ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನಡೆದಿಲ್ಲ: ಎಂ.ಬಿ.ಪಾಟೀಲ

Last Updated 24 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ‘ಮಲಪ್ರಭಾ ನಾಲೆ ಆಧುನೀಕರಣಕ್ಕೆ ಸಚಿವ ಸಂಪುಟ ಇನ್ನೂ ಆಡಳಿತಾತ್ಮಕ ಅನುಮೋದನೆಯನ್ನೇ ನೀಡದಿರುವಾಗ   ಅವ್ಯವಹಾರ ನಡೆಯುವುದಾದರೂ ಹೇಗೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಕೇಳಿದರು.
 
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರಾಜಕೀಯ ಲಾಭ ಮಾಡಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.  ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಪಾಟೀಲರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ಈ ಕಾಮಗಾರಿಗೆ ಸಂಪುಟದ ಒಪ್ಪಿಗೆ ದೊರಕಿದ ಬಳಿಕವೇ  ಟೆಂಡರ್‌  ಕರೆಯಲಾಗುವುದು ಎಂದು ಅವರು ಹೇಳಿದರು.
****
ಜಿಂದಾಲ್‌ಗೆ 0.06 ಟಿ.ಎಂ.ಸಿ ಅಡಿ ನೀರು
ಜಿಂದಾಲ್‌ ಕಂಪೆನಿ 90 ಕ್ಯುಸೆಕ್‌ ನೀರು ಕೇಳಿತ್ತು. ಜನರ ಕುಡಿಯುವ ನೀರಿನ ಬೇಡಿಕೆ ಮತ್ತು ವಿದ್ಯುತ್ ಘಟಕಗಳ ಅಗತ್ಯದ ದೃಷ್ಟಿಯಿಂದ,ನಾರಾಯಣಪುರ ಜಲಾಶಯದಿಂದ ಪ್ರತಿದಿನ ಸುಮಾರು 25 ಕ್ಯುಸೆಕ್‌ ನೀರು ಬಿಡಲು ಇದೇ 8 ರಂದು ನಿರ್ಧರಿಸಲಾಗಿತ್ತು. ಇದರ ಪ್ರಮಾಣ ಒಂದು ತಿಂಗಳಿಗೆ 0.06 ಟಿ.ಎಂ.ಸಿ ಅಡಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT