ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್ ನೋಂದಣಿಗೆ ವಯಸ್ಸು ದೃಢೀಕರಣ ಕಡ್ಡಾಯವಲ್ಲ’

Last Updated 24 ಮೇ 2017, 19:28 IST
ಅಕ್ಷರ ಗಾತ್ರ

ನವದೆಹಲಿ: ‘ಆಧಾರ್‌ಗೆ ಹೆಸರು ನೋಂದಾಯಿಸುವ ವೇಳೆ ವಯಸ್ಸು ದೃಢೀಕರಣ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಲ್ಲ. ಆದರೆ ಈಗಾಗಲೇ ನಮೂದಾಗಿರುವ ಜನ್ಮದಿನಾಂಕವನ್ನು ಬದಲಿಸಲು ಇಂತಹ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಅಲಹಾಬಾದ್‌ ಸಮೀಪದ ಗ್ರಾಮದ ಪ್ರತಿ ಐವರಲ್ಲಿ ಒಬ್ಬರ ಆಧಾರ್‌ನಲ್ಲಿ, ಅವರ ಜನ್ಮ ದಿನಾಂಕ ಜನವರಿ 1 ಎಂದು ನಮೂದಾಗಿದೆ. ಇದು ಆಧಾರ್‌ ನೋಂದಣಿ ವೇಳೆ ಆದ ಲೋಪ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಾಧಿಕಾರ ಈ ಸ್ಪಷ್ಟೀಕರಣ ನೀಡಿದೆ.

‘ಆ ಗ್ರಾಮದ ಬಹುತೇಕ ಜನರಿಗೆ, ಅವರ ಜನ್ಮ ದಿನಾಂಕವೇ ತಿಳಿದಿಲ್ಲ. ಜತೆಗೆ, ಅದನ್ನು ದೃಢೀಕರಿಸುವ ಯಾವ ದಾಖಲೆಗಳೂ ಅವರ ಬಳಿ ಇಲ್ಲ. ಅಂತಹ ಸಂದರ್ಭದಲ್ಲಿ ಅಂದಾಜಿನ ಜನ್ಮದಿನಾಂಕ ನಮೂದಿಸಲು ಅವಕಾಶವಿದೆ. ಜನ್ಮ ದಿನಾಂಕ ತಪ್ಪಾಗಿ ನಮೂದಾಗಿರುವವರು ಅಗತ್ಯ ದಾಖಲೆಗಳನ್ನು ಒದಗಿಸಿದರೆ, ಸರಿಪಡಿಸಲಾಗುವುದು’ ಎಂದು ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT