ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ರಿಲೆಯಲ್ಲಿ ಭಾರತಕ್ಕೆ ಚಿನ್ನ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ :  ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಭಾರತದ ಮೆಡ್ಲೆ ರಿಲೇ ತಂಡದವರು ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಏಷ್ಯನ್ ಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

ಗುರಿಂದರ್‌ವೀರ್ ಸಿಂಗ್‌, ಪಾಲೇಂ ದರ್ ಕುಮಾರ್‌, ಮನೀಶ್‌ ಮತ್ತು ಅಕ್ಷಯ್‌ ನಾಯ್ನ್‌ ಅವರನ್ನು ಒಳ ಗೊಂಡ ತಂಡ 1:55.62 ಸೆಕೆಂಡು ಗಳಲ್ಲಿ ಗುರಿ ತಲುಪಿ ಚೀನಾ ತೈಪೆಯನ್ನು (1:55.71 ಸೆಕೆಂಡು) ಹಿಂದಿಕ್ಕಿದರು. ಹಾಂಕಾಂಗ್‌ ತಂಡದವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಬಾಲಕರ ವಿಭಾಗದ ಜಾವೆಲಿನ್‌ ಥ್ರೋ ಸ್ಪರ್ಧೆಯ ಬೆಳ್ಳಿ ಮತ್ತು ಕಂಚಿನ ಪದಕವನ್ನು ಭಾರತದ ಅಥ್ಲೀಟ್‌ಗಳು ಗೆದ್ದರು. ಉತ್ತರ ಪ್ರದೇಶದ ರೋಹಿತ್ ಯಾದವ್‌ (74.30 ಮೀಟರ್ಸ್‌) ಮತ್ತು ಅವಿನಾಶ್ ಯಾದವ್‌ (70.09 ಮೀ) ಕ್ರಮವಾಗಿ ಈ ಸಾಧನೆ ಮಾಡಿದರು. 

ಈ ಮೂಲಕ ಭಾರತ ತಲಾ ಐದು ಚಿನ್ನ ಮತ್ತು ಬೆಳ್ಳಿ, ನಾಲ್ಕು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. 16 ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದ ಚೀನಾ ಪ್ರಥಮ ಸ್ಥಾನ ಗಳಿಸಿದರೆ, ಆರು ಚಿನ್ನ, ಏಳು ಬೆಳ್ಳಿ ಮತ್ತು ಎರಡು ಕಂಚು ಗೆದ್ದ ಚೀನಾ ತೈಪೆ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಕೂಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟವರು: ಗುರಿಂದರ್‌ವೀರ್‌ ಸಿಂಗ್‌ (ಬಾಲಕರ 100 ಮೀ, ಚಿನ್ನ); ಅಭಿಷೇಕ್ ಮ್ಯಾಥ್ಯೂ (ಬಾಲಕರ 800ಮೀ, ಚಿನ್ನ); ಅಭಯ್‌ ಗುಪ್ತಾ (ಬಾಲಕರ ಡಿಸ್ಕಸ್ ಥ್ರೋ, ಚಿನ್ನ); ಸಂಜಯ್‌ ಕುಮಾರ್‌ (ಬಾಲಕರ 10,000ಮೀ ನಡಿಗೆ, ಚಿನ್ನ); ಗುರಿಂದರ್‌ವೀರ್‌ ಸಿಂಗ್‌, ಪಾಲೇಂದರ್‌ ಕುಮಾರ್‌, ಮನೀಶ್‌, ಅಕ್ಷಯ್‌ ನಾಯ್ನ್‌ (ಬಾಲಕರ ಮೆಡ್ಲೆ ರಿಲೇ, ಚಿನ್ನ); ದಮನೀತ್ ಸಿಂಗ್‌ (ಬಾಲಕರ ಹ್ಯಾಮರ್‌ ಥ್ರೋ, ಬೆಳ್ಳಿ); ಮೋಹಿತ್ (ಬಾಲಕರ ಶಾಟ್‌ಪಟ್‌, ಬೆಳ್ಳಿ; ಡೆಕಾಥ್ಲಾನ್‌, ಬೆಳ್ಳಿ); ಸಾಹಿಲ್‌ ಸಿಲ್ವಾಲ್‌ (ಬಾಲಕರ ಡಿಸ್ಕಸ್ ಥ್ರೋ ಬೆಳ್ಳಿ); ರೋಹಿತ್ ಯಾದವ್‌ (ಬಾಲಕರ ಜಾವೆಲಿನ್ ಥ್ರೋ, ಬೆಳ್ಳಿ); ನಿತೇಶ್ ಪೂನಿಯಾ (ಬಾಲಕರ ಹ್ಯಾಮರ್ ಥ್ರೋ, ಕಂಚು); ಸೀಮಾ (ಬಾಲಕಿಯರ 3000 ಮೀ ಓಟ, ಕಂಚು); ಅಕ್ಷಯ್‌ ನಾಯ್ನ್‌ (ಬಾಲಕರ 400 ಮೀ, ಕಂಚು); ಅವಿನಾಶ್‌ ಯಾದವ್‌ (ಬಾಲಕರ ಜಾವೆಲಿನ್ ಥ್ರೋ, ಕಂಚು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT