೇಂದ್ರ ಸರ್ಕಾರದ ಅಂತರ್ಜಾಲ ತಾಣ, ‘ಮೈಗವ್‌ಡಾಟ್‌ಇನ್‌ ’ (https://mygov.in)  ದಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು 2014ರ ಜುಲೈನಲ್ಲಿ ಈ ತಾಣಕ್ಕೆ ಚಾಲನೆ ನೀಡಿದ್ದರು.
 
ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಬಿಟ್‌ಕಾಯಿನ್‌ಗಳ ಚಲಾವಣೆ ಹೆಚ್ಚುತ್ತಿದೆ. ಇದು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳ ಚಿಂತೆಗೆ ಕಾರಣವಾಗಿದೆ.ಇವುಗಳ ಬಳಕೆ ಬಗ್ಗೆ ವಿವಿಧ ವೇದಿಕೆಗಳಲ್ಲಿ ಜನರಿಗೆ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿದೆ.
 
ಬಿಟ್‌ ಕಾಯಿನ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಬಳಕೆದಾರರು, ಸಂಗ್ರಹಕಾರರು ಮತ್ತು ವಹಿವಾಟು ನಡೆಸುವವರಿಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಕರೆನ್ಸಿಗಳ ಬಳಕೆ ಮೇಲೆ ನಿಯಂತ್ರಣ ವಿಧಿಸುವುದಾದರೆ,    ನಿಗಾ ಇರಿಸುವ, ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ  ಮತ್ತು ಗ್ರಾಹಕರನ್ನು ರಕ್ಷಿಸುವ ಕ್ರಮಗಳ ಬಗ್ಗೆಯೂ ಜನರು ಸಲಹೆ ನೀಡಬಹುದು.  
 
ನಿಯಂತ್ರಣಕ್ಕೆ ಒಳಪಡಿಸಲು ಸಲಹೆ ನೀಡದಿದ್ದರೆ, ಸ್ವಯಂ ನಿಯಂತ್ರಣದ ಪರಿಣಾಮಕಾರಿ ವ್ಯವಸ್ಥೆ ಹೇಗೆ ಇರಬೇಕು. ಅಂತಹ ಪರಿಸ್ಥಿತಿಯಲ್ಲಿ ಬಳಕೆದಾರರ ಹಿತರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸರ್ಕಾರ ಜನರಿಂದ ಸಲಹೆಗಳನ್ನು ಬಯಸಿದೆ. ಈ ತಿಂಗಳ 31ರವರೆಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ.
****
ಆ್ಯಪ್‌ ಜನಪ್ರಿಯತೆ
ಬಿಟ್‌ಕಾಯಿನ್‌ ವಹಿವಾಟು ನಡೆಸಲು ನೆರವಾಗುವ 5 ಲಕ್ಷದಷ್ಟು ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲಾಗಿದೆ.    ಪ್ರತಿ ದಿನ 2,500ಕ್ಕೂ ಹೆಚ್ಚು ಬಳಕೆದಾರರುಸೇರ್ಪಡೆಯಾಗುತ್ತಿದ್ದಾರೆ ಎಂದು ಮೊಬೈಲ್‌ ಆ್ಯಪ್‌ ಆಧಾರಿತ ಬಿಟ್‌ಕಾಯಿನ್ ವಿನಿಮಯ ಸಂಸ್ಥೆ  ಜೆಬ್‌ಪೇ (Zebpay) ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT