ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿಗೆ ಜಿಟಿಟಿಸಿ ಉತ್ತಮ ಆಯ್ಕೆ

Last Updated 24 ಮೇ 2017, 10:09 IST
ಅಕ್ಷರ ಗಾತ್ರ

ಕೂಡಲಸಂಗಮ: ಕೆಳ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣದ ಜೊತೆಗೆ ಉದ್ಯೋಗ ಕೊಡು ವಂತಹ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಯ ಏಕೈಕ ಕೇಂದ್ರವಾಗಿ ಕೂಡಲಸಂಗಮದಲ್ಲಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ–ವಿದೇಶ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್.ಎಸ್.ಎಲ್.ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿ ಯಲ್ಲಿ ಪ್ರವೇಶ ಪಡೆಯಬಹುದು.

ವೃತ್ತಿ ತರಬೇತಿ ಪಡೆಯುವವರಿಗಾಗಿ ರಾಜ್ಯ ಸರ್ಕಾರ 2000ನೇ ಇಸ್ವಿಯಲ್ಲಿ ಇಲ್ಲಿ ಜಿಟಿಟಿಸಿ ಆರಂಭಿಸಿದೆ. ಇಲ್ಲಿ ತರಬೇತಿ ಪಡೆದವರು ನಿರುದ್ಯೋಗಿ ಯಾಗಿ ಉಳಿದಿಲ್ಲ. ಎಸ್.ಎಸ್.ಎಲ್.ಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ 4 ವರ್ಷದ ಡಿಪ್ಲೊಮಾ ಕೋರ್ಸ್‌ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ ಇಲ್ಲಿದೆ. 2017–18ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನ.

ಟೂಲ್ & ಡೈ ಮೇಕಿಂಗ್ ಮೂರು ವರ್ಷದ ವಿಷಯಾಧಾರಿತ ತರಬೇತಿ ಹಾಗೂ ಒಂದು ವರ್ಷದ ಕೈಗಾರಿಕೆಗಳಲ್ಲಿ ಉದ್ಯಮ ತರಬೇತಿ ಇರುತ್ತದೆ. ಈ ಒಂದು ವರ್ಷದ ಉದ್ಯಮ ತರಬೇತಿ ಯಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತಿ ತಿಂಗಳು ₹ 10 ರಿಂದ 13 ಸಾವಿರ ಗೌರವ ಧನವನ್ನು ಕಾರ್ಯನಿರ್ವಹಿಸುವ ಕಂಪನಿ ಕೊಡುತ್ತದೆ.

ಸೆಮಿಸ್ಟೆರ್ ಪದ್ಧತಿ ಅಳವಡಿಸಿಕೊಳ್ಳ ಲಾಗಿದ್ದು, ಪ್ರತಿ ಸೆಮಿಸ್ಟರ್‌ಗೆ ₹ 11,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ನಾಲ್ಕನೇಯ ವರ್ಷದಲ್ಲಿ ಒಂದು ವರ್ಷಕ್ಕೆ ₹ 11,000 ಶುಲ್ಕ ಭರಿಸಬೇಕಾಗುತ್ತದೆ. ಟೂಲ್ & ಡೈ ಮೇಕಿಂಗ್ ವಿಭಾಗ ದಲ್ಲಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಮೆರಿಟ್ ಕಮ್ ರೋಸ್ಟರ್ ಪದ್ಧತಿಯಲ್ಲಿ ಇದೆ.  20 ಸ್ಥಾನಗಳು ವಿದ್ಯಾರ್ಥಿನಿಯರಿಗೆ ಮೀಸಲಾಗಿಡಲಾಗಿದೆ.

ಇದಲ್ಲದೇ ಒಂದು ವರ್ಷ ಅವಧಿಯ ಕಾಂಪೋಸಿಟ್ ಮಶಿನಿಷ್ಟ ಮತ್ತು 2 ವರ್ಷ ಅವಧಿಯ ಟೂಲ್ & ಡೈ ಟೆಕ್ನೀಷಿ ಯನ್, ಮೂರು ವರ್ಷದ ಕಾಂಫಿಟೆನ್ಸಿ ಸರ್ಟಿಫಿಕೇಟ್ ಡಿಪ್ಲೋಮಾ  ಮುಂತಾದ ಅಲ್ಪಾವಧಿ ವೃತ್ತಿ ತರಬೇತಿ ಕೋರ್ಸ್‌ ಗಳನ್ನು ಜಿಟಿಟಿಸಿಯಲ್ಲಿ ಅಳವಡಿಸಿ ಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಒಂದು ವರ್ಷದ ಅಧ್ಯಯನಕ್ಕೆ ₹ 20 ಸಾವಿರ ಶುಲ್ಕ ಭರಿಸ ಬೇಕಾಗುತ್ತದೆ. ಕಾಂಪೋಸಿಟ್ ಮಷಿನಿಸ್ಟ್‌ನಲ್ಲಿ 30 ಸ್ಥಾನ ಹಾಗೂ ಟೂಲ್ ಆಂಡ್ ಡೈ ಟೆಕ್ನಿಷಿಯನ್‌ನಲ್ಲಿ 30 ಸ್ಥಾನಗಳಿಗೆ ಪ್ರವೇಶ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮೊ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ಗೆ  ಲ್ಯಾಟರಿಲ್ ಪ್ರವೇಶ ಹೊಂದಲು ಅವಕಾಶವಿದೆ. ಜಿಟಿಟಿಸಿ ಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ.

ತರಬೇತಿ ನೀಡಲು 15 ಉಪನ್ಯಾಸಕರು, 8 ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆ ಯುವುದು.  ಒನ್ ರೂಫ್ ಕ್ಯಾಂಪಸ್ ಆಗಿರುವ ಈ ಶಿಕ್ಷಣ ಕೇಂದ್ರ 10 ಎಕರೆ ವಿಶಾಲವಾದ ಜಾಗದಲ್ಲಿ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಇವೆ.

ಸಂಪರ್ಕಕ್ಕೆ ಪ್ರಾಚಾರ್ಯರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೂಡಲಸಂಗಮ – 587115. ದೂ–  08351-–268048, ಮೊ–  7411811916/ 8147123234

ಅಂಕಿ–ಅಂಶ
650 ಇಲ್ಲಿಯವರೆಗೆ ತರಬೇತಿ ಪೂರ್ಣಗೊಳಿಸಿದವರು

480 ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗ

162 ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು

* * 

ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ, ಮಧ್ಯಮ ವರ್ಗದ ಮಕ್ಕಳು ನಿಶ್ಚಿತವಾಗಿ ಬಹುಬೇಗ ಉದ್ಯೋಗ ಹೊಂದಲು ಜಿಟಿಟಿಸಿ ಉತ್ತಮ ಆಯ್ಕೆ
ಯಲ್ಲಪ್ಪ ಸವದತ್ತಿ
ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT