ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಿಂದ ತವರಿಗೆ ಬಂದ ಉಜ್ಮಾಗೆ ಸುಷ್ಮಾ ಸ್ವರಾಜ್‌ ಸ್ವಾಗತ

Last Updated 25 ಮೇ 2017, 7:36 IST
ಅಕ್ಷರ ಗಾತ್ರ

ನವದೆಹಲಿ, ಅಮೃತಸರ: ಪಾಕಿಸ್ತಾನದ ತಾಹೀರ್‌ ಅಲಿ ಅವರು ಬಲವಂತದಿಂದ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿ, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ನವದೆಹಲಿಯ ಮಹಿಳೆ ಉಜ್ಮಾ ಗುರುವಾರ ತವರಿಗೆ ಮರಳಿದ್ದಾರೆ.

ಉಜ್ಮಾ ಅವರು ಭಾರತಕ್ಕೆ ಮರಳಲು ಇಸ್ಲಾಮಾಬಾದ್‌ ಹೈಕೋರ್ಟ್‌ ಅನುಮತಿ ನೀಡಿದ್ದು, ಇಂದು ಬೆಳಿಗ್ಗೆ ಪೊಲೀಸ್‌ ಭದ್ರತೆಯೊಂದಿಗೆ ಅಮೃತಸರ ಸಮೀಪದ ವಾಘಾ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಉಜ್ಮಾ ಅವರನ್ನು ಸ್ವಾಗತಿಸಿದ್ದು, ‘ಭಾರತದ ಮಗಳು’ ಎಂದು ಹೇಳಿದ್ದಾರೆ.

‘ನಿಮಗಾಗಿರುವ ತೊಂದರೆಗೆ ಬಗ್ಗೆ ನನಗೆ ಬೇಸರವಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಸುಷ್ಮ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT