ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ಸ್ ವಾರಿಯರ್ಸ್ ತಂಡಕ್ಕೆ ಪ್ರಶಸ್ತಿ

Last Updated 23 ಮೇ 2017, 5:29 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಮೂರ್ನಾಡು ಹೋಬಳಿ ಬಂಟರ ಸಂಘ ಏರ್ಪಡಿಸಿದ್ದ ಎರಡು ದಿನದ 4ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ಮಡಿಕೇರಿ ಸಾಮ್ರಾಟ್ ರೈ ಬ್ರದರ್ಸ್ ವಿರುದ್ಧ ಜಯಗಳಿಸಿ ಚಾಂಪಿಯನ್ ಆಯಿತು.

ಮೊದಲು ಬ್ಯಾಟ್ ಮಾಡಿದ ಮಡಿಕೇರಿ ಸಾಮ್ರಾಟ್ ಬ್ರದರ್ಸ್ ನಿಗದಿತ 5 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್‌ ಗಳಿಸಿತು. ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ 4.3ಓವರ್‌ನಲ್ಲಿ 5ವಿಕೆಟ್ ನಷ್ಟಕ್ಕೆ ಗುರಿಮುಟ್ಟಿತು. ಮಹಿಳೆಯರಿಗೆ ನಡೆದ ಥ್ರೋಬಾಲ್ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ಎ ತಂಡ ವಿನರ್ಸ್ ಹಾಗೂ ಮೂರ್ನಾಡು ರೈ ವಾರಿಯರ್ಸ್ ಬಿ ತಂಡ ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡರು.

ಪುರುಷರ ಹಗ್ಗಜಗ್ಗಾಟದಲ್ಲಿ ವಿರಾಜಪೇಟೆ ಮಲ್ನಾಡ್ ಬಂಟ್ಸ್ ಪ್ರಥಮ ಹಾಗೂ ನಾಪೋಕ್ಲು ಆರ್.ಕೆ. ಬ್ರದರ್ಸ್ ತಂಡ ದ್ವಿತೀಯ ಪ್ರಶಸ್ತಿಗೆ ಭಾಜನವಾದವು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡ ಪ್ರಥಮ ಹಾಗೂ ಹಾಕತ್ತೂರು ರೈ ವಾರಿಯರ್ಸ್ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು. ಕ್ರಿಕೆಟ್ ಪಂದ್ಯದಲ್ಲಿ ಮೂರ್ನಾಡು ಬಂಟ್ಸ್ ವಾರಿಯರ್ಸ್ ತಂಡದ ಜಗದೀಶ್ ರೈ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.ಮಹಿಳೆಯರಿಗೆ ಸಂಗೀತ ಕುರ್ಚಿ, ನಿಂಬೆ ಹಣ್ಣು ಚಮಚ ಓಟ, ಭಾರದ ಗುಂಡುಎಸೆತ, ಕಪ್ಪೆ ಓಟ, ಪುಟಾಣಿ ಮಕ್ಕಳ ಓಟದ ಸ್ಪರ್ಧೆ ನಡೆದವು.

ಸನ್ಮಾನ: ಸಮಾರೋಪದಲ್ಲಿ ಸಿದ್ದಾಪುರ ದೇವಿ ನರ್ಸರಿ ಬಿ.ಎಸ್. ವೆಂಕಪ್ಪ ರೈ, ವಿರಾಜಪೇಟೆ ಗಾಂಧಿನಗರ ರಾಮಣ್ಣ ಶೆಟ್ಟಿ, ಗೋಣಿಕೊಪ್ಪ ಆರ್. ಬಾಲಕೃಷ್ಣ ರೈ, ಮೂರ್ನಾಡು ಕರಿಯಪ್ಪ ರೈ, ಪೊಲೀಸ್ ಇಲಾಖೆ ಜಿತೇಂದ್ರ ರೈ, ವಿದ್ಯಾರ್ಥಿ ವಿಶಾಂತ್ ರೈ ಅವರನ್ನು ಸಂಘದ ವತಿಯಿಂದ  ಸನ್ಮಾನಿಸಲಾಯಿತು. ಕ್ರೀಡಾಕೂಟವನ್ನು ಯಶಸ್ವಿಯಾಗಿದೆ ಎಂದು ಕೊಡಗು ಜಿಲ್ಲಾ ಬಂಟರ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಹರ್ಷ ವ್ಯಕ್ತಪಡಿಸಿದರು.ಕ್ರೀಡಾಕೂಟ ಸ್ವಜಾತಿ ಬಾಂಧವರನ್ನು ಒಂದೆಡೆ ಸೇರಿ ಒಗ್ಗಟ್ಟನ್ನು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ರತ್ನಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಮಡಿಕೇರಿ ತಾಲೂಕು ತುಳು ಒಕ್ಕೂಟ ಅಧ್ಯಕ್ಷ ಪ್ರಭು ರೈ, ಉದ್ಯಮಿ ಡಾ. ಜಯಂತಿ ಆರ್ ಶೆಟ್ಟಿ, ಸಂಘದ ಪ್ರಮುಖರಾದ  ಬಿ.ಐ. ರಮೇಶ್ ರೈ, ದುಷ್ಯಂತ್ ರೈ, ಬಿ.ಬಿ. ಗಿರೀಶ್ ರೈ,  ಬಿ. ಕೃಷ್ಣಪ್ಪ ಶೆಟ್ಟಿ,  ಬಿ.ಕೆ. ರವೀಂದ್ರ ರೈ, ಕೆ.ಆರ್. ಬಾಲಕೃಷ್ಣ ರೈ, ಕೆ.ವಿಠಲ್ ರೈ, ಅಶ್ವಿನಿ ರೈ, ವಾಣಿ ಶಬರೀಶ್, ಮೂರ್ನಾಡು ಹೋಬಳಿ ಬಂಟರ ಸಂಘದ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT