ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ನೀಡಲಿ ‘ಲಿವಿಂಗ್‌ ರೂಂ’

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಮನೆ ಮಂದಿಯೆಲ್ಲ ನೆಮ್ಮದಿಯಿಂದ ಕಾಲ ಕಳೆಯುವ ತಾಣ ಲಿವಿಂಗ್ ಕೋಣೆ. ಇಲ್ಲಿ ಸದಾ ಖುಷಿಯೇ ತುಂಬಿರಬೇಕು. ಹಾಗಿದ್ದರೆ ಈ ಕೋಣೆ ಮನೆಯ ಯಾವ ದಿಕ್ಕಿನಲ್ಲಿರಬೇಕು, ಎಲ್ಲೆಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದಕ್ಕೆ ವಾಸ್ತುವಿನಲ್ಲಿ ಕೆಲವು ನಿಯಮಗಳಿವೆ.

* ಲಿವಿಂಗ್‌ ರೂಮ್‌  ಮನೆಯ ಪೂರ್ವ  ಅಥವಾ ಉತ್ತರ ದಿಕ್ಕಿನಲ್ಲಿರಲಿ.

* ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಟೀವಿ ಇರಿಸಬೇಕು.

* ಪೂರ್ವ ಅಥವಾ ಈಶಾನ್ಯದಲ್ಲಿ ಅಕ್ವೇರಿಯಂ ಇರಿಸಿ.

* ನೈಋತ್ಯ ಅಥವಾ ಪಶ್ಚಿಮದಲ್ಲಿ ಮೆಟ್ಟಿಲುಗಳಿರಲಿ.

* ಪೂರ್ವ, ಆಗ್ನೇಯ ಅಥವಾ ಉತ್ತರ ದಿಕ್ಕಿನಲ್ಲಿ ದೂರವಾಣಿಯನ್ನು ಇಡಬೇಕು.

* ನೈಋತ್ಯ ಮತ್ತು ವಾಯವ್ಯ ದಿಕ್ಕಿನಲ್ಲಿ ದೂರವಾಣಿ ಇಡಬಾರದು.

* ಕೃತಕ, ಒಣಗಿದ ಹೂವುಗಳನ್ನು ಈ ಕೋಣೆಯಲ್ಲಿ ಇರಿಸಬಾರದು.

* ಏರ್ ಕಂಡಿಷನರ್‌ ದಕ್ಷಿಣ, ವಾಯವ್ಯ, ಪೂರ್ವ ದಿಕ್ಕಿನಲ್ಲಿ ಇರಿಸಬೇಕು.

* ಈಶಾನ್ಯ ದಿಕ್ಕಿನಲ್ಲಿ ದೇವರ ಚಿತ್ರ, ಪೇಂಟಿಂಗ್‌ ಇರಿಸಬಹುದು.

* ಗೋಡೆಗಳಿಗೆ ಬಿಳಿ, ತಿಳಿ ಹಳದಿ, ನೀಲಿ ಹಸಿರು ಬಣ್ಣವನ್ನು ಬಳಿಯಬೇಕು.

* ಕಪ್ಪು ಮತ್ತು ಕೆಂಪು ಬಣ್ಣವನ್ನು ಗೋಡೆಗೆ ಹಚ್ಚಬಾರದು.

* ಈಶಾನ್ಯ ಭಾಗ ಯಾವಾಗಲೂ ಸ್ವಚ್ಛ ಮತ್ತು ಖಾಲಿಯಾಗಿರಬೇಕು.

* ಈಶಾನ್ಯ ಭಾಗದ ಕಿಟಕಿಗೆ ತಿಳಿ ಬಣ್ಣ, ನೈಋತ್ಯಕ್ಕೆ ದಪ್ಪ ಕರ್ಟನ್‌ ಹಾಕಬೇಕು.

* ಕಾರಂಜಿ ಕೋಣೆಯ ಉತ್ತರ ಭಾಗದಲ್ಲಿರಬೇಕು.

* ಕೋಣೆಯಲ್ಲಿ ಆಯತ ಅಥವಾ ಚೌಕಾಕಾರದ ಪೀಠೋಪಕರಣಗಳಿರಲಿ.

(ಮೂಲ: ವಾಸ್ತು ಶಾಸ್ತ್ರ ಗುರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT