ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ

Last Updated 23 ಮೇ 2017, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿರಡಿ ಶ್ರೀಸಾಯಿ ಮಂದಿರದ ಆಡಳಿತ ಮಂಡಳಿ ಅವ್ಯವಹಾರದಲ್ಲಿ ತೊಡಗಿದ್ದು, ಕೂಡಲೇ ಅದನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಭಕ್ತರು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತುಳಜಾ ಭವಾನಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕೋರ್ಟ್‌ ವೃತ್ತಕ್ಕೆ ಹೋಗಲು ಯತ್ನಿಸಿದರು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರನ್ನು ತಡೆದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

‘1990ನೇ ಸಾಲಿನಿಂದಲೂ ಶಿರಡಿ ಸಾಯಿ ಮಂದಿರಕ್ಕೆ ಒಂದೇ ಆಡಳಿತ ಮಂಡಳಿ ಇದೆ. ದೇವಸ್ಥಾನದ ಹುಂಡಿಗೆ ಬರುವ ಕಾಣಿಕೆ ಹಣವನ್ನು ಆಡಳಿತ ಮಂಡಳಿಯವರು ಕಬಳಿಸುತ್ತಿದ್ದಾರೆ. ಪಾರದರ್ಶಕವಾಗಿ ಆಡಳಿತ ನಡೆಯುತ್ತಿಲ್ಲ. ಕೂಡಲೇ ಅಧ್ಯಕ್ಷರನ್ನು ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕ ಮಾಡುವಂತೆ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರೂ ಇದುವರೆಗೆ ಆಡಳಿತಾಧಿಕಾರಿ ನೇಮಿಸಿಲ್ಲ’ ಎಂದು ಪ್ರಮೋದ ಮುತಾಲಿಕ್‌ ಆರೋಪಿಸಿದರು.

‘ಐದು ದಿನಗಳ ಒಳಗೆ ಶಿರಡಿ ಸಾಯಿ ಸದ್ಭಕ್ತ ಮಂಡಳಿಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಕೂಡಲೇ ಈಗಿರುವ ಆಡಳಿತ ಮಂಡಳಿ ವಜಾಗೊಳಿಸಿ ಸರ್ಕಾರ ತನಿಖೆಗೆ ಆದೇಶಿ ಸಬೇಕು’ ಎಂದು ಒತ್ತಾಯಿಸಿದರು.

‘ಶಿರಡಿ ಸಾಯಿ ಮಂದಿರದಲ್ಲಿ 18 ವರ್ಷಗಳ ಕಾಲ ಅರ್ಚಕನಾಗಿ ಕೆಲಸ ಮಾಡಿದ ನನ್ನನ್ನು ಯಾವುದೇ ಕಾರಣ ನೀಡದೇ ಏಕಾಏಕಿ ಆಡಳಿತ ಮಂಡಳಿಯವರು ತೆಗೆದು ಹಾಕಿದ್ದಾರೆ. ಇದೀಗ ಜೀವನ ಮಾಡುವುದು ಕಷ್ಟವಾಗಿದೆ’ ಎಂದು ಪಾಂಡುರಂಗ ಮುನವಳ್ಳಿ ಆರೋಪಿಸಿದರು. ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT