ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷದ ಇಲಿ; ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಗ್ರಹಿಸಿದ್ದ ವೀರ್ಯದಿಂದ ಜನಿಸಿದ ಮೊದಲ ಜೀವಿ

ಮಾನವರ ಮಂಗಳಯಾನಕ್ಕೆ ಸಹಕಾರಿಯಾಗಲಿದೆ ಪ್ರಯೋಗ?
Last Updated 23 ಮೇ 2017, 12:23 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಅಂಬಾನಿ)ದಲ್ಲಿ 9 ತಿಂಗಳು ಸಂಸ್ಕರಿಸಿ ಇಡಲಾಗಿದ್ದ ವೀರ್ಯಾಣುವಿನಿಂದ ಜನಿಸಿರುವ ಇಲಿ ಆರೋಗ್ಯವಾಗಿದ್ದು, ಅಂತರಿಕ್ಷ ಯಾನದ ಕುರಿತು ವಿಜ್ಞಾನಿಗಳಲ್ಲಿ ಭರವಸೆ ಮತ್ತಷ್ಟು ಹೆಚ್ಚಿದೆ.

ಈ ಪ್ರಯೋಗದಿಂದಾಗಿ ಅಂತರಿಕ್ಷ ಯಾನದಿಂದ ಸಂತಾನಶಕ್ತಿ ಕುಂದುತ್ತದೆ ಎನ್ನುವ ಭಯ ಕರಗಿದೆ. ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸುವ ಯೋಜನೆಯಲ್ಲಿ ಈ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ.

ಗಗನಯಾತ್ರೆ ಮಾಡುವವರಿಗೆ ಅಧಿಕ ವಿಕಿರಣದ ಪ್ರಭಾವದಿಂದ ಸಂತಾನಶಕ್ತಿ ಕಡಿಮೆಯಾಗುವ ಬಗ್ಗೆ ನಾಸಾ ವಿಜ್ಞಾನಿಗಳು ಚಿಂತಿರಾಗಿ ಹಲವು ಪ್ರಯೋಗಗಳನ್ನು ನಡೆಸಿದ್ದರು.

ಜಪಾನ್‌ನ ಯಮನಾಷಿ ವಿಶ್ವವಿದ್ಯಾಲಯದ ಸಂಶೋಧಕರು ಅಂಡಾಣುವಿನೊಂದಿಗೆ ವೀರ್ಯಾಣು ಸೇರಿಸಿದ ಸಂಗ್ರಹವನ್ನು ಅಂಬಾನಿಯಲ್ಲಿ 288 ದಿನಗಳ ವರೆಗೂ ಇಟ್ಟು ಗಮನಿಸಿದ್ದಾರೆ.

ಭೂಮಿಗಿಂತೂ ಅಂಬಾನಿಯಲ್ಲಿ ಬೀಳುವ ವಿಕಿರಣ 100 ಪಟ್ಟು  ಹೆಚ್ಚಿರುತ್ತದೆ. ಇದು  ಜೀವಕೋಶದೊಳಗಿನ ವಂಶವಾಹಿಗೆ ಹಾನಿ ಮಾಡಬಲ್ಲದಾಗಿದೆ. ಸಂಗ್ರಹಿಸಲಾಗಿದ್ದ ಇಲಿಯ ವೀರ್ಯಾಣುವಿನಲ್ಲಿ ಹಾನಿಯಾಗಿರುವುದು ಕಂಡುಬಂದಿದೆ. ಆದರೆ, ಸಂತಾನದಲ್ಲಿ ಯಾವುದೇ ತೊಂದರೆಯಾಗಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಪ್ರಸ್ತುತ ದೊರೆತಿರುವ ಫಲಿತಾಂಶದಿಂದಾಗಿ ಮಾನವರ ಹಾಗೂ ಇತರೆ ಪ್ರಾಣಿಗಳ ಸಂತಾನ ಕ್ರಿಯೆಗೆ ಅಂತರಿಕ್ಷ ಯಾನದಿಂದ ಆಗಬಹುದಾದ ತೊಂದರೆಯನ್ನು ಗಮನಿಸಬಹುದಾಗಿದೆ.

ಈ ಹಿಂದಿನ ಪ್ರಯೋಗಗಳು:
* ರಷ್ಯಾ ಅಧ್ಯಯನ: 1979ರಲ್ಲಿ ಅಂತರಿಕ್ಷಕ್ಕೆ ಕಳುಹಿಸಿದ್ದ ಗಂಡು ಮತ್ತು ಹೆಣ್ಣು ಇಲಿಗಳು ಒಮ್ಮೆಯೂ ಸಂತಾನ ಕ್ರಿಯೆಯಲ್ಲಿ ತೊಡಗಿರಲಿಲ್ಲ.
* ಶೂನ್ಯ ಗುರುತ್ವ ವಾತಾವರಣದಲ್ಲಿ ಇಡಲಾಗಿದ್ದ ಇಲಿಯು ವೀರ್ಯಾಣು ಉತ್ಪತ್ತಿ ಮಾಡುವ ಶಕ್ತಿ ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT