ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಹಿರಿಯೂರು, ಚಳ್ಳಕೆರೆ ತಾಲ್ಲೂಕುಗಳಿವೆ. ಹೊಸದುರ್ಗ ಕೊನೇಯ ಸ್ಥಾನದಲ್ಲಿದೆ ಎಂದು ಹೇಳಿದರು.
ಮೊಳಕಾಲ್ಮುರು ತಾಲ್ಲೂಕಿನಲ್ಲಿ 6,882 ಗುರಿಗೆ 6,287 ಶೌಚಾಲಯ ‘ಜಿಯೋಟ್ಯಾಗ್’ ಮಾಡಿ ಶೇ 92.7 ಸಾಧನೆ ಮಾಡಲಾಗಿದೆ. 16 ಗ್ರಾಮ ಪಂಚಾಯ್ತಿ ಪೈಕಿ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಹಾನಗಲ್, ದೇವಸಮುದ್ರ, ಸೇರಿದಂತೆ 10 ಪಂಚಾಯ್ತಿಗಳು ಶೇ 100 ಗುರಿ ಸಾಧಿಸಿವೆ. ತುಮಕೂರ್ಲಹಳ್ಳಿ ಪಂಚಾಯ್ತಿ ಶೇ 76.04 ಸಾಧನೆ ಮಾಡಿ ಕೊನೇಯ ಸ್ಥಾನದಲ್ಲಿದೆ ಎಂದು ಚಂದ್ರಶೇಖರ್ ತಿಳಿಸಿದರು.
– ಕೊಂಡ್ಲಹಳ್ಳಿ ಜಯಪ್ರಕಾಶ