ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನರ ಮಾನಸಿಕ ಆರೋಗ್ಯ ಕೆಡಿಸುತ್ತಿದೆ ‘ಇನ್‌ಸ್ಟಾಗ್ರಾಮ್‌’

Last Updated 23 ಮೇ 2017, 10:16 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ಪ್ರಭಾವದ ವಿಷಯವಾಗಿ ನೋಡಿದಾಗ ಯುವ ಜನರ ಮಾನಸಿಕ ಆರೋಗ್ಯ ಕೆಡಿಸುವಲ್ಲಿ ಇನ್‌ಸ್ಟಾಗ್ರಾಮ್‌ ವೇದಿಕೆ ಒದಗಿಸಿಕೊಟ್ಟಿದ್ದು, ಹೆಚ್ಚಿನ ಪರಿಣಾಮ ಬೀರಿದೆ ಎಂದು ಲಂಡನ್‌ನ ಸ್ನ್ಯಾಪ್‌ಷಾಟ್‌ ಸಮೀಕ್ಷೆ ಹೇಳಿದೆ.

14ರಿಂದ24 ವಯೋಮಾನದ 1,479 ಜನರ ಸಮೀಕ್ಷೆ ನಡೆಸಿದ್ದು, ಅವರಿಗೆ ಜನಪ್ರಿಯ ಆ್ಯಪ್‌ಗಳಿಗೆ ಆತಂಕ, ಖಿನ್ನತೆ, ಒಂಟಿತನ, ಬೆದರಿಕೆ ಮತ್ತು ದೇಹದ ಚಿತ್ರಣದಂತಹ ಅಂಶಗಳ ಕುರಿತು ತಮ್ಮ ಆದ್ಯತೆಯನ್ನು ಗುರುತಿಸುವಂತೆ ಹೇಳಿತ್ತು.

ಯುವಜನರಿಗೆ ಸುರಕ್ಷಿತ ವೇದಿಕೆ ಒದಗಿಸುವುದು ಇನ್‌ಸ್ಟಾಗ್ರಾಮ್‌ನ ಮೊದಲ ಆದ್ಯತೆಯಾಗಬೇಕು ಎಂದು ವರದಿ ಹೇಳಿದೆ.

ಬಳಕೆದಾರರ ಮಾನಸಿಕ ಆರೋಗ್ಯದ ಸುರಕ್ಷತೆಗೆ ಇನ್‌ಸ್ಟಾಗ್ರಾಮ್‌ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಸ್ನ್ಯಾಪ್‌ಷಾಟ್‌ ತನ್ನ ವರದಿಯಲ್ಲಿ ಒತ್ತಾಯಿಸಿದೆ. ಈ ಕುರಿತು ಬಿಬಿಸಿ ವರದಿ ಮಾಡಿದೆ.

ಯುಟ್ಯೂಬ್, ಇನ್‌ಸ್ಟಾಗ್ರಾಮ್, ಸ್ನಾಪ್‌ಚಾಟ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರಭಾವ ಬೀರಿವೆಯೇ ಎಂಬ ಬಗ್ಗೆ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡವರಿಗೆ ಪ್ರಶ್ನೆಗಳ ಸರಣಿಯನ್ನು ನೀಡಲಾಗಿತ್ತು.

ಆರೋಗ್ಯ ಮತ್ತು ಯೋಗಕ್ಷೇಮದ ಸಮಸ್ಯೆಗಳಿಗೆ ಆದ್ಯತೆ ನೀಡುವಂತೆ 14 ಅಂಶಗಳನ್ನು ನೀಡಲಾಗಿತ್ತು. ಶ್ರೇಯಾಂಕದ ಆಧಾರದ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಧನಾತ್ಮಕ ಪರಭಾವ ಬೀರುವಲ್ಲಿ ಯುಟ್ಯೂಬ್ ಪರಿಗಣಿಸಲ್ಪಟ್ಟಿದೆ. ನಂತರದ ಸ್ಥಾನದಲ್ಲಿ ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಿವೆ. ಸ್ನ್ಯಾಪ್‌ಚಾಟ್‌ ಮತ್ತು ಇನ್‌ಸ್ಟಾಗ್ರಾಮ್‌ಗಳಿಗೆ ಅತ್ಯಂತ ಕಡಿಮೆ ಅಂಕ ಲಭಿಸಿವೆ.

ಸ್ನ್ಯಾಪ್‌ಚಾಟ್‌ ಮತ್ತು ಇನ್‌ಸ್ಟಾಗ್ರಾಮ್ ಈ ಎರಡಕ್ಕೂ ಸಿಕ್ಕಿರುವ ಶ್ರೇಯಾಂಕ ಪರಿಗಣಿಸಿದಾಗ, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರವಾಗಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ. ಈ ಎರಡೂ ಅತಿ ಹೆಚ್ಚು ಚಿತ್ರಗಳ ಕೇಂದ್ರೀಕೃತವಾಗಿರುವುದರಿಂದ ಅವುಗಳು ಅಸಮರ್ಪಕ ಭಾವನೆಗೆ ಪ್ರಚೋದನೆ ನೀಡುವಂತೆ ಕಾಣಿಸಿಕೊಳ್ಳುತ್ತವೆ. ಯುವ ಜನರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT