ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಘು ಹೆಲಿಕಾಪ್ಟರ್‌ ಪರೀಕ್ಷಾ ಹಾರಾಟ

Last Updated 24 ಮೇ 2017, 19:49 IST
ಅಕ್ಷರ ಗಾತ್ರ
ಬೆಂಗಳೂರು: ಎಚ್‌ಎಎಲ್‌ ನಿರ್ಮಿತ ಬಹು ಉಪಯೋಗಿ ಲಘು ಹೆಲಿಕಾಪ್ಟರ್‌ (ಎಲ್‌ಯುಎಚ್) ಪಿಟಿ–2 ರ ಪ್ರಥಮ ಹಾರಾಟ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.
 
ಈ ಹೆಲಿಕಾಪ್ಟರ್‌ ಹಾರಾಟವನ್ನು ವಿಂಗ್‌ ಕಮಾಂಡರ್‌ ಉನ್ನಿ ಕೆ ಪಿಳ್ಳೈ ಮತ್ತು  ವಿಂಗ್ ಕಮಾಂಡರ್‌ ಅನಿಲ್‌ ಭಂಭಾನಿ ನಡೆಸಿದರು. ಇವರಿಬ್ಬರೂ ಪರೀಕ್ಷಾ ಪೈಲಟ್‌ಗಳು. ಸುಮಾರು 22 ನಿಮಿಷಗಳ ಕಾಲ ಪರೀಕ್ಷಾ ಹಾರಾಟ ನಡೆಸಲಾಯಿತು ಎಂದು ಎಚ್‌ಎಎಲ್‌  ತಿಳಿಸಿದೆ.
 
‘ಇದು ಸ್ಥಳೀಯವಾಗಿ ನಿರ್ಮಿಸಿರುವ ಹೆಲಿಕಾಪ್ಟರ್ ಆಗಿದ್ದು, ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಎಚ್‌ಎಎಲ್‌  ತ್ವರಿತಗತಿಯಲ್ಲಿ ಮುನ್ನಡೆ ಸಾಧಿಸುತ್ತಿರುವುದಕ್ಕೆ  ಹೊಸ ಹೆಲಿಕಾಪ್ಟರ್‌ ಹಾರಾಟ ತಾಜಾ ನಿದರ್ಶನ’ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ತಿಳಿಸಿದ್ದಾರೆ.
 
ಎಲ್‌ಯುಎಚ್‌ ಪಿಟಿ 2 ರಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಮುಖ್ಯವಾಗಿ, ಹೆಲಿಕಾಪ್ಟರ್‌ನ ಟೈಲ್ ಬೂಮ್‌ನಲ್ಲಿ ಈ ವ್ಯತ್ಯಾಸ ಕಾಣಬಹುದು. ಎಲ್‌ಯುಎಚ್‌ ಪಿಟಿ 1 ರ ಪರೀಕ್ಷೆಯ ನಂತರ ಪಿಟಿ 2ರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಯಿತು.
 
ಎಲ್‌ಯುಎಚ್‌ ಪಿಟಿ 1 ಪರೀಕ್ಷೆ  2016ರ ಸೆ.6 ರಂದು ನಡೆಸಲಾಯಿತು.  ಇದೇ ಫೆಬ್ರುವರಿಯಲ್ಲಿ ನಡೆದ  ಅಂತರ ರಾಷ್ಟ್ರೀಯ ಏರ್‌ ಶೋನಲ್ಲಿ ಇದರ ವೈಮಾನಿಕ ಸಾಹಸಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. 
 
ಪಿಟಿ 1 ಮತ್ತು ಪಿಟಿ 2 ಹೆಲಿಕಾಪ್ಟರ್‌ಗಳ ಇನ್ನಷ್ಟು ಪರೀಕ್ಷೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಲಾಗುವುದು ಎಂದು ಎಚ್‌ಎಎಲ್‌ ತಿಳಿಸಿದೆ. ಈ ಹೆಲಿಕಾಪ್ಟರ್‌ ಮೂರು ಟನ್‌ ಭಾರವನ್ನು ಹೊತ್ತೊಯ್ಯುವ ಹೊಸ ತಲೆಮಾರಿನದ್ದಾಗಿದೆ.
 
ಸೇನಾ ಮತ್ತು ನಾಗರೀಕ ಕಾರ್ಯಚರಣೆಗಳಲ್ಲಿ ಇದನ್ನು ಬಳಸಬಹುದು. ಗಾಜಿನ ಕಾಕ್‌ಪಿಟ್‌ ಹೊಂದಿರುವ ಈ  ಹೆಲಿಕಾಪ್ಟರ್‌ನಿಂದ ಸ್ಥಳ ಪರಿಶೀಲನೆ, ಕಣ್ಗಾವಲು ಮತ್ತು ಹಗುರ ಸಾಧನಗಳ ಸಾಗಣೆಗೆ ಬಳಸಬಹುದಾಗಿದೆ.  ಗಂಟೆಗೆ 220 ಕಿ.ಮೀ ವೇಗದಲ್ಲಿ ಸಾಗಬಲ್ಲದು ಎಂದು ಎಚ್‌ಎಎಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT