ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಹತ್ಯೆ: ಆರು ಮಂದಿ ಬಂಧನ

Last Updated 24 ಮೇ 2017, 19:42 IST
ಅಕ್ಷರ ಗಾತ್ರ
ಬೆಂಗಳೂರು: ಸಂಪಿಗೆಹಳ್ಳಿ ಬಳಿಯ ಬೆಳ್ಳಳ್ಳಿ ನೀಲಗಿರಿ ತೋಪಿನಲ್ಲಿ ನಡೆದಿದ್ದ ರೌಡಿ ಅಯೂಬ್‌ (34) ಕೊಲೆ ಪ್ರಕರಣ ಸಂಬಂಧ ಕೊತ್ತನೂರು ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ. 
 
ಸೈಯದ್ ಷರೀಫ್ (33), ಸೈಯದ್ ಮೆಹಬೂಬ್ (29), ಶಾರೂಕ್ ಖಾನ್ (24), ಸೈಯದ್ ಮನ್ಸೂರ್ (30), ಮೊಹಮ್ಮದ್ ಜಾಫರ್ ಹುಸೇನ್ (34), ನವಾಜ್ ಷರೀಫ್ (19) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ವಕಾರ್ ಅಹಮ್ಮದ್ (35)  ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 
 
‘ಅಯೂಬ್ ನಮಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ. ಆತನಿಂದ ನಿತ್ಯ ತೊಂದರೆ ಅನುಭವಿಸುವುದಕ್ಕಿಂತ ಕೊಲೆ ಮಾಡಿ ಜೈಲಿಗೆ ಹೋಗುವುದೇ ಲೇಸು ಎಂದು ನಿರ್ಧರಿಸಿ ಕೃತ್ಯ ಎಸಗಿದ್ದೇವೆ’ ಎಂದು ಆರೋಪಿಗಳು  ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 
 
‘ಬಾಸ್’ ಎಂದು ಕರೆಯಬೇಕು:  ಬೆಳ್ಳಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಆಗಾಗ್ಗೆ ಬರುತ್ತಿದ್ದ ಅಯೂಬ್, ಇಲ್ಲಿನ ಹುಡುಗರನ್ನು ಸೇರಿಸಿಕೊಂಡು ದೊಡ್ಡ ಗ್ಯಾಂಗ್ ಕಟ್ಟಿಕೊಂಡಿದ್ದ. ತನ್ನನ್ನು ಬಾಸ್ ಎಂದು ಕರೆಯಬೇಕೆಂದು ಅವರಿಗೆ ತಾಕೀತು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
 
ಆರೋಪಿ ಸೈಯದ್ ಮನ್ಸೂರ್ ಅಯೂಬ್‌ಗೆ ₹ 6 ಲಕ್ಷ ಸಾಲ ಕೊಟ್ಟಿದ್ದ. ಸಾಲ ವಾಪಸ್ ಕೇಳಿದಾಗ ‘ಆ ಹಣವನ್ನು ಖರ್ಚು ಮಾಡಲು ನೀನೇ ಇರುವುದಿಲ್ಲ’ ಎಂದು ಧಮ್ಕಿ ಹಾಕುತ್ತಿದ್ದ ಎನ್ನಲಾಗಿದೆ.  
 
‘ಸಯ್ಯದ್ ಷರೀಫ್‌ನ ಜಾಗದಲ್ಲಿದ್ದ ಶೆಡ್‌ ಕೆಡವಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಯೂಬ್, ಶಾರೂಕ್ ಖಾನ್‌ಗೂ ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಮೋಸ ಮಾಡಿದ್ದ. ಯಾವಾಗಲೂ ತನ್ನ ಸೇವೆ ಮಾಡಿಕೊಂಡಿರಬೇಕು ಎಂದು ಜಾಫರ್ ಹುಸೇನ್‌ನನ್ನು ಪೀಡಿಸುತ್ತಿದ್ದ. ಇದೇ ರೀತಿ ಉಳಿದವರಿಗೂ ಕಿರುಕುಳ ಕೊಡುತ್ತಲೇ ಇದ್ದ ಕಾರಣಕ್ಕೆ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
****
ಮನೆಯಿಂದ ಕರೆಸಿ ಹತ್ಯೆ
‘ಆತನ ಕಿರುಕುಳದಿಂದ ಬೇಸತ್ತಿದ್ದ ಆರೋಪಿಗಳು ದೂರ ಉಳಿದಿದ್ದರು. ಇದರಿಂದ ಕೋಪಗೊಂಡ ಅಯೂಬ್ ಮತ್ತಷ್ಟು ಕಿರುಕುಳ ಕೊಡಲು ಮುಂದಾಗಿದ್ದ. ಸಂಘಟನೆಯೊಂದರ ಕಾರ್ಯಕ್ರಮದ ಅಂಗವಾಗಿ ಬ್ಯಾನರ್‌ಗಳನ್ನು ಕಟ್ಟುವ ವಿಚಾರಕ್ಕೂ ತಲೆಹಾಕಿ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದ.
 
ಇದರಿಂದ ಕುಪಿತಗೊಂಡು ಮೇ 20 ರಂದು ಮನೆಯಿಂದ ಕರೆಸಿ ನೀಲಗಿರಿ ತೋಪಿನಲ್ಲಿ ರುಂಡ ಕತ್ತರಿಸಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

‘ಕೊಲೆ ನಡೆದ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿರಲಿಲ್ಲ. ಬದಲಿಗೆ ತಾವೇ ಕೊಲೆ ಮಾಡಿದ್ದೇವೆ ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರು.
ಈ ವಿಚಾರ ತಿಳಿದ ಅಯೂಬ್ ಅಜ್ಜಿ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT