ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುವ ಸ್ಥಿತಿ: ಸಿಬ್ಬಂದಿ ಆತಂಕ

Last Updated 23 ಮೇ 2017, 10:17 IST
ಅಕ್ಷರ ಗಾತ್ರ

ಮಾಗಡಿ: ತಹಶೀಲ್ದಾರ ಕಚೇರಿ  ಕಳಪೆ ಕಾಮಗಾರಿಯಿಂದಾಗಿ ಅಪಾಯಕಾರಿ ಸ್ಥಿತಿ ತಲುಪಿದ್ದು, ಮೇಲ್ಛಾವಣಿ ಯಾ ವುದೇ ಕ್ಷಣದಲ್ಲಿ ಕುಸಿದು ಬೀಳಲಿದೆ ಜೀವ ಭಯದಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಮೊದಲನೆ ಮಹಡಿಯಲ್ಲಿ ಭೂಮಾಪನ ಇಲಾಖೆ, ಚುನಾವಣಾ ಕಚೇರಿ,  ಕಂದಾಯ ಇಲಾಖೆಯ ಕಡತ ಗಳು  ಮತ್ತು ಭೂದಾಖಲೆಗಳ ಕಚೇರಿ  ಕೆಲಸ ನಿರ್ವಹಿಸುತ್ತಿವೆ. ಮಳೆ ಬಿದ್ದ ಕೂಡಲೇ ಮಳೆಯ ನೀರೆಲ್ಲ ಕಚೇರಿಯ ಒಳಗೆ ಹರಿದು ನಿಲ್ಲುತ್ತಿದೆ. ನಿತ್ಯ ಕಚೇರಿಯ ಮೇಲ್ಛಾವಣಿಯಿಂದ ಮಣ್ಣು ಕುಸಿದು ಬೀಳುತ್ತಿದೆ. ಮಳೆಯ ನೀರಿನಿಂದ ಅಮೂಲ್ಯವಾದ ಭೂದಾಖಲೆ ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಚೇರಿಯ ಒಳಗೆ ನೀರು ತೊಟ್ಟಿಕ್ಕುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ. ದಂಡಾಧಿಕಾರಿಗಳ ಕಚೇರಿಯೇ ಕಳಪೆಯಿಂದ ಕೂಡಿದೆ ಎಂದರೆ ದೂರುವುದಾದರೂ ಯಾರನ್ನು ? ಎಲ್ಲಾ ಇಲಾಖೆಗಳ ಹಣದ ಬಿಲ್‌ ಪಾಸು ಮಾಡುವ ಖಜಾನೆ ಇಲಾಖೆಯ ಕಚೇರಿ ಸಹ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದೆ.

ನಿತ್ಯ ಸರ್ಕಾರ  ಕಚೇರಿಯ ಒಳಗೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಲ್ಲಿ ಆತಂಕ ಮೂಡಿದೆ. ದುರಸ್ತಿಗೊಳಿಸಲು ನೌಕರರು ಮನವಿ ಮಾಡಿದ್ದಾರೆ. ರಾಜಧಾನಿಯಿಂದ ಕೇವಲ 50 ಕಿ.ಮಿ.ದೂರದ ಚಾರಿತ್ರಿಕ ನಗರಿಯ ದುರಂತ ಚಿತ್ರಣವಿದು ಎಂದು ಮಹಿಳಾ ನೌಕರರು ಕಚೇರಿ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT