ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 14ಕ್ಕೆ ಭಾರತದಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ 950, ಮಾನ್‌ಸ್ಟರ್ 797 ಬಿಡುಗಡೆ

Last Updated 23 ಮೇ 2017, 10:06 IST
ಅಕ್ಷರ ಗಾತ್ರ

ನವದೆಹಲಿ: ಡುಕಾಟಿ ಸಂಸ್ಥೆಯ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಡುಕಾಟಿ  ಮಲ್ಟಿಸ್ಟ್ರಾಡಾ 950 ಹಾಗೂ ಮಾನ್‌ಸ್ಟರ್ 797 ಬೈಕ್ ಬಿಡುಗಡೆಯಾಗಲಿದೆ.

ಇಟಲಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಡುಕಾಟಿ ಭಾರತದಲ್ಲಿ ಜೂನ್‌ 14ರಂದು ಎರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ.

ಸಾಹಸ ಪ್ರಿಯರು ಹಾಗೂ ಬೈಕ್‌ ರೈಡಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರಿಗೆ ಡುಕಾಟಿ ನೆಚ್ಚಿನ ಬೈಕ್‌ ಆಗಿದ್ದು ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಈ ವರ್ಷ ಒಟ್ಟು ಐದು ಮಾದರಿಯ ಬೈಕ್‌ಗಳ ಬಿಡುಗಡೆಗೆ  ಸಂಸ್ಥೆ ಮುಂದಾಗಿದೆ.

ಡುಕಾಟಿ ಮಾನ್‌ಸ್ಟರ್ 797:
797 ಮಾನ್‌ಸ್ಟರ್‌ ಸರಣಿಯ ಪ್ರಾರಂಭಿಕ ಹಂತದ ಬೈಕ್‌ ಆಗಿದೆ. 75 ಎಚ್‌ಪಿ ಸಾಮರ್ಥ್ಯದ 803 ಸಿಸಿ ಎಲ್‌–ಟ್ವಿನ್‌ ಇಂಜಿನ್‌ ಹೊಂದಿದೆ.
ಎಕ್ಸ್‌–ಷೋರೂಂ ಬೆಲೆ: ₹7.82 ಲಕ್ಷ

ಡುಕಾಟಿ  ಮಲ್ಟಿಸ್ಟ್ರಾಡಾ 950:
113 ಎಚ್‌ಪಿ ಸಾಮರ್ಥ್ಯದ 937 ಸಿಸಿ ಟ್ವಿನ್‌ ಸಿಲಿಂಡರ್ ಇಂಜಿನ್‌ ಹೊಂದಿದೆ.
ಎಕ್ಸ್‌–ಷೋರೂಂ ಬೆಲೆ: ₹11.53 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT