ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಭಾರತದ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೊ ಮೋಟೊಕಾರ್ಪ್, ಐ3ಎಸ್‌ ತಂತ್ರಜ್ಞಾನ ಒಳಗೊಂಡ ಎಚ್‌ಎಫ್‌ ಡಿಲಕ್ಸ್‌ ಮಾದರಿಯ ಬೈಕನ್ನು ಬಿಡುಗಡೆಗೊಳಿಸಿದೆ.

ಈ ಹೀರೊ ಡಿಲಕ್ಸ್‌ನಲ್ಲಿನ ತಂತ್ರಜ್ಞಾನ ‘ಸೆಲ್ಫ್ ಸ್ಟಾರ್ಟ್ ಹಾಗೂ ಕಿಕ್ ಸ್ಟಾರ್ಟ್ ವ್ಯವಸ್ಥೆ’ಯನ್ನು ಒಳಗೊಂಡಿದೆ. ಇದರಿಂದ ಟ್ರಾಫಿಕ್‌ನಲ್ಲಿ ಆರಾಮ ಚಾಲನೆ ಹಾಗೂ ಇಂಧನದಕ್ಷತೆ ಸಾಧ್ಯವಾಗಲಿದೆ.

ಬೈಕ್, 92.7ಸಿಸಿ ಏರ್‌ಕೂಲ್ಡ್‌ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರೊಂದಿಗೆ 4 ಸ್ಪೀಡ್‌ನ ಗಿಯರ್‌ಬಾಕ್ಸ್‌ ಇದ್ದು, ಗರಿಷ್ಠ 8.2ಬಿಎಚ್‌ಪಿ ಹಾಗೂ 8.5ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಲೀಟರ್‌ಗೆ 88.5 ಕಿ.ಮೀ ಮೈಲೇಜ್ ನೀಡುವ ಭರವಸೆಯನ್ನು ಕಂಪೆನಿ ನೀಡಿದೆ. ಇದರ ಬೆಲೆ ₹ 46,630 (ದೆಹಲಿ ಶೋರೂಂ).

‘ಡಿಸೈರ್‌’ ವಿನ್ಯಾಸಕ್ಕೆ ಮತ್ತಷ್ಟು...
2017ರ ಬಹು ನಿರೀಕ್ಷಿತ ಕಾರು, ಮಾರುತಿ ಸುಜುಕಿ ಡಿಸೈರ್ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ. ಯುವಜನರ ಕಾರು ಎಂದು ಇದನ್ನು ಕಂಪೆನಿ ಬಣ್ಣಿಸಿದ್ದು, ಇದೇ ದೃಷ್ಟಿಯಿಂದ, ಕಾರನ್ನು ಇನ್ನಷ್ಟು ಸ್ಟೈಲಿಶ್ ಆಗಿಸಲು ಸ್ಟೈಲಿಂಗ್ ಕಿಟ್ ಹಾಗೂ ಕಾರು ಅಕ್ಸೆಸರಿಗಳನ್ನು ಪರಿಚಯಿಸಿದೆ. ಗ್ರಾಂಡಯೋಸ್ ಹಾಗೂ ಎಕ್ಸಬೆರನ್ಸ್ ಎಂಬ ಎರಡು ಸ್ಟೈಲಿಂಗ್ ಪ್ಯಾಕೇಜ್‌ಗಳನ್ನು ನೀಡಿದೆ. ಈ ಪ್ಯಾಕೇಜ್‌ಗಳು ಕಾರಿನ ಒಳಾಂಗಣ ಹಾಗೂ ಹೊರಾಂಗಣ ಎರಡೂ ವಿನ್ಯಾಸದ ಪರಿಕರಗಳನ್ನು ಒಳಗೊಂಡಿದೆ. ಬಾಡಿ ಸೈಡ್ ಮೌಲ್ಡಿಂಗ್, ಸೀಟ್ ಕವರ್, ಪ್ರೀಮಿಯಂ ಕಾರ್ಪೆಟ್ ಮ್ಯಾಟ್, ಟಿಶ್ಯೂ ಬಾಕ್ಸ್, ಡೋರ್ ವೇ ಲೋಗೊ ಲ್ಯಾಂಪ್, ಡೋರ್‌ ಸಿಲ್ ಗಾರ್ಡ್ ಬೂಟ್‌ ಮ್ಯಾಟ್ ಈ ಸೌಲಭ್ಯಗಳೊಂದಿಗೆ ಇನ್ಫೊಟೇನ್ಮೆಂಟ್ ಆಯ್ಕೆಗಳಿರಲಿವೆ. ರಿಯರ್ ಸೀಟ್ ಎಂಟರ್‌ಟೇನ್ಮೆಂಟ್‌ ಎಲ್‌ಸಿಡಿ, ಡಿಜಿಟಲ್ ಟೈರ್ ಇನ್‌ಫ್ಲೇಟ್ ಹೀಗೆ ಸಾಕಷ್ಟು ಆಯ್ಕೆ ಲಭ್ಯ. ಈ ಡಿಸೈನ್‌ ಕಿಟ್‌ನ ಬೆಲೆ ಆಯ್ಕೆಗೆ ತಕ್ಕಂತೆ ಇರಲಿದೆ. ಈ ಹೊಸ ಕಾಂಪಾಕ್ಟ್‌ ಸೆಡಾನ್‌ನ ಬೆಲೆ ₹ 5.45 ಲಕ್ಷ.

ಕೆಟಿಎಂನ ಆಫ್‌ರೋಡ್‌ ಬೈಕ್‌ಗಳು
ವಿಶ್ವದ ಮೊದಲ ಫ್ಯುಯೆಲ್‌ ಇಂಜೆಕ್ಟೆಡ್ 2 ಸ್ಟ್ರೋಕ್‌ ಎಂಡ್ಯೂರೊ ಮೋಟಾರ್ ಸೈಕಲ್‌ಗಳನ್ನು ಕೆ.ಟಿಎಂ ಬಿಡುಗಡೆಗೊಳಿಸಿದೆ. ಕೆಟಿಎಂ 300 EXC TPI ಮತ್ತು ಕೆಟಿಎಂ 250 EXC  TPI ಈ ಬೈಕ್‌ಗಳು. ಕಳೆದ ವರ್ಷ ಬಿಡುಗಡೆ ಕಂಡ EXC ಸರಣಿಗಳ ಮುಂದುವರಿದ ಭಾಗವಾಗಿ ಈ   ಬೈಕ್‌ಗಳು ಪರಿಚಿತಗೊಂಡಿದ್ದು, ಹೊಸ  ಫ್ಯುಯೆಲ್ ಇಂಜೆಕ್ಷನ್ ‘ಇಎಫ್ಐ’ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇದರಿಂದ ಇಂಧನ ಕ್ಷಮತೆ ಸಾಧ್ಯವಾಗಲಿದೆ. WP ಸಸ್ಪೆನ್‌ಷನ್, ಬ್ರೆಂಬೋ ಬ್ರೇಕ್ ಮತ್ತು ಹಗುರ ಸ್ಟೀಲ್ ಅಲಾಯ್ ಡಬಲ್ ಕ್ರೆಡಲ್ ಚಾಸಿಸ್‌ನ
ಹೈ-ಎಂಡ್ ಸಾಧನಗಳೂ ಬೈಕ್‌ಗಳಿಗೆ ಜೊತೆಯಾಗಿದ್ದು, ಆಫ್‌ರೋಡ್‌ಗೆ ಹೇಳಿಮಾಡಿಸಿದಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT