ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಸವಾಲು ಎದುರಿಸಿ ಕಾರ್ಯ ನಿರ್ವಹಿಸಿ

ಕನಕಪುರ; ಛಾಯಾಚಿತ್ರಗ್ರಾಹಕರ ಸಂಘದ ಕಾರ್ಯಾಗಾರ
Last Updated 25 ಮೇ 2017, 7:52 IST
ಅಕ್ಷರ ಗಾತ್ರ

ಕನಕಪುರ:  ಛಾಯಾಚಿತ್ರಗಾರರ ವೃತ್ತಿ ಅತ್ಯಂತ ಕಠಿಣ ಮತ್ತು ಸವಾಲಿನದ್ದಾಗಿದೆ. ಅವರು ಇಂದು ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಿ ಕಾರ್ಯ ನಿರ್ವಹಿಸಬೇಕಿದೆ ಎಂದು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷ ನಾಗೇಶ್‌ ಹೇಳಿದರು.

ಬೆಂಗಳೂರಿನಲ್ಲಿ ಜೂನ್‌ 23ರಿಂದ 25ರ ವರೆಗೆ ನಡೆಯುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ‘ಡಿಜಿಟಲ್‌ ಇಮೇಜ್‌’ ಹಿನ್ನೆಲೆಯಲ್ಲಿ ನಗರದ ಹೊರ ವಲಯ ಕೋಡಿಹಳ್ಳಿ ರಸ್ತೆಯ ಅಂಕಚಾರಿದೊಡ್ಡಿ ಬಳಿಯ ತೋಟವೊಂದರಲ್ಲಿ ಬುಧವಾರ ಏರ್ಪಡಿಸಿದ್ದ ಕನಕಪುರ ತಾಲ್ಲೂಕು ಛಾತ್ರಚಿತ್ರಗ್ರಾಹಕರ ಸಂಘದ ಕಾರ್ಯಾಗಾರದಲ್ಲಿ ಮಾತನಾಡಿದರು.

ವೃತ್ತಿಪರ ಛಾಯಾಚಿತ್ರಗಾರರಿಗೆ ಅವಕಾಶಗಳು ಸಿಗುತ್ತಿಲ್ಲ. ಮೊಬೈಲ್‌ಗಳಲ್ಲಿ ದೊಡ್ಡಮಟ್ಟದ ಕ್ಯಾಮೆರಾಗಳು ಬಂದು ಪೋಟೋ ಸ್ಟುಡಿಯೋಗಳನ್ನೇ ಜನತೆ ಮರೆಯುತ್ತಿದ್ದಾರೆ ಎಂದರು. ಗುಣಮಟ್ಟ ಹೆಚ್ಚಳ, ವೃತ್ತಿ  ನೈಪುಣ್ಯತೆ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಮಾತನಾಡಿ, ಸ್ಟುಡಿಯೋ ನಡೆಸುವುದೇ ತುಂಬ ಕಷ್ಟವಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಬ್ಯಾಂಕ್‌ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಭಾವಚಿತ್ರ ಕೇಳುತ್ತಿಲ್ಲ,ಬದಲಾಗಿ ಆಧಾರ್‌ ಕಾರ್ಡ್‌ ತೆಗೆದುಕೊಳ್ಳುತ್ತಿದ್ದಾರೆ ಎಂದರು. ತಾಲ್ಲೂಕು ಅಧ್ಯಕ್ಷ ಸಿದ್ದುಕುರುಪೇಟೆ ಮಾತನಾಡಿದರು.

‘ಡಿಜಿಟಲ್‌ ಇಮೇಜ್‌’ ಕಾರ್ಯಕ್ರಮಕ್ಕೆ ರಾಮನಗರದಿಂದ ಛಾಯಾಸಾಧಕರಾಗಿ ಆಯ್ಕೆಯಾದ ನೀಲಮೇಘಶ್ಯಾಮ ಅವರನ್ನು ಸನ್ಮಾನಿಸಲಾಯಿತು. ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಸಂಘದ ಕಾರ್ಯದರ್ಶಿ ವಿಜಯ್‌ಕುಮಾರ್‌, ಉಪಾಧ್ಯಕ್ಷ ಪುಟ್ಟರಾಮು, ರಾಮನಗರ ತಾಲ್ಲೂಕು ಅಧ್ಯಕ್ಷ ಮಹದೇವು, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಪ್ರದೀಪ್‌, ಮಾಗಡಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್‌, ಕನಕಪುರ ತಾಲ್ಲೂಕು ಅಧ್ಯಕ್ಷ ಸಿದ್ದುಕುರುಪೇಟೆ, ಕಾರ್ಯದರ್ಶಿ ಮಹದೇವ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT