ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ: ಹೈಟೆಕ್‌ ಶೌಚಾಲಯ ನಿರುಪಯುಕ್ತ

Last Updated 24 ಮೇ 2017, 5:56 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ವಾಸವಿರುವ ಗಾಂಧಿ ಕಾಲೊನಿಯಲ್ಲಿ ಸ್ಥಳೀಯ ಹಟ್ಟಿ ಚಿನ್ನದ ಗಣಿ ಅಧಿಸೂಚಿತ ಪ್ರದೇಶ ಸಮಿತಿ ನಿರ್ಮಿಸಿರುವ ಸಾಮೂಹಿಕ ಹೈಟೆಕ್‌ ಶೌಚಾಲಯ ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ.

‘ಗಾಂಧಿ ಕಾಲೊನಿಯಲ್ಲಿರುವ ಬಹುತೇಕ ಮನೆಗಳಿಗೆ ವೈಯಕ್ತಿಕ ಶೌಚಾಲಯಗಳು ಇಲ್ಲ.  ಮಹಿಳೆಯರು ಶೌಚಕ್ಕಾಗಿ ಬಯಲನ್ನು ಅವಲಂಭಿಸಬೇಕಾಗಿದೆ. ಮಹಿಳೆಯರ ಆಗ್ರಹದ ಮೇರೆಗೆ ಇಲ್ಲಿಯ ಅಧಿಸೂಚಿತ ಪ್ರದೇಶ ಸಮಿತಿ ಕಾರ್ಮಿಕ ಕುಟುಂಬಗಳ ಅನುಕೂಲಕ್ಕಾಗಿ 2009–10ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಿ, ಹಟ್ಟಿ ಚಿನ್ನದ ಗಣಿ ಕಂಪೆನಿಗೆ ಹಸ್ತಾಂತರಿಸಿದೆ.

ಆದರೆ, ಈ ಶೌಚಾಲಯಕ್ಕೆ ಅಗತ್ಯ ಸೌಕರ್ಯ ಒದಗಿಸದ ಕಾರಣ ನಿರುಪಯುಕ್ತವಾಗಿದೆ’ ಎಂದು ಕಾರ್ಮಿಕರು ದೂರುತ್ತಾರೆ.‘ಹೈಟೆಕ್‌ ಶೌಚಾಲಯಗಳು ನಿರ್ಮಿಸಲಾಗಿದೆ ಎಂದು ಈಗಾಗಲೇ ಕಾಲೊನಿಯಲ್ಲಿ ಇದ್ದ ಸಾಮೂಹಿಕ ಶೌಚಾಲಯಗಳ ನಿರ್ವಹಣೆ ನಿಲ್ಲಿಸಿದ್ದರಿಂದ ಗಬ್ಬು ನಾರುತ್ತಿವೆ.

ಹೈಟೆಕ್‌ ಶೌಚಾಲಯಕ್ಕೆ ನೀರು ಮತ್ತು ವಿದ್ಯುತ್‌ ಪೂರೈಕೆ ಮಾಡದ ಕಾರಣ ಹಾಳಾಗಿದೆ. ಅಧಿಕಾರಿಗಳು ಅಗತ್ಯ ಸೌಕರ್ಯಗಳನ್ನು ಪೂರೈಸಬೇಕು’ ಎಂದು ಕಾರ್ಮಿಕರಾದ ತುಳಜಾರಾಮ, ರಂಗಪ್ಪ, ಮಹಾಂತೇಶ, ಬಸವರಾಜ, ನಾಗರಾಜ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT