ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯಾಚಿನ್‌ ನೀರ್ಗಲ್ಲು ಪ್ರದೇಶದ ಸಮೀಪ ಪಾಕಿಸ್ತಾನದ ಫೈಟರ್‌ ಜೆಟ್‌ ಹಾರಾಟ?

ಪಾಕಿಸ್ತಾನ ಮಾಧ್ಯಮಗಳ ವರದಿ
Last Updated 24 ಮೇ 2017, 9:21 IST
ಅಕ್ಷರ ಗಾತ್ರ

ಸ್ಕರ್ದು: ಪಾಕಿಸ್ತಾನ ವಾಯುಪಡೆ(ಪಿಎಎಫ್‌)ಯ ಫೈಟರ್‌ ಜೆಟ್‌ಗಳು  ಸಿಯಾಚಿನ್‌ ನೀರ್ಗಲ್ಲು ಪ್ರದೇಶದ ಸಮೀಪ ಬುಧವಾರ ಹಾರಾಟ ನಡೆಸಿರುವ ಕುರಿತು ವರದಿಯಾಗಿದೆ.

ಪಾಕಿಸ್ತಾನ ವಾಯು ಪಡೆ ಮುಖ್ಯಸ್ಥ ಸೊಹೈಲ್‌ ಅಮನ್‌ ಸ್ಕರ್ದು ಪ್ರದೇಶದ ವಾಯುನೆಲೆಗೆ ಭೇಟಿ ನೀಡಿ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.

ಫೈಟರ್‌ ಜೆಟ್‌ಗಳನ್ನು ಮುನ್ನಡೆಸುವ ಪೈಲಟ್‌ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಚರ್ಚಿಸಿದ್ದಾರೆ ಈ ಕುರಿತು ಪಿಎಎಫ್‌ ಮೂಲಗಳಿಂದ ತಿಳಿದು ಬಂದಿದೆ ಎಂದು ಪಾಕಿಸ್ತಾನದ ‘ಸಮಾ’ ಮಾಧ್ಯಮ ವರದಿ ಮಾಡಿದೆ.

ಸಿಯಾಚಿನ್‌ ಸಮೀಪ ಪಾಕಿಸ್ತಾನದ ಜೆಟ್‌ ಹಾರಾಟ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವಾಯು ಪಡೆ, ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿರುವಂತೆ ಭಾರತೀಯ ವಾಯುಭಾಗದಲ್ಲಿ ಪಾಕಿಸ್ತಾನದ ಕಡೆಯಿಂದ ಯಾವುದೇ ಅತಿಕ್ರಮಣ ಪ್ರವೇಶ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಅನಿಶ್ಚಿತ ದಾಳಿ’ ಎದುರಿಸಲು ಸಿದ್ಧರಾಗಿರುವಂತೆ ವಾಯುಪಡೆಯ ಎಲ್ಲ ಅಧಿಕಾರಿಗಳಿಗೆ ಭಾರತದ ಏರ್‌ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಇತ್ತೀಚೆಗೆ ಪತ್ರ ಬರೆದಿದ್ದರು.

‘ಪ್ರಸ್ತುತ ಸನ್ನಿವೇಶದಲ್ಲಿ ನಮಗೆ ದಾಳಿ ಭೀತಿ ಇದೆ. ಹೀಗಾಗಿ ನಮ್ಮಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ನಾವು ಅತ್ಯಲ್ಪ ಸಮಯದಲ್ಲಿ ಸನ್ನದ್ಧರಾಗಬೇಕು. ಆ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT