ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಶ್ರೀ ಕೊಡುಗೆ ಅಪಾರ

Last Updated 24 ಮೇ 2017, 9:23 IST
ಅಕ್ಷರ ಗಾತ್ರ

ಬ್ಯಾಡಗಿ: ಬಸವಣ್ಣನವರ ಸಮಾನತೆಯ ಕ್ರಾಂತಿಯ ಬಳಿಕ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿದ್ದ ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಲು ಹಾನಗಲ್ ಕುಮಾರ ಶಿವಯೋಗಿಗಳು 1904ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭಾ‘ ಸ್ಥಾಪಿ ಸುವ ಮೂಲಕ ಸಮಾಜವನ್ನು ಜಾಗೃತ ಗೊಳಿಸಿದ್ದಾರೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟ ಪದ ಬಯಲು ರಂಗಮಂದಿರದಲ್ಲಿ ಶಿವ ಯೋಗ ಮಂದಿರ ಸಂಸ್ಥೆಯ ಸಂಸ್ಥಾಪಕ ಹಾನಗಲ್ ಕುಮಾರ ಶಿವಯೋಗಿಗಳ 150ನೇ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಸಂಗೀತ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆ ಕೊಡುಗೆ ನೀಡಿರುವ ಕುಮಾರಶಿವಯೋಗಿಗಳು ಹಿರೇಕೆರೂರಿ ನಲ್ಲಿ ಅಕ್ಕಮಹಾದೇವಿ ಮಹಾವಿದ್ಯಾ ಲಯ ಸ್ಥಾಪಿಸಿ ಮಹಿಳೆಯರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ನಾಡಿನಾದ್ಯಂತ ವಿರಕ್ತಮಠಗಳನ್ನು ಸ್ಥಾಪಿಸುವ ಮೂಲಕ ವೀರಶೈವ ಸಮಾಜವನ್ನು ಜಾಗೃತ ಗೊಳಿಸಲು ಯತ್ನಿಸಿದರು ಎಂದರು.

ಹುಬ್ಬಳ್ಳಿಯ ದಾನೇಶ್ವರ ದೇವರು ಮಾತನಾಡಿ 1909ರಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಿ ಲಿಂಗ ಹಾಗೂ ವಿಭೂತಿ ತಯಾರಿಕೆಗೆ ಮಹತ್ವ ನೀಡಿದ್ದ ಕುಮಾರ ಶಿವಯೋಗಿಗಳು ವೀರಶೈವ ಸಮಾಜ ಸುಧಾರಣೆಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದರು. ಉತ್ತಮ ಸಂಸ್ಕಾರಕ್ಕೆ ಶಿವ ಹಾಗೂ ಗುರುವಿನ ದರ್ಶನ ಅವಶ್ಯ ಎನ್ನುವುದನ್ನು ನಾಡಿಗೆ ಪರಿಚಯಿಸಿದರು ಎಂದರು.

ಮುಪ್ಪಿನಸ್ವಾಮಿ ವಿರಕ್ತಮಠದ ಮಲ್ಲಿ ಕಾರ್ಜುನ ಸ್ವಾಮಿಗಳು ಮಾತನಾಡಿ ಹಾನಗಲ್ ತಾಲ್ಲೂಕು ಕಾಡಶೆಟ್ಟಿಹಳ್ಳಿಯ ಅಂಧ ಗದಿಗೆಯ್ಯವರನ್ನು ಪಂಚಾಕ್ಷರಿ ಗಯಾಯಿಗಳನ್ನಾಗಿ ರೂಪಿಸುವಲ್ಲಿ ಕುಮಾರ ಸ್ವಾಮಿಗಳ ಶ್ರಮ ಅನನ್ಯ ಎಂದು ಹೇಳಿದರು.

ಅಕ್ಕಿಆಲೂರು ವಿರಕ್ತಮಠದ ಶಿವ ಬಸವ ಸ್ವಾಮೀಜಿ, ಹಾವನೂರು ದಳ ವಾಯಿ ಮಠದ ಶಿವಕುಮಾರ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ ಇದ್ದರು. ನೇತ್ರಾ ಪಾಟೀಲ ಪ್ರಾರ್ಥಿಸಿದರು. ಜಗದೀಶ ರೋಣದ ಸ್ವಾಗತಿಸಿದರು. ಪ್ರೊ.ಸಿ.ಶಿವಾನಂದಪ್ಪ ನಿರೂಪಿಸಿದರು.

ಮೋಟೆಬೆನ್ನೂರ: ತಾಲ್ಲೂಕಿನ ಮೋಟೆ ಬೆನ್ನೂರ ಗ್ರಾಮದ ಕೋಟೆ ಬೈಲಿನಲ್ಲಿ ಸೋಮವಾರ ಸಂಜೆ ಹಾನಗಲ್‌ ಕುಮಾರ ಶಿವಯೋಗಿಗಳ 150ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ನಿವೃತ್ತ ಎಂಜನಿ ಯರ್‌ ಚನ್ನಪ್ಪ ಬಳ್ಳಾರಿ ಉದ್ಘಾಟಿಸಿದರು. ಅಕ್ಕಿಆಲೂರು ವಿರಕ್ತಮಠದ  ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ದೇಶಿ ಕೇಂದ್ರ ಸ್ವಾಮೀಜಿ, ಹುಬ್ಬಳ್ಳಿಯ ದಾನೇಶ್ವರ ದೇವರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲವ್ವ ಬ್ಯಾಟಪ್ಪನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಶಿವಬಸಪ್ಪ ಕುಳೇನೂರ, ನಿವೃತ್ತ ಉಪನ್ಯಾಸಕ ಡಾ.ಪಿ.ಟಿ.ಲಕ್ಕಣ್ಣನವರ, ಬಸವರಾಜ ಹಾವೇರಿಮಠ, ಅಡಿವೆಪ್ಪ ಕುರಿಯವರ, ವಕೀಲ ಬಸವರಾಜ ಬಳ್ಳಾರಿ ಉಪಸ್ಥಿತರಿದ್ದರು.  ಬಸವರಾಜ ಬೆನಕನ ಕೊಂಡ ಸ್ವಾಗತಿಸಿದರು. ನಿಂಗಪ್ಪ ಅಂಗಡಿ ವಂದಿಸಿದರು.

ಸುಧಾರಣೆಯ  ಹರಿಕಾರ
ಹಿರೇಕೆರೂರ: ದೂರದೃಷ್ಟಿಯ ಚಿಂತನೆ ಯಿಂದ ಸಾಮಾಜಿಕ ಸಂಘಟನೆ ಮೂಲಕ ಅಕ್ಷರ ಜ್ಞಾನ ನೀಡಿ ಜ್ಞಾನವನ್ನು ಇಮ್ಮಡಿ ಗೊಳಿಸುವ ಕಾರ್ಯ ಮಾಡಿ ಸಮಾಜಕ್ಕೆ ಸಂಸ್ಕಾರ ಕೊಟ್ಟವರು ಹಾನಗಲ್ ಕುಮಾರ ಸ್ವಾಮಿಗಳು ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಲಿಂ.ಹಾನಗಲ್ ಕುಮಾರ ಸ್ವಾಮಿಗಳ 150ನೇ ಜಯಂತ್ಯುತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀ ರ್ವಚನ ನೀಡಿದ ಅವರು, ಸಂಸ್ಕಾರ ದಿಂದ ಮನುಷ್ಯ ಮಹಾದೇವನಾಗಲು ಸಾಧ್ಯವಿದೆ ಎಂದರು.

ತಿಪ್ಪಾಯಿಕೊಪ್ಪ ಮೂಕಪ್ಪ ಶಿವ ಯೋಗಿಗಳ ಮಠದ ಉತ್ತರಾಧಿಕಾರಿ ಮಹಾಂತ ದೇವರು ಮಾತನಾಡಿ, ತ್ಯಾಗದಿಂದ ಮಾತ್ರ ಅಮೃತ ತತ್ವ ಪಡೆ ಯಲು ಸಾಧ್ಯ. ಸಮಾಜಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದ ಕುಮಾರ ಶ್ರೀಗಳು ಸಮಾಜದ ಆರೋಗ್ಯಕ್ಕೆ ಶ್ರಮಿಸಿದವರು ಎಂದು ಹೇಳಿದರು.

ಅಕ್ಕಿಆಲೂರು ಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಾವ ನೂರು ಮಠದ ಶಿವಕುಮಾರ ಸ್ವಾಮೀಜಿ, ಯರನಾಳ ಮಠದ ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ಎಂ.ಬಿ.ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಸದಸ್ಯ ಶಿವರಾಜ ಹರಿಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT