ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ಶಿಬಿರ ಆರಂಭ

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೂನಿಯರ್ ಪುರುಷ ಮತ್ತು ಮಹಿಳಾ ಹಾಕಿ ಆಟಗಾರರ ತರಬೇತಿ ಶಿಬಿರ ಭಾರತ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕೇಂದ್ರದಲ್ಲಿ ಬುಧವಾರ ಆರಂಭಗೊಂಡಿದೆ.

ಇತ್ತೀಚೆಗೆ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಗಮನ ಸೆಳೆದ ಆಟಗಾರರನ್ನು ತರಬೇತಿಗೆ ಹಾಕಿ ಇಂಡಿಯಾ ಆಯ್ಕೆ ಮಾಡಿದೆ. ಪುರುಷರ ವಿಭಾಗದಲ್ಲಿ 53 ಮತ್ತು ಮಹಿಳಾ ವಿಭಾಗದಲ್ಲಿ 37 ಮಂದಿ ಪಾಲ್ಗೊಳ್ಳು ತ್ತಿದ್ದಾರೆ. ಐದು ವಾರಗಳ ಶಿಬಿರದ ನಂತರ ಪ್ರಮುಖರ ಪಟ್ಟಿ ಸಿದ್ಧಗೊಳ್ಳಲಿದೆ.

2020ರ ಜೂನಿಯರ್‌ ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಕಟ್ಟುವುದು ಹಾಕಿ ಇಂಡಿಯಾದ ಉದ್ದೇಶ. ಇತ್ತೀಚಿನ ಟೂರ್ನಿಗಳಲ್ಲಿ ದೇಶದ ವಿವಿಧ ಭಾಗಗಳ ಪುರುಷ ಮತ್ತು ಮಹಿಳಾ ಆಟಗಾರರು ಗಮನ ಸೆಳೆದಿದ್ದಾರೆ. ಶಿಬಿರದ ಕೊನೆಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಿಂದ ತಲಾ 33 ಮಂದಿ ಆಟಗಾರರನ್ನು ಗುರುತಿಸಿ ಮುಂಬರುವ ಅಂತರರಾಷ್ಟ್ರೀಯ ಟೂರ್ನಿಗಳಿಗಾಗಿ ಸಂಭಾವ್ಯ ಆಟಗಾರರನ್ನು ಆರಿಸಲಾಗುವುದು’ ಎಂದು ಹಾಕಿ ಇಂಡಿಯಾದ ಮಹಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಶ್ತಾಕ್‌ ಅಹಮ್ಮದ್‌ ತಿಳಿಸಿದರು.

ಮೂವರು ಕನ್ನಡಿಗರು: ಶಿಬಿರಕ್ಕೆ ಆಯ್ಕೆಯಾದವರಲ್ಲಿ ಮೂವರು ಕನ್ನಡಿಗರು ಇದ್ದಾರೆ. ಮಿಡ್‌ಫೀಲ್ಡರ್‌ ಹರೀಶ ಮುಟಗಾರ, ಫಾರ್ವರ್ಡ್ ಆಟಗಾರ ಎಂ.ರಾಜೇಂದ್ರ ಮತ್ತು ರಕ್ಷಣಾ ವಿಭಾಗದ ಆಟಗಾರ್ತಿ ಎಂ.ಇ.ಧೃತಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT