ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್‌ಗೆ ಶರಣಾದ ಭಾರತ

ಸುದಿರ್ಮನ್ ಕಪ್ ಬ್ಯಾಡ್ಮಿಂಟನ್: ಸಿಂಧು ಗೆಲುವು
Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಗೋಲ್ಡ್‌ಕೋಸ್ಟ್, ಆಸ್ಟ್ರೇಲಿಯಾ :  ಭಾರತ ತಂಡವು ಇಲ್ಲಿ ನಡೆ ಯುತ್ತಿರುವ  ಸುದಿರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 1–4ರಿಂದ   ಡೆನ್ಮಾರ್ಕ್‌ ತಂಡದ ಎದುರು ಸೋಲನುಭವಿಸಿತು.

ಒಲಿಂಪಿಯನ್ ಪಿ.ವಿ. ಸಿಂಧು  ಮಹಿಳೆಯರ ಸಿಂಗಲ್ಸ್‌ನಲ್ಲಿ ಜಯ ಸಾಧಿಸಿದ್ದು ಮಾತ್ರ ಭಾರತ ಪಾಳೆಯದಲ್ಲಿ ಸಮಾಧಾನ ಮೂಡಿಸಿತು. 
ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಹೈದರಾಬಾದಿನ ಸಿಂಧು ಅವರು   ಕಣಕ್ಕಿಳಿಯುವ ಮುನ್ನವೇ ಭಾರತ ತಂಡವು 0–3ರಿಂದ ಹಿನ್ನಡೆ  ಅನುಭವಿಸಿತ್ತು.  ಸಿಂಧು ಅವರು  21–18, 21–6 ಗೇಮ್‌ಗಳಿಂದ ಲೈನ್ ಜೇರ್ಸ್‌ಫೀಲ್ಡ್‌ ವಿರುದ್ಧ ಗೆದ್ದರು.  ಮೊದಲ ಗೇಮ್‌ನಲ್ಲಿ ಡೆನ್ಮಾರ್ಕ್ ಆಟಗಾರ್ತಿ ಕಠಿಣ ಪೈಪೋಟಿ ಒಡ್ಡಿದರು.

ಆದರೆ ಸಿಂಧು ಮಣಿಯಲಿಲ್ಲ. ದಿಟ್ಟ ಉತ್ತರ ನೀಡಿದ ಅವರು  ಗೆದ್ದರು.  ನಂತರದ ಗೇಮ್‌ನಲ್ಲಿ ಎದುರಾಳಿಗೆ ಹೆಚ್ಚು ಅವಕಾಶವನ್ನೇ ನೀಡಲಿಲ್ಲ. ಶರವೇಗದ ಸ್ಮ್ಯಾಷ್‌ಗಳು, ನಿಖರವಾದ ಸರ್ವಿಸ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಅದರಿಂದಾಗಿ 15 ಅಂಕಗಳ ಅಂತರದಿಂದ ಜಯಿಸಿದರು. 32 ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಯಿತು.

ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್  ರಣಕಿರೆಡ್ಡಿ ಜೋಡಿಯು 15–21, 21–16, 17–21ರಿಂದ ಡೆನ್ಮಾರ್ಕಿನ ಜೋಶಿಮ್ ಫಿಶರ್  ನೀಲ್ಸನ್ ಮತ್ತು ಕ್ರಿಸ್ಟಿನಾ ಪೆಡರ್ಸನ್ ಅವರ ವಿರುದ್ಧ ಪರಾಭವಗೊಂಡರು. ಒಂದು ತಾಸು, ಹತ್ತು ನಿಮಿಷಗಳವರೆಗೆ ನಡೆದ ಪಂದ್ಯದ ಮೊದಲ ಗೇಮ್‌ನ ಒಂದು ಹಂತದಲ್ಲಿ   ಅಶ್ವಿನಿ ಮತ್ತು ಸಾತ್ವಿಕ್ ಅವರು ಮುನ್ನಡೆಯಲ್ಲಿದ್ದರು. ಆದರೆ ನಂತರದಲ್ಲಿ ಇಬ್ಬರ ನಡುವಿನ ಹೊಂದಾಣಿಕೆಯ ಆಟದ ಕೊರತೆ ಕಂಡುಬಂತು. ಅದರ ಲಾಭ ಪಡೆದ ಡೆನ್ಮಾರ್ಕ್ ಜೋಡಿಯು ಮೇಲುಗೈ ಸಾಧಿಸಿತು.

ಆದರೆ ಎರಡನೇ ಗೇಮ್‌ನಲ್ಲಿ ಭಾರತದ ಜೋಡಿಯು ಚುರುಕಾದ ಆಟವಾಡಿತು.  ಅದರಿಂದಾಗಿ ಐದು ಅಂಕಗಳ ಅಂತರದಿಂದ  ಜಯ ಸಾಧಿ ಸಿತು. ಅಶ್ವಿನಿ ಅವರು ನೆಟ್‌ ಬಳಿಯ ಆಟ ದಲ್ಲಿ ಪಾಯಿಂಟ್‌ಗಳನ್ನು ಗಳಿಸಿದರು.  ಸಾತ್ವಿಕ್ ಬಿರುಸಾದ ಸ್ಮ್ಯಾಷ್‌ಗಳ ಮೂಲಕ ಪ್ರತಿಸ್ಪರ್ಧಿಗಳ ಒತ್ತಡ ಹೆಚ್ಚಿಸಿದರು.

ಆದರೆ ಮೂರನೇ ಗೇಮ್‌ನಲ್ಲಿ  ಜೋಶಿಮ್ ಮತ್ತು ಕ್ರಿಸ್ಟಿನಾ ಅವರ ಜೋಡಿಯು ಭಾರತದ ಆಟಗಾರರ  ಕಠಿಣ ಸ್ಪರ್ಧೆಯನ್ನು ಮೀರಿ ನಿಂತಿತು. ಈ ಗೇಮ್‌ನಲ್ಲಿ ತುರುಸಿನ ಪೈಪೋಟಿ ಕಂಡು  ಬಂದಿತ್ತು. 15 ಅಂಕಗಳವರೆಗೂ ಸಮಬಲ ಸಾಧಿಸಿದ್ದರು.  ಆದರೆ ನಂತ ರದ ಹಂತದಲ್ಲಿ  ಡೆನ್ಮಾರ್ಕ್ ಆಟಗಾರರು ಶರವೇಗದ ಆಟವಾಡಿದರು. ಭಾರತದ ಜೋಡಿಯನ್ನು ಕೇವಲ 17 ಅಂಕಗಳಿಗೆ  ನಿಯಂತ್ರಿಸಿದರು. ನಾಲ್ಕು ಅಂಕಗಳ ಅಂತರದಿಂದ ಗೆದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಜಯ್ ಜಯರಾಮ್ ಅವರು ನಿರಾಸೆ ಮೂಡಿಸಿದರು. ವಿಶ್ವ ಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿರುವ ಅಜಯ್ 12–21, 7–21 ರಿಂದ ಮಲೇಷ್ಯಾದ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತರು. 27 ನಿಮಿಷಗಳವರೆಗೆ ನಡೆದ ಪಂದ್ಯ ದಲ್ಲಿ  ಅಜಯ್ ಅವರು ಸಿಕ್ಕ ಅವಕಾಶ ಗಳನ್ನು ಕೈಚೆಲ್ಲಿದರು.  ಎದುರಾಳಿಯ ಡ್ರಾಪ್ ಮತ್ತು  ಸ್ಮ್ಯಾಷ್‌ಗಳಿಗೆ ಪ್ರತ್ಯುತ್ತರ ನೀಡುವಲ್ಲಿ ಎಡವಿದರು.

ಮನು–ಸುಮಿತ್ ಗೆ ಆಘಾತ: ಮನು ಅತ್ರಿ ಮತ್ತು ಬಿ ಸುಮಿತ್ ರೆಡ್ಡಿ  ಅವರ ಜೋಡಿಯು ಪುರುಷರ ಡಬಲ್ಸ್‌ನಲ್ಲಿ  17–21, 15–21ರಿಂದ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜೋಡಿ ಮಥಾ ಯಿಸ್ ಬೊಯ್ ಮತ್ತು ಕಾರ್ಸ್ಟನ್ ಮೊಗೆ ನಸೆನ್ ಅವರ ವಿರುದ್ಧ ಸೋಲ ನುಭವಿಸಿತು.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎಡಗೈ ಆಟಗಾರ್ತಿ ಸಿಕ್ಕಿ ರೆಡ್ಡಿ  ಅವರು 21–18, 1–21, 21–23ರಿಂದ ಡೆನ್ಮಾರ್ಕ್‌ನ ಕಮಿಲ್ಲಾ ರೈಟರ್  ಜೂಹಿ ಮತ್ತು ಕ್ರಿಸ್ಟಿನಾ ಅವರ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT