ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್ ಅಥ್ಲೆಟಿಕ್ಸ್: ಡಿಸ್ಕಸ್‌ ಥ್ರೋನಲ್ಲಿ ಚಿನ್ನ ಗೆದ್ದ ಅಭಯ್

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಹರಿಯಾಣದ ಯುವ ಆಟಗಾರರಾದ ಅಭಯ್‌ ಗುಪ್ತಾ ಹಾಗೂ ಸಾಹಿಲ್ ಸಿಲ್ವಾಲ್‌ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ ಷಿಪ್‌ನಲ್ಲಿ ಸೋಮವಾರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದ್ದಾರೆ.

56.47 ಮೀಟರ್ ಡಿಸ್ಕಸ್ ಎಸೆದ ಅಭಯ್‌ ಚಿನ್ನ ಗೆದ್ದರು. ಅಲ್ಲದೇ ಈ ಟೂರ್ನಿಯ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.
ಇರಾನ್‌ನ ಅಥ್ಲೀಟ್‌ ಸಜ್ಜದ್ ಹಸನ್  ದೋಹಾದಲ್ಲಿ ನಡೆದ ಚಾಂಪಿಯನ್‌ ಷಿಪ್‌ನಲ್ಲಿ 53.06ಮೀ ಡಿಸ್ಕಸ್‌ ಎಸೆದಿರು ವುದು ಈವರೆಗಿನ ದಾಖಲೆ ಎನಿಸಿತ್ತು.

ಸಾಹಿಲ್ 54.58 ಮೀಟರ್ಸ್‌ ಎಸೆ ಯುವ ಮೂಲಕ ಬೆಳ್ಳಿ ಗೆದ್ದರು. ಮಲೇಷ್ಯಾದ ಇಂಗ್ ಬಾವೊ (52. 48ಮೀ.) ಕಂಚು ಜಯಿಸಿದರು.
ಬಾಲಕರ 10,000 ಮೀಟರ್ಸ್‌ ಓಟದ ವಿಭಾಗದಲ್ಲೂ ಭಾರತ ಚಿನ್ನ ಗೆದ್ದುಕೊಂಡಿದೆ. ಹರಿಯಾಣದ ಸಂಜಯ್ ಕುಮಾರ್‌ 45ನಿ.30.39 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನ ಗೆದ್ದರು.

ಜಪಾನ್‌ನ ಮಸಾರು ಸುಜುಕಿ (45ನಿ.47.41ಸೆ) ಬೆಳ್ಳಿ ಗೆದ್ದರೆ, ಚೀನಾದ ಯಾವು ಜಾಂಗ್‌ (46ನಿ. 12.58ಸೆ) ಕಂಚು ಎತ್ತಿಹಿಡಿದರು. ಭಾರತ ತಂಡ  ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಭಾರ ತದ ಸ್ಪರ್ಧಿಗಳು ಇಲ್ಲಿ ಗೆದ್ದುಕೊಂಡಿ ದ್ದಾರೆ. ಚೀನಾ 12 ಚಿನ್ನ, ಒಂಬತ್ತು ಬೆಳ್ಳಿ, ಮತ್ತು ನಾಲ್ಕು ಕಂಚಿನ ಪದಕಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಚೀನಾ ತೈಪೆ ಎರಡನೇ ಸ್ಥಾನದಲ್ಲಿದೆ.

ಶನಿವಾರ ಗುರ್ವಿಂದರ್ ಸಿಂಗ್ ಮತ್ತು ಅಭಿಷೇಕ್ ಮ್ಯಾಥ್ಯೂ ಭಾರತಕ್ಕೆ ಎರಡು ಚಿನ್ನ ಗೆದ್ದುಕೊಟ್ಟರು. ಬಾಲಕರ 100ಮೀ ಓಟದಲ್ಲಿ ಗುರ್ವಿಂದರ್‌ (10.77ಸೆ) ಮೊದಲಿ ಗರಾಗಿ ಗುರಿ ಮುಟ್ಟಿದರು. ಕಳೆದ ತಿಂಗಳು ಗುರ್ವಿಂದರ್ (10.74ಸೆ) ಯೂತ್ ಬಾಲಕರ ವಿಭಾಗದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಬಾಲಕರ 800ಮೀ ವಿಭಾಗದಲ್ಲಿ ಅಭಿಷೇಕ್ (1ನಿ.54.99ಸೆ) ಚಿನ್ನ ಗೆದ್ದರು.  ಶ್ರೀಲಂಕಾದ ಹರ್ಷಾ ಹಾಗೂ ಚೀನಾದ ಕ್ವಿ ಜಾನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT