ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮೂಹಿಕ ವಿವಾಹ ವರದಾನ’

Last Updated 24 ಮೇ 2017, 5:44 IST
ಅಕ್ಷರ ಗಾತ್ರ

ಕನಕಗಿರಿ: ಬರಗಾಲದ ಸಮಯದಲ್ಲಿ ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸರಳ ಹಾಗೂ ಸಾಮೂಹಿಕ ವಿವಾಹ ಸೂಕ್ತ ಎಂದು ಗಂಗಾಮತ ಸಮಾಜದ ಗುರುಗಳಾದ ವೇ.ಮೂ.ಶಾಂತಭೀಷ್ಮ ಚೌಡಯ್ಯ ತಿಳಿಸಿದರು.

ಸಮೀಪದ ಹೇರೂರು ಗ್ರಾಮದಲ್ಲಿ ಮಂಗಳವಾರ  ನಡೆದ ಗಂಗಾಪರಮೇಶ್ವರಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮೂಹಿಕ ವಿವಾಹಗಳಿಂದ ದೇಶದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಸಾಧ್ಯವಿದೆ. ಆಡಂಬರಕ್ಕೆ ಕಡಿವಾಣ ಹಾಕುವುದು ಅನಿವಾರ್ಯ. ಸರ್ವರಿಗೆ ಸಮಬಾಳು, ಸಮ ಪಾಲು ಎಂಬ ತತ್ವ ಸಾಮೂಹಿಕ ವಿವಾಹದಲ್ಲಿ ಅಡಗಿದೆ’ ಎಂದು ಹೇಳಿದರು.

ಗಂಗಾಪರಮೇಶ್ವರಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ ಕಳಸದೊಂದಿಗೆ ಭಾಗವಹಿಸಿದ್ದರು. ಭಾಜಾ ಭಜಂತ್ರಿ, ಡೊಳ್ಳು ಕುಣಿತ ತಂಡಗಳು ಭಾಗವಹಿಸಿದ್ದವು.

ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ ಹೇರೂರು, ತಾಲ್ಲೂಕು ಪಂಚಾಯಿತಿ ಸದಸ್ಯ ವಿರುಪಾಕ್ಷಗೌಡ ಪಾಟೀಲ, ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರ ಮುಸ್ಟೂರ. ಸಮಾಜದ ಮುಖಂಡ ವಿರುಪಣ್ಣ ಕಲ್ಲೂರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ  ಶಶಿಧರಗೌಡ ಪಾಟೀಲ, ಕನಕಗಿರಿ ವಿಧಾನಸಭಾ ಕ್ಷೇತ್ರದ ಗಂಗಾಮತ ಸಮಾಜದ ಅಧ್ಯಕ್ಷ ಹನುಮಂತಪ್ಪ ಬೇವಿನಾಳ, ಮಾಜಿ ಅಧ್ಯಕ್ಷ ಟಿ.ಜೆ.ರಾಜಶೇಖರ, ಮುಖಂಡರಾದ ಶರಣಪ್ಪ ಕಾಯಿಗಡ್ಡೆ, ಅಯ್ಯಪ್ಪ ಸಂಗಟಿ, ಸಿದ್ದಪ್ಪ ಬೇವಿನಾಳ, ಕೃಷ್ಣ ಬೆನಕನಾಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT