ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಂಗಲ್‌’-‘ಬಾಹುಬಲಿ 2’ ಮಧ್ಯೆ ಯಾವುದೇ ಹೋಲಿಕೆಗಳಿಲ್ಲ: ಅಮೀರ್‌ ಖಾನ್‌

Last Updated 25 ಮೇ 2017, 11:53 IST
ಅಕ್ಷರ ಗಾತ್ರ

ಮುಂಬೈ: ಎಸ್‌.ಎಸ್‌.ರಾಜ್‌ಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಹುಬಲಿ–2’ ವಿಶ್ವದಾದ್ಯಂತ ಬಿಡುಗಡೆಯಾಗಿ ₹1,565 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಇದರ ಬೆನ್ನಲ್ಲೇ 2016ರಲ್ಲಿ ಬಿಡುಗಡೆಯಾದ ಅಮೀರ್‌ ಅಭಿನಯದ ‘ದಂಗಲ್‌’ ಚಿತ್ರ ಇತ್ತೀಚಿಗೆ ಚೀನಾದಲ್ಲಿ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಇದುವರೆಗೂ ₹1,500 ಕೋಟಿ ಹಣ ಗಳಿಸಿದೆ.

ಬಾಹುಬಲಿ–2 ಹಾಗೂ ದಂಗಲ್‌ ಚಿತ್ರಗಳ ನಡುವೆ ಯಾವುದೇ ಹೋಲಿಕೆಗಳಿಲ್ಲ ಎಂದು ದಂಗಲ್‌ ಚಿತ್ರದ ನಟ ಅಮೀರ್‌ ಖಾನ್‌ ತಿಳಿಸಿದ್ದಾರೆ.

ಹಣ ಗಳಿಕೆ ವಿಚಾರದಲ್ಲಿ ದಂಗಲ್‌ ಚಿತ್ರ ಬಾಹುಬಲಿ–2 ಚಿತ್ರವನ್ನು ಹಿಂದಿಕ್ಕಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೀರ್‌ ಖಾನ್‌ ‘ದಂಗಲ್‌ ಚಿತ್ರಕ್ಕೆ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಸಂತಸದ ಸಂಗತಿ. ಆದರೆ, ಇತರೆ ಚಿತ್ರಗಳೊಂದಿಗೆ ದಂಗಲ್‌ ಚಿತ್ರವನ್ನು ಹೋಲಿಕೆ ಮಾಡಿಲ್ಲ’ ಎಂದಿದ್ದಾರೆ.

‘ನಾನು ಬಾಹುಬಲಿ–2 ಚಿತ್ರವನ್ನು ವೀಕ್ಷಿಸಿಲ್ಲ. ಆದರೆ, ಹೆಚ್ಚು ಯಶಸ್ಸನ್ನು ಗಳಿಸಿದ ಚಿತ್ರವಾಗಿದ್ದು, ಹೆಚ್ಚು ಉತ್ತಮ ವಿಚಾರಗಳು ಇರುವುದಾಗಿ ಕೇಳಿದ್ದೇನೆ’ ಎಂದಿರುವ ಅಮೀರ್‌ ಖಾನ್‌, ಬಾಹುಬಲಿ–2 ಚಿತ್ರ ನಿರ್ದೇಶಕ ರಾಜ್‌ಮೌಳಿ ಸೇರಿದಂತೆ ಚಿತ್ರತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT