ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಪಾಕ್‌ನಲ್ಲಿ ಬಿಡುಗಡೆ?

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಲಾಹೋರ್‌ : ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌  ಅವರ ಜೀವನಾಧಾರಿತ ‘ಸಚಿನ್‌: ಎ  ಬಿಲಿಯನ್‌   ಡ್ರೀಮ್ಸ್‌’  ಚಲನಚಿತ್ರವನ್ನು, ಸೆನ್ಸಾರ್‌ ಮಂಡಳಿ ಅನುಮತಿ ನೀಡಿದರೆ ಪ್ರದರ್ಶಿಸಲು ಪಾಕಿಸ್ತಾನದ ಪ್ರದರ್ಶಕರು ಉತ್ಸುಕರಾಗಿದ್ದಾರೆ.

‘ಬಾಹುಬಲಿ 2’ ಮತ್ತು ‘ಹಾಫ್‌ ಗರ್ಲ್‌ಫ್ರೆಂಡ್‌’ ಚಿತ್ರಗಳು ಇಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿವೆ.  ‘ಸಚಿನ್‌...’ ಚಿತ್ರವನ್ನೂ ನಾವು ಪ್ರದರ್ಶಿಸಲು ಬಯಸಿದ್ದೇವೆ. ಆದರೆ,  ಅದು ಸೆನ್ಸಾರ್‌ ಮಂಡಳಿಯ ಒಪ್ಪಿಗೆ ಮೇಲೆ ನಿಂತಿದೆ’ ಎಂದು ಪಾಕಿಸ್ತಾನ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಜೊರೈಜ್‌ ಲಷರಿ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿರುವ ಎಲ್ಲ ಭಾರತೀಯ ಚಲನಚಿತ್ರಗಳೂ ಉತ್ತಮ ಗಳಿಕೆ ಕಂಡಿವೆ’ ಎಂದು ಅವರು ಹೇಳಿದ್ದಾರೆ. ಆದರೆ, ‘ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಪ್ರದರ್ಶಕರಿಂದ ಯಾವುದೇ ಬೇಡಿಕೆ  ಬಂದಿಲ್ಲ. ಹಾಗಾಗಿ ಇದು ಪಾಕಿಸ್ತಾನದಲ್ಲಿ ಬಿಡುಗಡೆಯಾಗುವುದು ಅನುಮಾನ’ ಎಂದು ‘ಸಚಿನ್‌...’ ಚಿತ್ರದ ಹಂಚಿಕೆದಾರ ಅನಿಲ್‌  ಥದಾನಿ ಹೇಳಿದ್ದಾರೆ.

ಈ ಚಿತ್ರ ಪಾಕಿಸ್ತಾನದಲ್ಲಿ ಬಿಡುಗಡೆ ಆಗದೇ ಇರುವುದಕ್ಕೆ ಎರಡೂ ದೇಶಗಳ ಮಧ್ಯೆ ಉಂಟಾಗಿರುವ ರಾಜಕೀಯ ಉದ್ವಿಗ್ನ ಸ್ಥಿತಿ ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT