ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಂದರೆ ಕ್ರಾಂತಿಕಾರಿ ಬದಲಾವಣೆ

ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸದ ರಾಜ್ಯ ಸರ್ಕಾರ: ಬಿ.ಎಸ್. ಯಡಿಯೂರಪ್ಪ ಆರೋಪ
Last Updated 25 ಮೇ 2017, 9:29 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಕೇಂದ್ರದ ಯೋಜ ನೆಗಳ ಸಮರ್ಪಕ ಜಾರಿ ಮೂಲಕ ಕ್ರಾಂತಿ ಕಾರಿ ಬದಲಾವಣೆ ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಗುರುಭವನದಲ್ಲಿ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಲವು ಯೋಜನೆ ಗಳನ್ನು ನೀಡಿದರೂ, ರಾಜ್ಯದಲ್ಲಿ ಸಮ ರ್ಪಕ ಅನುಷ್ಠಾನ ಆಗುತ್ತಿಲ್ಲ. ಅದಕ್ಕಾಗಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬರ ಬೇಕಾಗಿದೆ. ನಾವು 150 ಸೀಟುಗಳನ್ನು ಗೆಲ್ಲಬೇಕಾದರೆ, ಜಿಲ್ಲೆಯ ಎಲ್ಲ 6 ಸೀಟು ಗಳನ್ನು ಗೆಲ್ಲಿಸಬೇಕು’ ಎಂದರು.

‘ನಾನು, ವಾರಕ್ಕೆ ಐದು ದಿನ ವಿಧಾ ನಸಭಾ ಕ್ಷೇತ್ರಗಳ ಪ್ರವಾಸ ಮಾಡುತ್ತೇನೆ. ಯಾವ ಕ್ಷೇತ್ರದಲ್ಲಿ 10 ಸಾವಿರ ಜನ ಸೇರಿಸುತ್ತಾರೋ, ಅಲ್ಲಿಗೆ ಮಾತ್ರ ಬರು ತ್ತೇನೆ’ ಎಂದ ಅವರು, ‘ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಆಂದೋಲನ ಮಾಡ ಬೇಕಿದೆ’ ಎಂದರು.

‘ಯಡಿಯೂರಪ್ಪನವರು ಮಳೆ ಬರು ವಾಗ ಛತ್ರಿ ಹಿಡಿದುಕೊಂಡು ‘ಬರ’ ಪ್ರವಾಸ ಮಾಡುತ್ತಿದ್ದಾರೆ’ ಎಂದು ಸಿ.ಎಂ. ತಮಾಷೆ ಮಾಡಿದ್ದಾರೆ. ನಾನು, ಈಗಾ ಗಲೇ 5 ಸಾವಿರ ಕಿ.ಮೀ. ಪ್ರವಾಸ ಮಾಡಿ, ರೈತರ ಸಮಸ್ಯೆ ಆಲಿಸಿದ್ದೇನೆ. ಇದು 2ನೇ ಸುತ್ತಿನ ಪ್ರವಾಸ’ ಎಂದರು.

‘ಕೇಂದ್ರದ ನರೇಂದ್ರ ಮೋದಿ ಸರ್ಕಾ ರದ ವಿರುದ್ಧ ಒಂದೇ ಒಂದು ಆರೋಪ ಇದ್ದರೆ ತೋರಿಸಿ’ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ ಅವರು, ‘ರಾಜ್ಯದಲ್ಲಿ ಜನತೆಗೆ ನೀರಿಲ್ಲ, ಸೂರಿಲ್ಲ, ಉದ್ಯೋಗವಿಲ್ಲದ ಸ್ಥಿತಿ ಇದೆ’ ಎಂದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ‘ನಾವೆಲ್ಲ ‘63’ರಂತೆ ಕೆಲಸ ಮಾಡಬೇಕು. ‘36’ರಂತೆ ಒಂದೊಂದು ದಿಕ್ಕಿಗೆ ಮುಖ ಮಾಡಬಾರದು’ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತ ನಾಡಿ, ‘ಯಡಿಯೂರಪ್ಪನವರು ಪ್ರವಾಸ ಆರಂಭಿಸಿದ ಬಳಿಕ ಸಿದ್ದರಾಮಯ್ಯ ಅವರಿಗೆ ನಿದ್ದೆ ಇಲ್ಲದಾಗಿದೆ. ಪರಿಶಿಷ್ಟರ ಮನೆಯಲ್ಲಿ ಉಪಹಾರ ಮಾಡುವ ಮೂಲಕ ಯಡಿಯೂರಪ್ಪ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದ್ದಾರೆ’ ಎಂದರು.

ಸಂಸದ ಶಿವಕುಮಾರ್ ಉದಾಸಿ ಮಾತನಾಡಿ, ‘₹ 32ರ ಕೆ.ಜಿ. ಅಕ್ಕಿಯನ್ನು ಖರೀದಿ ಮಾಡುವ ಕೇಂದ್ರವು, ರಾಜ್ಯಕ್ಕೆ ₹ 3ರಂತೆ ನೀಡುತ್ತಿದೆ. ಕೆ.ಜಿ. ಅಕ್ಕಿಗೆ ₹ 29 ನೀಡಿದ ಕೇಂದ್ರ ಸರ್ಕಾರ ಹೆಸರು ಅಥವಾ ಪ್ರಧಾನಿ ಚಿತ್ರವನ್ನು ರಾಜ್ಯ ಸರ್ಕಾರ ಹಾಕುತ್ತಿಲ್ಲ’ ಎಂದರು. 

‘ಬಿಜೆಪಿ ಆಡಳಿತ ಇರುವ ರಾಜ್ಯ ಗಳಲ್ಲಿ ಕೇಂದ್ರ ಯೋಜನೆಗಳನ್ನು ಯಶಸ್ವಿ ಯಾಗಿ ಜಾರಿ ಮಾಡಲಾಗುತ್ತಿದೆ. ಅದ ಕ್ಕಾಗಿ ರಾಜ್ಯದಲ್ಲೂ ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಬೇಕು’ ಎಂದರು.

ಸಂಸದರಾದ ಶ್ರೀರಾಮಲು, ಪ್ರಹ್ಲಾದ ಜೋಶಿ, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ,  ಮುಖಂಡ ರಾದ ಸಿ.ಎಂ. ಉದಾಸಿ, ಎನ್. ರವಿ ಕುಮಾರ್, ಶಿವರಾಜ ಸಜ್ಜನರ, ಸುರೇಶ ಗೌಡ್ರ ಪಾಟೀಲ, ನೆಹರೂ ಓಲೇಕಾರ, ಪರಮೇಶ್ವರಪ್ಪ ಮೇಗಳಮನಿ, ಡಿ.ಎಸ್. ವೀರಯ್ಯ ಇದ್ದರು.

‘ದಲಿತರ ಬಗ್ಗೆ ಮಾತನಾಡುವ  ಹಕ್ಕಿಲ್ಲ’
ಹಾವೇರಿ:‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ನೀಡಬೇಕಾದ ಸ್ಥಾನಮಾನ ಕಾಂಗ್ರೆಸ್‌ ನೀಡಿರಲಿಲ್ಲ. ಹೀಗಾಗಿ,  ದಲಿತರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿನ  ಅಂಬೇಡ್ಕರ್‌ ಪುತ್ಥಳಿಗೆ ಬುಧ ವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್‌ ನಿಧನರಾದಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್‌ ಮುಖಂಡರು ಒಪ್ಪಲಿಲ್ಲ. ಹೀಗಾಗಿ, ಮುಂಬಯಿಯ ದಾದರ್‌ ಸಮುದ್ರ ದಂಡೆಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಬಾಬು ಜಗಜೀವನರಾಂ ಅವರನ್ನು ಪ್ರಧಾನಿ ಮಾಡಲು ಅಟಲ್ ಬಿಹಾರಿ ವಾಜಪೇಯಿ ಸಿದ್ಧತೆ ನಡೆಸಿದ್ದರು. ಅದಕ್ಕೂ ಕಲ್ಲು ಹಾಕಿದರು’ ಎಂದರು.

ಬಳಿಕ ದಲಿತರ ಕಾಲೊನಿಯ ನೀಲಪ್ಪ ತಿಪ್ಪಣ್ಣನವರ ಅವರ ಮನೆಗೆ ಭೇಟಿ ನಿಡಿ, ಚಹಾ ಹಾಗೂ ಬಿಸ್ಕೆಟ್ ಸೇವಿಸಿದರು. ಬಳಿಕ ನಾಗೇಂದ್ರನ ಮಟ್ಟಿಯ ಹಿಂದುಳಿದ ವರ್ಗದ ಬೀರಪ್ಪ ಬಾತೇಪ್ಪ ಅವರ ಮನೆಯಲ್ಲಿ ಭೋಜನ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT