ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕೂಟ ಹಗರಣ: ಇಬ್ಬರಿಗೆ ಜೈಲು

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಏಳು ವರ್ಷಗಳ ಹಿಂದೆ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾ ಕೂಟದ ಹಗರಣದಲ್ಲಿ ಆರೋಪಿಗ ಳಾಗಿದ್ದ ಇಬ್ಬರು ಅಧಿಕಾರಿಗಳಿಗೆ  ಎರಡೂವರೆ ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಈ ಪ್ರಕರಣದ ವಿಚಾರಣೆ ನಡೆ ಸುತ್ತಿರುವ ವಿಶೇಷ ನ್ಯಾಯಾಲಯದ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಗುರುವಾರ   ತೀರ್ಪು ನೀಡಿದ್ದಾರೆ.  ತಲ್‌ಕಟೋರಾ ಮತ್ತು ಶಿವಾಜಿ ಕ್ರೀಡಾಂಗಣಗಳ ನವೀಕರಣ  ದ ಗುತ್ತಿಗೆ ಪಡೆದಿದ್ದ ಮುಂಬೈನ ಸಂಸ್ಥೆಯ ನಿರ್ದೇಶಕರಾದ ರಾಜಾ ಅದೇರಿ (86) ಮತ್ತು  ಉದಯಶಂಕರ್ ಭಟ್ (59) ಅವರಿಗೆ ಶಿಕ್ಷೆ ವಿಧಿಸಲಾಗಿದೆ.  ಅವ ರಿಬ್ಬರಿಗೂ ತಲಾ ₹ 5 ಲಕ್ಷ ಮತ್ತು ಸಂಸ್ಥೆಗೆ ₹ 10 ಲಕ್ಷ ದಂಡ ಕೂಡ ಹಾಕಲಾಗಿದೆ.

‘ಇಬ್ಬರಿಗೂ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳು ಇವೆ. ಆದ್ದರಿಂದ    ಅವರಿಗೆ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಲಾ ಗಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐವರ ಮೇಲೆ ಆರೋಪಪಟ್ಟಿ ಸಲ್ಲಿಸಿತ್ತು. ಅದರಲ್ಲಿ ನವದೆಹಲಿ ಮಹಾ ನಗರಪಾಲಿಕೆಯ ಅಧೀಕ್ಷಕ ಎಂಜಿನಿ ಯರ್ ಆರ್‌.ಎಸ್. ಠಾಕೂರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಕೆ. ಗುಲಾಟಿ ಅವರನ್ನು ಕೆಲವು ದಿನಗಳ ಹಿಂದೆ ಖುಲಾಸೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT