ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ತಪ್ಪು ಪ್ರಯೋಗ

Last Updated 23 ಮೇ 2017, 19:30 IST
ಅಕ್ಷರ ಗಾತ್ರ
ಟಿ.ವಿ. ವಾಹಿನಿಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಭಾಷೆಯನ್ನು ಕೇಳಿದರೆ ಜುಗುಪ್ಸೆ ಮೂಡುತ್ತದೆ. ಧಾರಾವಾಹಿಗಳಲ್ಲಿನ ನಟ–ನಟಿಯರ ಸಂಭಾಷಣೆ, ಸಂದರ್ಶನದಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅನೇಕರು ಕನ್ನಡವನ್ನು ಕೆಟ್ಟದಾಗಿ ಆಡಿ ಭಾಷಾ ಮರ್ಯಾದೆಗೆ ಭಂಗ ತರುತ್ತಿದ್ದಾರೆ.
 
ಕೆಲವು ಧಾರಾವಾಹಿಗಳ ಶೀರ್ಷಿಕೆಗಳಲ್ಲೇ ಕಾಗುಣಿತ ದೋಷಗಳಿವೆ.  ಗೃಹಪ್ರವೇಶವನ್ನು ‘ಗ್ರಹ’ಪ್ರವೇಶವೆಂದು, ‘ನನಗಿಂತ’, ‘ನಿನಗಿಂತ’  ಪ್ರಯೋಗಗಳನ್ನು ‘ನನಕಿಂತ’, ‘ನಿನಕಿಂತ’ ಎಂದು ಉಚ್ಚರಿಸಲಾಗುತ್ತಿದೆ. ಈ ‘ಕಿಂತ’ ಕೆಲವೊಮ್ಮೆ ‘ಕಿನ್ನ’ ಆಗುವುದುಂಟು. ಗ್ರಾಮೀಣ ಆಡುಭಾಷೆಯಲ್ಲಿ ಈ ಪ್ರಯೋಗಗಳನ್ನು ಒಪ್ಪಬಹುದು. ಆದರೆ ಶಿಷ್ಟರ ಬಾಯಲ್ಲಿ ಕೇಳಲಾಗದು. 
 
ನಾವು ಕನ್ನಡಿಗರು ಭಾಷೆಯನ್ನು ಆಡುವಾಗ ತಮಿಳರನ್ನು ತೆಲುಗರನ್ನು ಆದರ್ಶವಾಗಿರಿಸಿಕೊಳ್ಳಬೇಕು. ಅದೆಷ್ಟು ಶುದ್ಧವಾಗಿ ಮಾತಾಡುತ್ತಾರವರು! ಕನ್ನಡಿಗರು ನಿಜಕ್ಕೂ ಭಾಷೆ ಕುರಿತಂತೆ ಅಭಿಮಾನಶೂನ್ಯರೇ ಸರಿ. ನಿರ್ದೇಶಕ ರಾಮಗೋಪಾಲ ವರ್ಮಾ ಅವರ  ಹೇಳಿಕೆ ಸರಿಯಾಗಿದೆ. 
ಎನ್. ನರಹರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT