ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗನ್ ಶತಕ: ಇಂಗ್ಲೆಂಡ್‌ಗೆ ಜಯ

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಲೀಡ್ಸ್‌ (ಎಎಫ್‌ಪಿ): ನಾಯಕ ಇಯಾನ್ ಮಾರ್ಗನ್ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್‌ ತಂಡವು ಇಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 72 ರನ್‌ಗಳಿಂದ ಜಯಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ  ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ   339 ರನ್‌ ಗಳಿಸಿತು.  ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 45 ಓವರ್‌ಗಳಲ್ಲಿ 267 ರನ್‌ಗಳಿಗೆ ಆಲೌಟಾಯಿತು. ಆರಂಭಿಕ ಆಟಗಾರ ಹಾಶಿಮ್ ಆಮ್ಲಾ ಮತ್ತು ಮಧ್ಯಮ ಕ್ರಮಾಂಕದ ಫಾಫ್ ಡು ಪ್ಲೆಸಿ  ಅವರ ಅರ್ಧಶತಕಗಳು ವ್ಯರ್ಥವಾದವು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ಮೂರು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.

ನಂತರ ಹೇಲ್ಸ್‌ ಮತ್ತು ಜೋ ರೂಟ್ ತಂಡವನ್ನು ನೂರರ ಗಡಿ ದಾಟಿಸಿದರು. ಇವರಿಬ್ಬರು  ಔಟಾದ ಬಳಿಕ ಕ್ರೀಸ್‌ಗೆ ಬಂದ ಮಾರ್ಗನ್‌ 93 ಎಸೆತಗಳಲ್ಲಿ 107 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್ಸ್ ಮತ್ತು ಏಳು ಬೌಂಡರಿಗಳು ಇದ್ದವು. ಏಳನೇ ಕ್ರಮಾಂಕದ ಮೊಯಿನ್ ಅಲಿ 51 ಎಸೆತಗಳಲ್ಲಿ  77  ರನ್‌ಗಳನ್ನು ಗಳಿಸಿದರು. ಅದರಲ್ಲಿ ಐದು ಸಿಕ್ಸರ್ ಮತ್ತು ಐದು ಬೌಂಡರಿಗಳಿದ್ದವು. ಅವರು ತಂಡ ವು 300ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 339 (ಅಲೆಕ್ಸ್ ಹೇಲ್ಸ್‌ 61, ಇಯಾನ್ ಮಾರ್ಗನ್‌ 107, ಮೊಯಿನ್‌ ಅಲಿ ಔಟಾಗದೆ 77; ಕ್ರಿಸ್‌ ಮೋರಿಸ್‌ 61ಕ್ಕೆ2); ದಕ್ಷಿಣ ಆಫ್ರಿಕಾ: 44.6 ಓವರ್‌ಗಳಲ್ಲಿ 267ಕ್ಕೆ ಆಲೌಟ್‌ (ಹಾಶಿಮ್ ಆಮ್ಲಾ 73, ಫಾಫ್‌ ಡು ಪ್ಲೆಸಿಸ್‌ 67, ಎ.ಬಿ. ಡಿವಿಲಿಯರ್ಸ್‌ 45; ಕ್ರಿಸ್ ಓಕ್ಸ್‌ 38ಕ್ಕೆ4, ಆದಿಲ್ ರಶೀದ್‌ 69ಕ್ಕೆ2, ಮೊಯಿನ್ ಅಲಿ 50ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 72 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT