ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸೇವಾ ಮಾಹಿತಿಗೆ ತಂತ್ರಾಂಶ

Last Updated 25 ಮೇ 2017, 6:26 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರ ಸೇವಾ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ಸಾರ್ವ­ಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಮಾಹಿತಿ ಅಳವಡಿಕೆಗೆ ಮೇ 27ರ ಗಡುವು ವಿಧಿಸಿದೆ.

ಇದಕ್ಕಾಗಿ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಇಲಾಖೆಯ ವೆಬ್‌ಸೈಟ್‌ www. schooleducation. kar.nic.in ನಲ್ಲಿ ಇದರ ಲಿಂಕ್‌ ನೀಡಲಾಗಿದೆ.

‘ಶಿಕ್ಷಕರಿಂದ ಮುದ್ರಿತ ನಮೂನೆ ಗಳಲ್ಲಿ ಪಡೆದ ಮಾಹಿತಿಯನ್ನು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಳ ಬಟವಾಡೆ ಅಧಿಕಾರಿಗಳು (ಡಿ.ಡಿ.ಒ) ಸೇವಾ ಪುಸ್ತಕದೊಂದಿಗೆ ಪರಿಶೀಲಿಸಿ ದೃಢೀಕರಿಸಿ ತಂತ್ರಾಂಶದಲ್ಲಿ ಅಳವಡಿಸ ಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಕ್ತೆ ಸೌಜನ್ಯ ಅವರು ಮೇ 22ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

‘ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ ನಂತರ ತಂತ್ರಾಂಶದ ಮೂಲಕ ಮುದ್ರಣ ಪ್ರತಿ ಪಡೆದು ಅದನ್ನು ಆಯಾ ಶಿಕ್ಷಕರಿಗೆ ನೀಡಬೇಕು. ಅಳವಡಿಸಿರುವ ಮಾಹಿತಿ ಸರಿಯಾ ಗಿರುವ ಬಗ್ಗೆ ಮುದ್ರಿತ ಪ್ರತಿಯಲ್ಲಿ ಶಿಕ್ಷಕರ ಸಹಿ ಮಾಡಿಸಿಕೊಳ್ಳಬೇಕು. ಈ ಸಂದರ್ಭ ದಲ್ಲಿ ಶಿಕ್ಷಕರ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನೂ ಸಂಗ್ರಹಿಸಬೇಕು’ ಎಂದು ಹೇಳಿದ್ದಾರೆ.

‘ಮುದ್ರಿತ ನಮೂನೆಗಳಲ್ಲಿ ಶಿಕ್ಷಕರು ಯಾವುದೇ ಮಾಹಿತಿ ಸರಿಪಡಿಸಲು ಕೋರಿದರೆ, ಅಂತಹ ಮಾಹಿತಿಯನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಪಡಿಸ ಬೇಕು. ಪ್ರತಿ ಶಿಕ್ಷಕರ ಭಾವಚಿತ್ರವನ್ನು ತಂತ್ರಾಂಶದಲ್ಲಿ ಅಪ್‌ ಲೋಡ್‌ ಮಾಡಬೇಕು’ ಎಂದು  ತಿಳಿಸಿದ್ದಾರೆ.

‘ಶಿಕ್ಷಕರು ಸಿ.ಆರ್‌.ಸಿ., ಬಿ.ಆರ್‌.ಪಿ., ಶಿಕ್ಷಣ ಸಂಯೋಜಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಆಯಾ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಮಾಹಿತಿ ಭರ್ತಿ ಮಾಡಬೇಕು. ಈ ಹಿಂದೆ ಸಿ.ಆರ್‌.ಸಿ., ಬಿ.ಆರ್‌.ಪಿ., ಶಿಕ್ಷಣ ಸಂಯೋಜಕರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರೆ ತಂತ್ರಾಂಶದಲ್ಲಿ ಸೇವಾ ವಿವರಗಳ ಕಾಲಂನಲ್ಲಿ ಇತರೆ ಎಂದು ಆಯ್ಕೆ ಮಾಡಿ ಮಾಹಿತಿ ಅಳವಡಿಸ ಬೇಕು’ ಎಂದಿದ್ದಾರೆ.

‘ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರ ಹಾಗೂ ಮುಖ್ಯ ಶಿಕ್ಷಕರ ಮಾಹಿತಿ ಪಡೆದು ತಂತ್ರಾಂಶದಲ್ಲಿ ಅಳವಡಿಸ ಬೇಕು. ಅಂಗವಿಕಲರು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಕ್ರಿಮಿನಲ್‌ ಪ್ರಕರಣ ಗಳು ಹಾಗೂ ಇತರೆ ವಿವರಗಳನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಪರಿಶೀಲಿಸಿದ ನಂತರವೇ ಆ ಮಾಹಿತಿ ಯನ್ನು ತಂತ್ರಾಂಶದಲ್ಲಿ ಅಳವಡಿಸಬೇಕು’ ಎಂದು ಅವರು ಹೇಳಿದ್ದಾರೆ.

ಬಹುವಿಧದ ಮಾಹಿತಿ: ‘ಖಜಾನೆಯ ಮೂಲಕ ಶಿಕ್ಷಕರ ವೇತನ ಬಟವಾಡೆ ಆಗಲಿದೆ. ಅದಕ್ಕೆ ಬೇಕಿರುವ ತಯಾರಿ ಯನ್ನು ಇಲಾಖೆ ಮಾಡಿಕೊಳ್ಳುತ್ತಿದೆ’ ಎನ್ನುವುದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರ ವಿವರಣೆ.

‘ಶಿಕ್ಷಕರ ವರ್ಗಾವಣೆಗೆ ‘ಎ’, ‘ಬಿ’, ‘ಸಿ’ ಎಂಬ ಮೂರು ವಲಯ ಮಾಡ ಲಾಗಿದೆ. ಶಿಕ್ಷಕರು ಯಾವ ವಲಯದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇನ್ನು ತಂತ್ರಾಂಶದಲ್ಲೇ ಲಭ್ಯವಾಗಲಿದೆ. ಅದನ್ನೇ ವರ್ಗಾವಣೆಗೆ ಮಾನದಂಡವನ್ನಾಗಿಸುವುದೂ ಇದರ ಉದ್ದೇಶ. ಜೊತೆಗೆ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಸಂಖ್ಯೆ, ಕೊರತೆ ಮತ್ತಿತರ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT