ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕಾಸ್ತ್ರಗಳಿಂದ ದಾಳಿ: ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ದಾಖಲು

Last Updated 25 ಮೇ 2017, 6:27 IST
ಅಕ್ಷರ ಗಾತ್ರ

ಕಲಬುರ್ಗಿ: ರೌಡಿ ಶೀಟರ್ ‘7ಸ್ಟಾರ್’ ಪ್ರದೀಪ್‌ ಸಹಚರರಿಂದ ಮಂಗಳವಾರ ರಾತ್ರಿ ಹಲ್ಲೆಗೆ ಒಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೋಹಿನ್‌ ಖಾನ್ ಹಾಗೂ ಮಿರ್ಜಾ ಅಬ್ದುಲ್ ಬೇಗ್ ಅಲಿಯಾಸ್ ಫಯೂಮ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬುಧವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಗಾಯಗೊಂಡಿರುವ ನಿತಿನ್ ಅವರನ್ನು ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರ ಸ್ನೇಹಿತ ಹಡ್ಡಿ ಪಿಂಟೂ ಅಲಿಯಾಸ್ ಚೇತನ್ ಗುಣಮುಖರಾಗಿದ್ದಾರೆ.

‘ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿದ ಪ್ರದೀಪ್ ಅಲಿ­ಯಾಸ್ ‘7ಸ್ಟಾರ್’ ಪ್ರದೀಪ್, ಅಮರ್ ಅಲಿಯಾಸ್ ಬಿಲ್ಡರ್ ಅಮರ್, ಸಂತೋಷ ಯಾದವ, ರಘು ಹೋಲ ಕುಂಬಿ, ಸಚಿನ್, ಜಾನ್ ಅಲಿಯಾಸ್ ನೂರ್‍ಯಾ ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಹಳೆ ವೈಷಮ್ಯ ಹಿನ್ನೆಲೆಯಲ್ಲಿ 20 ದಿನಗಳ ಹಿಂದೆ ನಿತಿನ್ ಹಾಗೂ ಚೇತನ್ ಅವರು ಜಾನ್ ಅಲಿಯಾಸ್ ನೂರ್‍ಯಾ ಅವರ ಮೇಲೆ ಹಲ್ಲೆ ಮಾಡಿದ್ದರು. ಅವರಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮಂಗಳವಾರ (ಮೇ 23) ಇಬ್ಬರೂ ಜಾಮೀನು ಪಡೆದು ಈಚೆ ಬಂದಿದ್ದರು. ಈ ವಿಷಯ ಅರಿತ 7ಸ್ಟಾರ್ ಪ್ರದೀಪ್ ಸಹಚರರು ಹಲ್ಲೆ ಮಾಡಿದ್ದಾರೆ’ ಎಂದು ಮೂಲಗಳು ಹೇಳುತ್ತವೆ.

ಏನಿದು ಘಟನೆ?: ಗೋವಾ ಹೋಟೆಲ್‌ ಬಳಿ ಮಂಗಳವಾರ ರಾತ್ರಿ ಕಾರಿನಲ್ಲಿ ಕುಳಿತಿದ್ದ ಮೋಹಿನ್‌ ಖಾನ್, ಮಿರ್ಜಾ ಅಬ್ದುಲ್ ಬೇಗ್ ಅಲಿಯಾಸ್ ಫಯೂಮ್, ಹಡ್ಡಿ ಪಿಂಟೂ ಅಲಿಯಾಸ್ ಚೇತನ್ ಮತ್ತು ನಿತಿನ್ ಅವರ ಮೇಲೆ ‘7ಸ್ಟಾರ್’ ಪ್ರದೀಪ್‌ ಗುಂಪಿಗೆ ಸೇರಿದ ಯುವಕರ ಗುಂಪೊಂದು ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT