ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾರ್ಕ್‌ ವಿಚಾರಣೆ ಆರಂಭ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಸೋಲ್‌ : ಭಾರಿ ಭ್ರಷ್ಟಾಚಾರ  ನಡೆಸಿರುವ ಆರೋಪದ ಮೇಲೆ ಬಂಧಿತರಾಗಿರುವ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾರ್ಕ್‌ ಜಿಯುನ್‌ ಹೈ ಅವರ ವಿಚಾರಣೆ  ಮಂಗಳವಾರ ಆರಂಭವಾಯಿತು.

ಸೋಲ್‌ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಬಂದ ಪಾರ್ಕ್‌ ಅವರಿಗೆ ನ್ಯಾಯಾಧೀಶ ಕಿಮ್‌ ಸೆ–ಯನ್‌  ಕೆಲವು ಪ್ರಶ್ನೆಗಳನ್ನು ಕೇಳಿದರು.
ಕಳೆದ ಡಿಸೆಂಬರ್‌ನಲ್ಲಿ ಸಂಸತ್ತು  ಪಾರ್ಕ್‌ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕರಿಸಿತ್ತು. ಇದನ್ನು ಸಾಂವಿಧಾನಿಕ ನ್ಯಾಯಾಲಯ ಎತ್ತಿ ಹಿಡಿದ ಒಂದು ವಾರದಲ್ಲೇ  ಬಂಧಿಸಲಾಗಿತ್ತು.

ಬಂಧನದ ಬಳಿಕ ಮಾಜಿ ಅಧ್ಯಕ್ಷೆ  ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT