ಮಿಥಾಲಿ ಶತಕದ ಸಾಧನೆ
ಟೂರ್ನಿಯ ಫೈನಲ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದರೊಂ ದಿಗೆ ಮಿಥಾಲಿ ರಾಜ್ ‘ಶತಕ’ ಸಾಧನೆ ಮಾಡಿದರು. ಅವರು ಈಗ ಭಾರತ ತಂಡವನ್ನು 100 ಪಂದ್ಯಗಳಲ್ಲಿ ಮುನ್ನಡೆಸಿದ ಏಕೈಕ ಆಟಗಾರ್ತಿ. ಶತಕ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ್ತಿ ಕೂಡ. ಇಂಗ್ಲೆಂಡ್ನ ಚಾರ್ಲೋಟ್ ಎಡ್ವರ್ಡ್ಸ್ (117 ಪಂದ್ಯಗಳು) ಮತ್ತು ಆಸ್ಟ್ರೇಲಿಯಾದ ಬೆಲಿಂದ ಕ್ಲಾರ್ಕ್ (101) ಕೂಡ 100 ಪಂದ್ಯಗಳಲ್ಲಿ ತಂಡಗಳನ್ನು ಮುನ್ನಡೆಸಿದ್ದಾರೆ.