ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೈಲು ಸಂಚಾರ ಇಂದಿನಿಂದ

Last Updated 23 ಮೇ 2017, 9:59 IST
ಅಕ್ಷರ ಗಾತ್ರ

ರಾಮನಗರ: ರಾಮನಗರ ರೈಲು ನಿಲ್ದಾಣದಲ್ಲಿ ಮಂಗಳವಾರದಿಂದ ಮತ್ತೊಂದು ರೈಲು ನಿಲುಗಡೆಯಾಗಲಿದೆ. ನೂತನವಾಗಿ ಸಂಚಾರ ಆರಂಭಿಸಲಿರುವ ಹುಬ್ಬಳ್ಳಿ–-ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಮಧ್ಯಾಹ್ನ 3 ಗಂಟೆಗೆ ಮೈಸೂರು ಮತ್ತು ಹುಬ್ಬಳ್ಳಿ ಎರಡೂ ಕಡೆಯಲ್ಲೂ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ವೀಡಿಯೊ ಲಿಂಕ್‌ ಮೂಲಕ ಚಾಲನೆ ನೀಡಲಿದ್ದಾರೆ. ಈ ರೈಲು ಸಂಜೆ 4.54ಕ್ಕೆ ರಾಮನಗರಕ್ಕೆ ಬರಲಿದ್ದು, ಸ್ಥಳೀಯರು ಸ್ವಾಗತಿಸಲಿದ್ದಾರೆ.

ಬುಧವಾರದಿಂದ ಈ ರೈಲು (ಗಾಡಿ ಸಂಖ್ಯೆ  07325/07326) ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಟು ಸಂಜೆ 7 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ನಡುವೆ ರಾಮನಗರ ನಿಲ್ದಾಣದಲ್ಲಿ ಬೆಳಿಗ್ಗೆ 7.55 ಕ್ಕೆ ನಿಲುಗಡೆಯಾಗಲಿದೆ. ಇದರಿಂದಾಗಿ ರಾಮನಗರಕ್ಕೆ ಬೆಳಿಗ್ಗೆ 7.50ಕ್ಕೆ ಬರುವ ಮಂಗಳ ಎಕ್ಸ್‌ಪ್ರೆಸ್‌ ಮತ್ತು 8.25ಕ್ಕೆ ಬರುವ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲುಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ. 

ಈ ರೈಲು ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಚನ್ನಪಟ್ಟಣ, ಬಿಡದಿ, ಕೆಂಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ನೈರುತ್ವ ರೈಲ್ವೆಯ ಬೆಂಗಳೂರು ವಿಭಾಗ ಸಲಹಾ ಮಂಡಳಿ ಸದಸ್ಯರಾದ ಪದ್ಮನಾಭ್ ತಿಳಿಸಿದ್ದಾರೆ.

ಶೀಘ್ರವೇ ಟಿಪ್ಪು ಸ್ಟಾಪ್: ‘ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಶೀಘ್ರದಲ್ಲಿ ರಾಮನಗರ ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. ಇದಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಮಧ್ಯಾಹ್ನ 12.40ಕ್ಕೆ ಈ ರೈಲು ನಿಲುಗಡೆ ಆಗಲಿದ್ದು, ಇದರಿಂದ ಮಧ್ಯಾಹ್ನದ ಹೊತ್ತಿನಲ್ಲಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT