ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಾಗದ ಸಾಲ: ಹೊರಲಾಗದ ಹೊರೆ

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ಕ್ಷೇತ್ರದ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

2014ರ ಜೂನ್‌ನಲ್ಲಿ ₹2.34 ಲಕ್ಷ  ಕೋಟಿ ಇದ್ದ ವಸೂಲಾಗದ ಸಾಲದ ಪ್ರಮಾಣ 2016ರ ಡಿಸೆಂಬರ್‌ ಹೊತ್ತಿಗೆ ₹6.46 ಕೋಟಿಗೆ ಏರಿದೆ.

‘ವಸೂಲಾಗದ ಸಾಲ ಇಷ್ಟೇ ಅಲ್ಲ. ಮರು ಹೊಂದಾಣಿಕೆ ಆದ ಸಾಲ, ರದ್ದು ಮಾಡಲಾದ ಸಾಲ, ವಸೂಲಾಗದ ಸಾಲ  ಎಂದು ಇನ್ನೂ ಗುರುತಿಸಲಾಗದ ಸಾಲಗಳನ್ನು ಪರಿಗಣಿಸಿದರೆ ಈ ಮೊತ್ತ ಸುಮಾರು ₹20 ಲಕ್ಷ ಕೋಟಿಗಳಾಗಬಹುದು’ ಎಂದು ಆರ್‌ಬಿಐನ ನಿವೃತ್ತ ಉಪ ಗವರ್ನರ್‌ ಕೆ.ಸಿ. ಚಕ್ರವರ್ತಿ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 2015–16ರಿಂದ ನಂತರದ ನಾಲ್ಕು ವರ್ಷಗಳಲ್ಲಿ ಒಟ್ಟು ₹70 ಸಾವಿರ ಕೋಟಿ ನೆರವು ನೀಡಲು  ಹಣಕಾಸು ಸಚಿವಾಲಯ ನಿರ್ಧರಿಸಿದೆ. ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾದ ‘ಬಾಸೆಲ್‌–3’ ನಿಯಮ ಅಳವಡಿಸಿಕೊಳ್ಳಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ (ಪಿಎಸ್‌ಬಿ)  ಒಟ್ಟು ₹1.8 ಲಕ್ಷ ಕೋಟಿ ಬಂಡವಾಳದ ಅಗತ್ಯವಿದೆ. ಕೇಂದ್ರ ಸರ್ಕಾರ ಕೇವಲ ₹70 ಸಾವಿರ ಕೋಟಿ ನೀಡುತ್ತದೆ. ಇನ್ನುಳಿದ ₹1.10 ಲಕ್ಷ ಕೋಟಿ ಬಂಡವಾಳವನ್ನು ಮಾರುಕಟ್ಟೆಯಿಂದ ಸಂಗ್ರಹಿಸಬೇಕಿದೆ.

ಪುನಶ್ಚೇತನಕ್ಕೆ ಹಲವು ಕ್ರಮಗಳು
₹70 ಸಾವಿರ ಕೋಟಿ
ಕೇಂದ್ರ ಸರ್ಕಾರದ ಪಾಲು
₹25 ಸಾವಿರ ಕೋಟಿ 2015–16ರ ಅನುದಾನ
₹25 ಸಾವಿರ ಕೋಟಿ 2016–17ರ ಅನುದಾನ
₹10 ಸಾವಿರ ಕೋಟಿ 2017–18ರ ಅನುದಾನ
₹10 ಸಾವಿರ ಕೋಟಿ 2018–19ರ ಅನುದಾನ
*
ಬಡ್ಡಿದರ ನಿಗದಿ ಅಧಿಕಾರ ಮೊಟಕು
ಬಡ್ಡಿದರ ನಿಗದಿ ಮತ್ತು ಹಣದುಬ್ಬರ ನಿಯಂತ್ರಣದಂಥ ಮಹತ್ವದ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಆರ್‌ಬಿಐ ಗವರ್ನರ್ ನೇತೃತ್ವದ ಆರು ಸದಸ್ಯರ ‘ಹಣಕಾಸು ನೀತಿ ಸಮಿತಿ’ ರಚನೆ ಮಾಡಿದೆ.   ಸಮಿತಿ ರಚನೆಯಿಂದ ಬಡ್ಡಿದರ ನಿಗದಿ ಮಾಡುವ ಆರ್‌ಬಿಐ ಅಧಿಕಾರ ಮೊಟಕುಗೊಂಡಿದೆ.

ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಕುಸಿತ
2016– 2017ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಶೇ 5.1ಕ್ಕೆ ಇಳಿಕೆ ಕಂಡಿದ್ದು, ₹3.81 ಲಕ್ಷ ಕೋಟಿಗಳಷ್ಟು ಸಾಲ ನೀಡಿವೆ. ಇದು ಕಳೆದ 60 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದ್ದಾಗಿದೆ. 2015–16ರಲ್ಲಿ ಸಾಲ ನೀಡಿಕೆ ಸಾಮರ್ಥ್ಯ ಶೇ 10.63 ರಷ್ಟಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ. ಮಾರ್ಚ್‌ 31ರ ಅಂತ್ಯಕ್ಕೆ ಬ್ಯಾಂಕ್‌ಗಳು ನೀಡಿದ  ಒಟ್ಟು ಸಾಲದ ಮೊತ್ತ ₹78.81 ಲಕ್ಷ ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT