ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳಿಗೆ ಅಭಿನಂದನೆ

Last Updated 25 ಮೇ 2017, 5:47 IST
ಅಕ್ಷರ ಗಾತ್ರ

ಶೃಂಗೇರಿ:  ದೇಶದಲ್ಲಿ ಸಾವಿರಾರು ಜಾತಿ ಗಳು, ಮತಗಳಿದ್ದರೂ ಎಲ್ಲರನ್ನೂ ಒಗ್ಗೂ ಡಿಸಿ ದೇಶದ ಹಿತವನ್ನು ಕಾಪಾಡುವಂತೆ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ ಹೇಳಿದರು.

ಶೃಂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಯುವ ಘಟಕದ ನೂತನ ಪದಾಧಿಕಾರಿ ಗಳನ್ನು ಈಚೆಗೆ ಅಭಿನಂದಿಸಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸುವ ಮೂಲಕ ಬಡ ಜನರಿಗೂ ಬ್ಯಾಂಕುಗಳಲ್ಲಿ ಸಾಲ ದೊರಕಿತು. ಶಿಕ್ಷಣದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಿ, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಿ, ಪ್ರತಿಭಾವಂತರು ಉನ್ನತ ದರ್ಜೆಗೆ ಏರುವಂತೆ ಪ್ರೋತ್ಸಾಹಿ ಸಲಾಗಿದೆ ಎಂದರು.

ಕೇಂದ್ರ ಸರ್ಕಾರ ನೋಟು ಅಮಾನ್ಯ ಏಕೆ ಮಾಡಿದೆ? ಎಂದು ಅರ್ಥವಾ ಗುತ್ತಿಲ್ಲ. ಇದರಿಂದ ಬಡವರಿಗೆ ತೊಂದರೆ ಯಾಗಿದೆ ವಿನಾ ದೊಡ್ಡ ಉದ್ಯಮಿಗಳು, ಹಣವಂತರಿಗೆ ಯಾವುದೇ ತೊಂದರೆ ಯಾಗಲಿಲ್ಲ. ಸ್ವಚ್ಛ ಭಾರತ್ ಹೆಸರಿನಲ್ಲಿ ಸಾವಿರಾರು ಕೋಟಿ ಸಂಗ್ರಹಿಸುತ್ತಿದ್ದು, ಪಟ್ಟಣ ಹಾಗೂ ನಗರಗಳು ಸ್ವಚ್ಛವಾಗಿಲ್ಲ ಎಂದು ದೂರಿದರು.

ಕ್ಷೇತ್ರದಲ್ಲಿ ಎಲ್ಲ ಸಮಿತಿಗಳು ಶಾಸಕರೇ ಅಧ್ಯಕ್ಷರಾಗಿ ತಮ್ಮ ಅಧಿಕಾರ ಉಳಿಸಿಕೊಂಡು, ಯಾವ ಸಮಿತಿಗಳ ಸಭೆ ನಡೆಸದೆ ಅಭಿವೃದ್ಧಿಗೆ ತೀವ್ರ ಹಿನ್ನಡೆ ಯಾಗಿದೆ. ಆರಾಧನಾ ಸಮಿತಿಯಲ್ಲಿ ಸರ್ಕಾರದ ಕೋಟಿ ಹಣವಿದ್ದರೂ ಸಭೆ ನಡೆಸದೆ ದೇವಸ್ಥಾನಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಗೊಂಡಿರುವ ಸಂತೋಷ್‌ ಕುಮಾರ್, ಉಪಾಧ್ಯಕ್ಷ ಪ್ರೀತಂ, ತಾಲ್ಲೂಕು ಅಧ್ಯಕ್ಷ ನೂತನ್ ಹೆಗ್ಡೆ, ಉಪಾಧ್ಯಕ್ಷ ಸುಧೀರ್, ರೇಖಾ, ದಿವ್ಯಾ ಅವರನ್ನು ಹಾಗೂ ಸಮಿತಿಯ ಇತರ ಸದಸ್ಯರನ್ನು ಅಭಿನಂದಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಆರ್. ವೆಂಕಟೇಶ್, ಎಪಿಎಂಸಿ ಅಧ್ಯಕ್ಷ ರಮೇಶ್ ಭಟ್, ಮುಖಂಡರಾದ ಉಮೇಶ್ ಪುದುವಾಳ್, ಎಚ್.ಎಸ್.ಗಣೇಶ್, ರಫೀಕ್, ಚಂದ್ರಶೇಖರ್, ಶಿವಮೂರ್ತಿ, ನಾಗರಾಜ್, ತ್ರಿಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT