ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮಿಸಿದ ದೂರಕ್ಕಷ್ಟೇ ಶುಲ್ಕ ಕೊಡಿ

ಹೆದ್ದಾರಿ ಸಚಿವಾಲಯದ ಹೊಸ ನಿಯಮ ಶೀಘ್ರ ಜಾರಿ
Last Updated 22 ಮೇ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಟೋಲ್‌ ಸಂಗ್ರಹಿಸುವ ರಸ್ತೆಗೆ ಪ್ರವೇಶಿಸಿದರೆ ನಿಶ್ಚಿತ ದರವನ್ನು ಪಾವತಿಸಲೇಬೇಕಾದ ವ್ಯವಸ್ಥೆ ಈಗ ಜಾರಿಯಲ್ಲಿದೆ. ಆದರೆ ಅದರ ಬದಲಾಗಿ, ಸಂಚರಿಸಿದಷ್ಟು ದೂರಕ್ಕೆ ಮಾತ್ರ ಟೋಲ್‌ ಪಾವತಿಸುವ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ.
 
ಕಿಲೋಮೀಟರ್‌ ಲೆಕ್ಕದಲ್ಲಿ ಟೋಲ್‌ ಪಾವತಿಸುವ ಹೊಸ ನೀತಿ ರೂಪಿಸಲು ಕೇಂದ್ರ ರಸ್ತೆ ಸಾರಿಗೆ  ಮತ್ತು ಹೆದ್ದಾರಿ ಸಚಿವಾಲಯ ಕೆಲಸ ಮಾಡುತ್ತಿದೆ. 
ಪ್ರವೇಶ ನಿರ್ಬಂಧ ಇರುವ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಆರಂಭದಲ್ಲಿ ಇದು ಜಾರಿಗೆ ಬರಲಿದೆ.
 
ನಮ್ಮ ದೇಶದಲ್ಲಿನ ಹೆದ್ದಾರಿಗಳಿಗೆ ಹತ್ತಾರು ಸಂಪರ್ಕ ರಸ್ತೆಗಳು ಬಂದು ಸೇರುತ್ತವೆ. ಹೀಗಾಗಿ ಕ್ರಮಿಸಿದ ದೂರವನ್ನು ಲೆಕ್ಕ ಹಾಕುವುದು ಸುಲಭವಲ್ಲ. ಆದರೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡರೆ ಇದು ಸಾಧ್ಯವಿದೆ. ಇದು ಜಾರಿಗೆ ಬಂದರೆ ವಾಹನ ಮಾಲೀಕರು ಇಡೀ ರಸ್ತೆಗೆ ನಿಗದಿ ಮಾಡಲಾದ ಶುಲ್ಕವನ್ನು ಅನಗತ್ಯವಾಗಿ ಪಾವತಿಸುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 
 
ಲೆಕ್ಕ ಹಾಕುವುದು ಹೇಗೆ: ಟೋಲ್‌ ಪಾವತಿಗಾಗಿ ಎಲೆಕ್ಟ್ರಾನಿಕ್‌ ಚಿಪ್‌ಗಳನ್ನು ಅಳವಡಿಸಿರುವ ವಾಹನಗಳು ಟೋಲ್‌ ರಸ್ತೆಯನ್ನು ಪ್ರವೇಶಿಸಿದಾಗ ಅಲ್ಲಿ ಇರುವ ಕ್ಯಾಮೆರಾದಲ್ಲಿ ಚಿಪ್‌ ಮತ್ತು ವಾಹನ ಸಂಖ್ಯೆ ದಾಖಲಾಗುತ್ತದೆ. 
 
ರಸ್ತೆಯಲ್ಲಿ ಅಳವಡಿಸಲಾಗಿರುವ ಪ್ರತಿ ಕ್ಯಾಮೆರಾವನ್ನು ವಾಹನ ದಾಟಿದಾಗಲೂ ಅದು ಅಲ್ಲಿ ದಾಖಲಾಗುತ್ತದೆ. ಯಾವ ಕ್ಯಾಮೆರಾದಲ್ಲಿ ವಾಹನ ಕೊನೆಗೆ ದಾಖಲಾಗಿದೆಯೋ ಅಲ್ಲಿವರೆಗಿನ ಶುಲ್ಕವನ್ನು ಪೂರ್ವ ಪಾವತಿ ಚಿಪ್‌ ಮೂಲಕ ಸಂಗ್ರಹಿಸಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT