ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನೀಶ್ವರಸ್ವಾಮಿ ಜಯಂತಿ ಆರಾಧನೆ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಬಡಾವಣೆಯಲ್ಲಿ 31ನೇ ವರ್ಷದ ಶನೀಶ್ವರಸ್ವಾಮಿಯ ಜಯಂತಿ   ಸಮಾರಂಭದ ಅಂಗವಾಗಿ ಮೇ 24ರಿಂದ 28ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಸಂಜೆ 6ರಿಂದ ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ, ಗಂಗಾಪೂಜೆ, ಮಂಗಳ ದ್ರವ್ಯನಯನ, ಅಂಕುರಾರ್ಪಣೆ, ಲಾಂಛನಪೂಜೆ, ಯಾಗಶಾಲಾ ಪ್ರ ವೇಶ, ಪಂಚಗವ್ಯ ಸ್ಥಾಪನೆ, 108 ಕಳಶಸ್ಥಾಪನೆ, ಅಗ್ನಿಮುಖ ಗಣಪತಿ ಹೋಮ, ಲಘು ಪೂರ್ಣಾಹುತಿ.

ಗುರುವಾರ ಬೆಳಿಗ್ಗೆ ಗಣಪತಿ ಪ್ರಾರ್ಥನೆ, ಶ್ರೀಗಳಿಗೆ ಜಲತಿಲ ತೈಲರುದ್ರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ ಹಾಗೂ ನವಗ್ರಹ ಪರಿಹಾರ ಹೋಮ, ಸಹಸ್ರನಾಮಹೋಮ ನಡೆಯಲಿವೆ. ಮದ್ಯಾಹ್ನ 12 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ.

ಮಧ್ಯಾಹ್ನ 11.15ರಿಂದ ಶಶಿಕಲಾ ಕುಲ್‌ಹಳ್ಳಿ ಅವರಿಂದ ಭಕ್ತಿಗೀತೆ, ಮಧ್ಯಾಹ್ನ 1 ಗಂಟೆಯಿಂದ ಭರತನಾಟ್ಯ ಹಾಗೂ ಸಂಜೆ 6ರಿಂದ ಜ್ಯೇಷ್ಟಾದೇವಿ ಸಮೇತ ಶನೀಶ್ವರಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.

ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ಶ್ರೀಗಳಿಗೆ ಜಲಾಭಿಷೇಕ, ತಿಲಧಾನ್ಯ, ನವಧಾನ್ಯ ತಿಲತೈಲ ಹಾಗೂ ತುಳಸಿಬಿಲ್ವ–ಬನ್ನಿಗರಿಕೆ ಪತ್ರೆಯಿಂದ ಅಭಿಷೇಕ,  ಪಂಚಾಮೃತ ಅಭಿಷೇಕ, ವರುಣಹೋಮ, ಧನ್ವಂತರಿ ಹೋಮ ಏರ್ಪಡಿಸಲಾಗಿದೆ. 11 ಗಂಟೆಗೆ ಪೂರ್ಣಾಹುತಿ–108 ಕಳಶಗಳ ಗ್ರಾಮ ಪ್ರದಕ್ಷಿಣೆ ಹಾಗೂ ಶ್ರೀಗಳಿಗೆ ಕುಂಭಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ.

ಮಧ್ಯಾಹ್ನ 1 ಗಂಟೆಯಿಂದ ಸುತ್ತಮುತ್ತಲ ಗ್ರಾಮಗಳ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 7ಗಂಟೆಗೆ ಜೇಷ್ಠಾದೇವಿಸಮೇತ ಶನೀಶ್ವರಸ್ವಾಮಿ ವಿಗ್ರಹದ ಮೆರವಣಿಗೆ. ಜನಪದ ಕಲಾತಂಡಗಳು ಹಾಗೂ ತಮಟೆ ವಾದ್ಯಗಳೊಂದಿಗೆ ಜಕ್ಕೂರು ಹಾಗೂ ಜಕ್ಕೂರು ಬಡಾವಣೆಯ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.

ಶನಿವಾರ ಬೆಳಗ್ಗೆ 9 ಗಂಟೆಗೆ ಪಂಡಿತ್‌ ಕೆ.ನಾಗರಾಜಯ್ಯ ಅವರಿಂದ ಶನೀಶ್ವರಸ್ವಾಮಿ ಕಥೆ ಹಾಗೂ ಸಂಜೆ 6 ಗಂಟೆಗೆ ಶ್ರೀಗಳ ಉಯ್ಯಾಲೆ ಉತ್ಸವ ಮತ್ತು ಶಯನೋತ್ಸವ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT