ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಕಾರ್ಯಾರಂಭ; ವಾರ್ಷಿಕ ಶೇ 4ರಷ್ಟು ಬಡ್ಡಿ

₹25 ಸಾವಿರ ಠೇವಣಿಗೆ ₹250 ಕ್ಯಾಷ್‌ಬ್ಯಾಕ್‌ ಕೊಡುಗೆ
Last Updated 23 ಮೇ 2017, 7:06 IST
ಅಕ್ಷರ ಗಾತ್ರ

ಬೆಂಗಳೂರು: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಕಾರ್ಯನಿರ್ವಹಣೆ ಮಂಗಳವಾರದಿಂದ ಪ್ರಾರಂಭವಾಗಿದೆ. ಮೊದಲ ವರ್ಷದಲ್ಲಿ 31 ಶಾಖೆ ಹಾಗೂ 3000 ಗ್ರಾಹಕ ಸೇವಾ ಕೇಂದ್ರಗಳನ್ನು ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿದೆ.

ಪ್ರಸ್ತುತ ಪೇಮೆಂಟ್‌ ಬ್ಯಾಂಕ್‌ ಖಾತೆಗೆ ₹25 ಸಾವಿರ ಜಮೆ ಮಾಡುವವರಿಗೆ ₹250 ಕ್ಯಾಷ್‌ಬ್ಯಾಕ್‌ ಕೊಡುಗೆ ನೀಡುತ್ತಿದೆ. ಮೊದಲ 2 ವರ್ಷಗಳಲ್ಲಿ ಪೇಮೆಂಟ್‌ ಬ್ಯಾಂಕ್‌ ₹400 ಕೋಟಿ ಹೂಡಿಕೆ ಹೊಂದುವುದಾಗಿ ಹೇಳಿದೆ.

ಒನ್‌97 ಕಮ್ಯುನಿಕೇಷನ್ಸ್‌ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ತನ್ನ ವಾಲೆಟ್‌ ವಹಿವಾಟನ್ನು ವರ್ಗಾಯಿಸುತ್ತಿದೆ. ಶೂನ್ಯ ಬಾಕಿ ಖಾತೆ, ನೆಫ್ಟ್‌, ಐಎಂಪಿಎಸ್‌ ಸೇರಿದಂತೆ ಉಚಿತ ಆನ್‌ಲೈನ್‌ ವಹಿವಾಟು ಸೇವೆ ಒದಗಿಸಲಿದೆ.

ಪೇಮೆಂಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ 4ರಷ್ಟು ಬಡ್ಡಿ ನೀಡಲಾಗುತ್ತದೆ. ಗ್ರಾಹಕರಿಗೆ ರುಪೇ ಡೆಬಿಟ್‌ ಕಾರ್ಡ್‌ ಒದಗಿಸಲಾಗುತ್ತಿದ್ದು, ಎಟಿಎಂ ಮೂಲಕ 5 ಬಾರಿ ಉಚಿತವಾಗಿ ಹಣ ಪಡೆಯಬಹುದಾಗಿದೆ. ಆನಂತರದ ಪ್ರತಿ ವಹಿವಾಟಿಗೆ ₹20 ಶುಲ್ಕ ವಿಧಿಸಲಾಗುತ್ತದೆ.

ಗ್ರಾಹಕರು ಗರಿಷ್ಠ ₹1 ಲಕ್ಷದ ವರೆಗೂ ಪೇಮೆಂಟ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶವಿದೆ. ದೆಹಲಿಯಲ್ಲಿ ಪೇಟಿಎಂನ ಮೊದಲ ಬ್ಯಾಂಕ್ ಶಾಖೆ ಕಾರ್ಯಾರಂಭಿಸಿದೆ.

ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಶೇ 7.3 ಹಾಗೂ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ ಶೇ 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿವೆ.

ಪೇಟಿಎಂ ವೆಬ್‌ಸೈಟ್‌: paytm.com/bank

(ಮೂಲ ವರದಿ ಎಕನಾಮಿಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT